ದಾನಿಗಳು ನೀಡಿದ ಗ್ರಂಥಗಳನ್ನು ವ್ಯವಸ್ಥಿತವಾಗಿ ಇರಿಸಿ: ಶ್ರೀಗಳು

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ಇಂದಿನ ವೈಜ್ಞಾನಿಕ ಯುಗದಲ್ಲಿ ಗ್ರಂಥಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಅವುಗಳನ್ನು ಓದುಗರಿಗೆ ಒದಗಿಸುವಲ್ಲಿ ನಾನಾ ರೀತಿಯ ತಂತ್ರಜ್ಞಾನಗಳು ಬಳಕೆಯಲ್ಲಿ ಬಂದಿವೆ ಎಂದು ಬೆಳಗಾವಿಯ ಶ್ರೀ ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ದರಾಮ ಮಹಾಸ್ವಾಮಿಜಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಈಶ್ವರ ಕಮ್ಮಾರ ಸಾಹಿತ್ಯ ಸಾಂಸ್ಕೃತಿಕ ಕಲಾ ಟ್ರಸ್ಟ್‌ ವತಿಯಿಂದ ಏರ್ಪಡಿಸಿದ್ದ 19 ನೇ ವಾರ್ಷಿಕ ವಚನೋತ್ಸವ, ಗ್ರಂಥಗಳ ಲೋಕಾರ್ಪಣೆ ಮತ್ತು ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳೆಯ ಕಾಲದ ತಾಳೆಗರಿಗಳಲ್ಲಿ, ಗೆದ್ದಲು ಹತ್ತುತ್ತಿರುವ ಅಮೂಲ್ಯ ಗ್ರಂಥಗಳಿಗೆ ಹಾಗು ಜೀರ್ಣಗೊಂಡ ಗ್ರಂಥಗಳಿಗೆ ಜೀವದಾನ ನೀಡುವಲ್ಲಿ ಮತ್ತು ಬೃಹದಾಕಾರದ ಗ್ರಂಥಗಳನ್ನು ಪುಟ್ಟ ಆಕಾರದಲ್ಲಿ ರೂಪಿಸಿ ಅವುಗಳನ್ನು ಪರದೆಯ ಮೇಲೆ ದೊಡ್ಡದಾಗಿ ಮಾಡಿಕೊಂಡು ಸುಲಭವಾಗಿ ಓದಿ ತಿಳಿದುಕೊಳ್ಳುವ ನೂತನ ತಂತ್ರಜ್ಞಾನಗಳು ಬಳಕೆಯಲ್ಲಿ ಬಂದಿವೆ ಎಂದರು. ಶ್ರೀ ಮಠದಿಂದ ವಚನ ಸಂಶೊಧಕರಿಗೆ ಪ್ರಾಮುಖ್ಯತೆ ವಹಿಸಿ ಸ್ಥಾಪಿಸಿದ ಗ್ರಂಥಾಲಯದಲ್ಲಿ ಲಕ್ಷಕ್ಕೂ ಮಿಕ್ಕಿ ಗ್ರಂಥಗಳು ಇದು,್ದ ಆಯಾ ಗ್ರಂಥಗಳ ದಾನಿಗಳು ನೀಡಿದ ಗ್ರಂಥಗಳನ್ನು ವ್ಯವಸ್ಥಿತವಾಗಿ ಇರಿಸಿ ಓದುಗರಿಗೆ ಒದಗಿಸಲಾಗುತ್ತಿದೆ ಎಂದರು.
ಅಕ್ಯುಟೆಕ್‌ ಎಂಟರ್‌ಪ್ರಾಯ್‌ಜಿಸ್‌ ಕಂಪನಿಯ ಮಾರ್ಕೇಟಿಂಗ್‌ ಮುಖ್ಯಸ್ಥವಿಜಯಕುಮಾರ ಕಮ್ಮಾರ ಅವರು ಬಸವಣ್ಣ ದಿ ಗ್ರೇಟ್‌ ಮ್ಯಾನ್‌ ಬಿಹೈಂಡ್‌ ಮೈಕ್ರೋ ಸೋಸಿಯೋ ಎಕಾನಾಮಿ ಎಂಬ ವಿಷಯ ಉಪನ್ಯಾಸ ನೀಡಿದರು. ಹತ್ತು ಗ್ರಾಂ ಗಳಿಗೂ ಮಿಕ್ಕಿದ ಬಂಗಾರದ ಕವಚದ ರುದ್ರಾಕ್ಷಿ ಮಾಲೆಯನ್ನು ಈಶ್ವರ ಕಮ್ಮಾರ ಅವರಿಗೆ ಶ್ರೀಗಳು ನೀಡಿ ಸನ್ಮಾನಿಸಿದರು. ಈಶ್ವರ ಕಮ್ಮಾರ ಅವರು ರಚಿಸಿದ ಐದು ಗ್ರಂಥಗಳನ್ನು ಸಂಶೋದಕ, ಡಾ. ಶಾಂತಿನಾಥ ದಿಬ್ಬದ ಅವರು ಲೋಕಾರ್ಪಣೆ ಮಾಡಿದರು. ನಾಡೋಜ ಡಾ. ಚೆನ್ನವೀರ ಕಣವಿ ಅದ್ಯಕ್ಷತೆ ವಹಿಸಿದ್ದರು.ಶ್ರೀಮತಿ ಹನುಮಾಕ್ಷಿ ಗೋಗಿ, ಡಾ. ಜಿನದತ್ತ ಹಡಗಲಿ, ಡಾ. ಲಿಂಗರಾಜ ಅಂಗಡಿ, ಉಪಸ್ಥಿತರಿದ್ದರು.

loading...