ತ್ಯಾಗ ಬಲಿದಾನಗಳ ಪ್ರತೀಕ : ಬಕ್ರಿÃದ ಹಬ್ಬ

0
7
loading...

ತ್ಯಾಗ ಬಲಿದಾನಗಳ ಪ್ರತೀಕ : ಬಕ್ರಿÃದ ಹಬ್ಬ
ಕನ್ನಡಮ್ಮ ಸುದ್ದಿ- ಬೈಲಹೊಂಗಲ: ಪಟ್ಟಣದ ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಂ ಬಾಂದವರು ಶ್ರದ್ಧೆ, ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಕ್ರಿÃದ್ ಹಬ್ಬವನ್ನು ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಿದರು. ಶ್ವೆÃತಧಾರಿ ಮುಸ್ಲಿಂ ಬಾಂದವರು ಬೃಹತ್ ಮೆರವಣಿಗೆ ತೆರಳಿ ಅಲ್ಲಾನ ಪ್ರಾರ್ಥನೆ ಮಾಡಿದರು. ಬೆಲ್ಲದ ಕೂಟ, ಗೊಂಬಿ ಗುಡಿ, ಜವಳಿಕೂಟ, ಬಜಾರ ರಸ್ತೆ, ರಾಯಣ್ಣ ವೃತ್ತ ಮಾರ್ಗವಾಗಿ ಇಂಚಲ ಕ್ರಾಸ್ ಈದ್ಗಾ ಮೈದಾನಕ್ಕೆ ತೆರಳಿದರು. ಶಿಸ್ತಿನಿಂದ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮುಸ್ಲಿಂ ಮಕ್ಕಳು ಹೊಸ ಭಟ್ಟೆ ತೊಟ್ಟು ಸಂಭ್ರಮಿಸಿದರು. ಮೌಲಾನಾ ಮುಪ್ತಿ ಅಭಾಸ ಪ್ರಾರ್ಥನೆ ಸಲ್ಲಿಸಿ ಮಾತನಾಡಿ, ಮನಶುದ್ಧಿಯಿಂದ ಅಲ್ಲಾನ ಪ್ರಾರ್ಥನೆ ಮಾಡಿ ನೆಮ್ಮದಿಯ ಜೀವನ ಸಾಗಿಸಬೇಕು. ಗಡಿ ಕಾಯುವ ಯೋಧರು, ರೈತರು, ಜನ ಸಾಮಾನ್ಯರು ಆರೋಗ್ಯವಂತವಾಗಿ ಬಾಳಿ ನಾಡಿನಲ್ಲಿ ಶಾಂತಿ ನೆಲೆಯುಳ್ಳುವಂತೆ ಬೇಡಿಕೊಳ್ಳಬೇಕು. ಬೈಲಹೊಂಗಲ ನಾಡು ಕೋಮು, ಸೌಹಾರ್ದತೆಗೆ ಹೆಸರಾಗಿರುವ ನಾಡಾಗಿರುವದು ಎಲ್ಲರಿಗೂ ಹೆಮ್ಮೆಯ ಸಂಗತಿ ಆಗಿದೆ ಎಂದರು. ಮೌಲಾನಾ ಇಸಾಕ್, ಮೌಲಾನಾ ಸುಹೇಲ್ ಧರ್ಮ ಬೋಧನೆ ಮಾಡಿದರು. ಮುಸ್ಲಿಂ ಸಮಾಜದ ಮುಖಂಡರುಗಳಾದ ಡಾ.ಐಝಾಜ್ ಬಾಗೇವಾಡಿ, ಬುಡ್ಡೆÃಸಾಬ ಶಿರಸಂಗಿ, ಅಕ್ತರ ತಾಳಿಕೋಟಿ, ಜಿ.ಡಿ.ಬಾಗವಾನ, ನದಾಫ ಸಮಾಜದ ಮುಖಂಡ ಎಂ.ಐ.ನದಾಫ, ಅಬ್ದುಲ್‌ವಹಾಬ ಗದಗ, ಬಾಬುಸಾಬ ಸಂಗೊಳ್ಳಿ, ಅಬ್ದುಲ್‌ರೆಹಮಾನ ಹುಬ್ಬಳ್ಳಿ, ವಕೀಲ ಝಡ್.ಎ.ಗೋಕಾಕ, ಜೆ.ಕೆ.ರೀಝಾ, ರಹೀಮ್ ಸಂಗೊಳ್ಳಿ, ಆರ್.ಎಫ್.ಮಾಗಿ, ಗೌಸ್À ಕಿತ್ತೂರ, ಅನ್ವರ ಲಂಗೋಟಿ, ಆಶೀಫ ಗೋವೆ, ಶರೀಫ ನದಾಫ, ಜಮಶೀದ ನದಾಫ, ರಿಯಾಜ್ ನದಾಫ, ಅಕ್ತರ ಮಲ್ಲಾಪೂರ ಹಾಗೂ ಅನೇಕರು ಇದ್ದರು.

loading...