ದೀವಗಿ ಗ್ರಾಮವು ನನ್ನ ರಾಜಕೀಯ ಗಟ್ಟಿತನಕ್ಕೆ ನೆಲಗಟ್ಟು: ಶಾಸಕ ದಿನಕರ

0
6
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ದೀವಗಿ ಗ್ರಾಮವು ನನ್ನ ರಾಜಕೀಯ ಗಟ್ಟಿತನಕ್ಕೆ ನೆಲಗಟ್ಟು. ಅಲ್ಲದೇ ಇದು ನನ್ನ ರಾಜಕೀಯಕ್ಕೇ ತವರೂರಿನಂತಾಗಿದೆ ಎಂದು ಶಾಸಕ ದಿನಕರ ಕೆ ಶೆಟ್ಟಿ ಹೇಳಿದರು.
ಅವರು ಸೋಮವಾರ ತಾಲೂಕಿನ ದೀವಗಿಯಲ್ಲಿ ದಿನಕರ ಕೆ ಶೆಟ್ಟಿ ಅಭಿಮಾನಿ ಬಳಗದಿಂದ ಆಯೋಜನೆಗೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ದೀವಗಿಯ ಸಂಬಂಧ ನನಗೆ ಇಂದು ನಿನ್ನೆಯದಲ್ಲ. ನಾನು ರಾಜಕೀಯಕ್ಕೆ ಎಂಟ್ರಿ ಕೊಡುವ ಪೂರ್ವದಿಂದಲೂ ಇಲ್ಲಿಯ ಜನರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೆ. ಆ ಸ್ನೇಹ, ಪ್ರೀತಿ ಇಲ್ಲಿಯವರೆಗೂ ಕಾದುಕೊಂಡು ಬಂದಿದ್ದೇನೆ. ಅದರ ಫಲವಾಗಿಯೇ ನಿರಂತರವಾಗಿ ನನಗೆ ಅತಿ ಹೆಚ್ಚು ಮತಗಳನ್ನು ನೀಡುತ್ತ ಬಂದಿದ್ದಾರೆ. ಕಳೆದ ಸಲ ಶಾಸಕನಾದಾಗಲೂ ಹೆಚ್ಚಿನ ಮತಗಳು ಬಂದಿದ್ದವು. ಹಾಗಾಗಿ ದೀವಗಿ ಗ್ರಾಮಕ್ಕೆ ಈ ಹಿಂದಿನ ದಿನಕ್ಕಿಂತಲೂ ಹೆಚ್ಚು ಸೇವೆ ನೀಡಲು ಬದ್ಧನಾಗಿದ್ದೇನೆ. ಇಲ್ಲಿ ಆಗಬೇಕಾದ ಬಹಳ ಮುಖ್ಯವಾದ ಕೆಲಸಗಳನ್ನು ನನ್ನ ಅಧಿಕಾರವಧಿಯಲ್ಲಿ ಖಂಡಿತ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.
ಜಿ ಪಂ ಸದಸ್ಯ ಗಜಾನನ ಪೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಅವರಿಗೆ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಬಿಜೆಪಿ ಮುಖಂಡರಾದ ವಿನೋದ ಪ್ರಭು, ಡಾ ಜಿ ಜಿ ಹೆಗಡೆ, ಎಲ್‌ ಎಸ್‌ ಅಂಬಿಗ, ಉತ್ತಮ ಆರ್‌ ದೇಶಭಂಡಾರಿ, ಅಭಿಮಾನಿ ಬಳಗದ ಗೌರವಾಧ್ಯಕ್ಷ ಜಗದೀಶ ಎಸ್‌ ಭಟ್‌ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಸವಿತಾ ಅಂಬಿಗ ಪ್ರಾರ್ಥಿಸಿದರು. ಅಭಿಮಾನಿ ಬಳಗದ ರಾಘವೇಂದ್ರ ಆರ್‌ ದೇಶಭಂಡಾರಿ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತ ಆರ್‌ ಕೆ ಅಂಬಿಗ ನಿರೂಪಿಸಿದರು. ಡಿಜೆವಿಎಸ್‌ ಪ್ರೌಢಶಾಲಾ ಮುಖ್ಯಾಧ್ಯಾಪಕ ದಯಾನಂದ ದೇಶಭಂಡಾರಿ ವಂದಿಸಿದರು. ಅಭಿಮಾನಿ ಬಳಗದ ಮಂಜುನಾಥ ಎಚ್‌ ಅಂಬಿಗ, ಮಾಬ್ಲೇಶ್ವರ ಆರ್‌ ಅಂಬಿಗ, ನಾರಾಯಣ ಎಸ್‌ ಅಂಬಿಗ, ಗಣೇಶ ಆರ್‌ ದೇಶಭಂಡಾರಿ, ವಿಪುಲ್‌ ದೇಶಭಂಡಾರಿ ಸಹಕರಿಸಿದರು.

loading...