ತ್ಯಾಜ್ಯ ಬೀಸಾಡುವವರ ಮೇಲೆ ದಂಡ ವಿಧಿಸುವಂತೆ ಸಾರ್ವಜನಿಕರ ಆಗ್ರಹ

0
16
loading...

ಕನ್ನಡಮ್ಮ ಸುದ್ದಿ-ಶಿರಸಿ: ಸ್ವಚ್ಛ ಶಿರಸಿ ಉದ್ದೆÃಶದಿಂದ ಎಲ್ಲೆಂದರಲ್ಲಿ ಕಸ ಹಾಗೂ ತ್ಯಾಜ್ಯ ಬೀಸಾಡುವವರ ಮೇಲೆ ದಂಡ ವಿಧಿಸುವಂತೆ ಸಾರ್ವಜನಿಕರ ಆಗ್ರಹವು `ನಮ್ಮ ಕಸ ನಮ್ಮ ಹೊಣೆ’ ನಾವೇನು ಮಾಡಬಹುದು? ಕುರಿತ ಸಾರ್ವಜನಿಕ ಚಿಂತನಾ ಸಭೆಯಲ್ಲಿ ವ್ಯಕ್ತವಾಗಿದೆ.
ಸ್ವಚ್ಛ ಶಿರಸಿ ಸ್ವಯಂ ಪ್ರಜ್ಞೆ ಧ್ಯೆÃಯವಾಖ್ಯದೊಂದಿಗೆ ನಡೆದ ಚಿಂತನಾ ಸಭೆಯಲ್ಲಿ ಪರಿಸರ ಕಾರ್ಯಕರ್ತರು, ಸಾಮಾಜಿಕ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು, ದೇವಾಲಯಗಳ ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು, ವಕೀಲರು, ಶಿಕ್ಷಕರು, ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೆÃತ್ರದ ಪ್ರಮುಖರು ಪಾಲ್ಗೊಂಡು ಸ್ವಚ್ಛ ಶಿರಸಿಗೆ ಆಗಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆ ನೀಡಿದರು.

ಸ್ವಚ್ಛತೆಯಲ್ಲಿ ಸಿಂಗಾಪುರ ವಿಶೇಷ ಸ್ಥಾನ ಪಡೆದಿದೆ. ಎಲ್ಲೆಂದರಲ್ಲಿ ಕಸ ಬೀಸಾಡಿದರೆ ದಂಡ ಹಾಕುವ ಭಯದಿಂದ ಸ್ವಚ್ಛತೆ ಹೆಚ್ಚಿದೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಕಾರ್ಯವಾಗುತ್ತಿದ್ದು, ಕಸ ವಿಲೇವಾರಿಗೂ ಅನುಕೂಲವಾಗಿದೆ. ಪ್ರತೀ ಹತ್ತಡಿಗೆ ಒಂದರಂತೆ ಡಸ್ಟಿ÷್ಬನ್ ಇಟ್ಟಿದ್ದು, ಯಂತ್ರಗಳ ಬಳಕೆಯಿಂದ ಸ್ವಚ್ಛತೆ ಜಾರ್ಯ ಮಾಡಲಾಗುತ್ತಿದೆ. ಈ ವ್ಯವಸ್ಥೆ ಶಿರಸಿಗೂ ಬರಬೇಕು ಎಂದು ಸ್ವಚ್ಛತೆ ಕುರಿತು ಸಿಂಗಾಪುರ ಭೇಟಿ ನೀಡಿದ ಪೌರ ಕಾರ್ಮಿಕರು ಮಾಹಿತಿ ನೀಡಿದರು.
ಉಪನ್ಯಾಸಕ ಗಣೇಶ ಹೆಗಡೆ ಮಾತನಾಡಿ, ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಪ್ರಮಾಣ ಅತಿಯಾಗಿದೆ. ಹಾಗಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪುಡಿ ಮಾಡಿ ಟಾರ್ ಗೆ ಸೇರಿಸಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಬಳಸುವ ಕಾರ್ಯವಾಗಬೇಕು. ಪ್ಲಾಸ್ಟಿಕ್ ಬಳಕೆ ತಪ್ಪಿಸಲು ಸಾಧ್ಯವಿಲ್ಲದ ಕಾರಣ ಬಳಕೆಯ ಮೇಲೆ ಮಿತಿ ಹಾಕಿಕೊಳ್ಳುವ ಅರಿವು ಮೂಡಿಸಬೇಕು. ಆಹಾರ ತ್ಯಾಜ್ಯ ವಿಂಗಡಿಸಿ ಬಯೋಗ್ಯಾಸ್ ತಯಾರಿಸಬೇಕು. ಇವನ್ನು ಅಳವಡಿಸಿಕೊಂಡರೆ ತ್ಯಾಜ್ಯ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು. ನಗರದ ಸೌಂದರ್ಯೀಕರಣ ಹಿನ್ನೆಲೆಯಲ್ಲಿ ಕಲಾತ್ಮಕ ಚಿತ್ರಗಳ ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಅಂಗಡಿಕಾರರು, ಕಟ್ಟಡ ಮಾಲಿಕರಿಗೆ ಅವರ ಹೊಣೆಗಾರಿಕೆ ಎಚ್ಚರಿಸಬೇಕು. ವ್ಯವಸ್ಥಿತವಾದ ದಂಡ ವಿಧಿಸುವ ಪದ್ದತಿ ಜಾರಿಯಾಗಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿರಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಮಾತನಾಡಿ, ನಗರದಲ್ಲಿ ಕಸದ ಸಂಸ್ಕöÈತಿಯ ವಿಜ್ರಂಭಣೆಯಾಗಿದೆ. ಬೇಕುಬೇಕಾದಲ್ಲಿ ಕಸ ಚೆಲ್ಲಿದರೆ ಊರಿನ ಆರೋಗ್ಯ ಹದಗೆಡುತ್ತದೆ. ಈ ಬಗೆಗೆ ಸಾರ್ವಜನಿಕರು ಹಾಗೂ ಅಂಗಡಿಕಾರರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

loading...