ದುಡಿಯುವ ಶಕ್ತಿ ಬೆಳೆಸಿಕೊಂಡು ಸುಂದರ ಜೀವನ ನಡೆಸಿ: ಸಿದ್ದೆÃಶ್ವರ ಶ್ರಿÃಗಳು

0
7
loading...

ವಿಜಯಪುರ: ಮನುಷ್ಯರಿಗೆ ದುಡಿಯುವ ಶಕ್ತಿ-ಸಾಮರ್ಥ್ಯವನ್ನು ಬೆಳೆಸಿಕೊಂಡು ಸುಂದರ ಜೀವನ ನಡೆಸಬೇಕು ಎಂದು ಜ್ಞಾನಯೋಗಾಶ್ರಮದ ಶ್ರಿÃ ಸಿದ್ದೆÃಶ್ವರ ಮಹಾಸ್ವಾಮಿಗಳು ಹೇಳಿದರು.
ವಿಜಯಪುರ ನಗರದಲ್ಲಿ ಶ್ರಿÃ ವಜ್ರಹನುಮಾನ ದೇವಾಲಯದ ಉದ್ಘಾಟನಾ ಹಾಗೂ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರಿÃಗಳು, ಎರಡನೇಯ ಶನಿವಾರ, ರವಿವಾರ ಹೀಗೆ ಹಾಲಿ-ಡೇಗಳ ಪಟ್ಟಿ ದೊಡ್ಡದಾಗುತ್ತಿದೆ. ಹಾಲಿ-ಡೇ ಅಲ್ಲ ನಮ್ಮ ಜೀವನ ಹೋಲಿ – ಡೇ ಆಗಬೇಕು. ಸುಂದರ ಕಾರ್ಯಗಳ ಮೂಲಕ ಅನುದಿನವನ್ನೂ ಶೃಂಗರಿಸಬೇಕು ಎಂದರು.

ಆಂಜನೇಯ ಶಕ್ತಿಯ ಪ್ರತೀಕ, ಎಂತಹ ಕಾರ್ಯವಿದ್ದರೂ ಸಹಜವಾಗಿಯೇ ಮಾಡುವ ಸಾಮರ್ಥ್ಯ ಹನುಮಂತನಲ್ಲಿತ್ತು. ಆಂಜನೇಯನಿಗೆ ಮುತ್ತು, ರತ್ನ ಯಾವುದೂ ಹಿಡಿಸುವುದಿಲ್ಲ. ಅರಣ್ಯ ಆಂಜನೇಯನ ವಾಸಸ್ಥಾನ, ಆಂಜನೇಯನಿಗೆ ಯಾವುದೇ ಕೀರಿಟ, ಮುತ್ತು, ರತ್ನ ಯಾವುದು ಬೇಡ. ಆಂಜನೇಯ ಭಕ್ತಿಪ್ರಿಯ ಎಂದರು.
ಬೃಹತ್ ಕಡಲನ್ನೆÃ ದಾಟುವ, ಬೃಹತ್ ಬೆಟ್ಟವನ್ನೆÃ ಒಂದೇ ಕೈಯಲ್ಲಿ ಎತ್ತುವ ಸಾಮರ್ಥ್ಯ, ಕಡಲು ದಾಟುವ ಸಾಮರ್ಥ್ಯ ಹನುಮಂತನಿಗೆ ಇತ್ತು. ಅಂತಹ ಆಹಾರ ಬಲದಿಂದಲೇ ಆತನಲ್ಲಿ ಶಕ್ತಿ-ಸಾಮರ್ಥ್ಯ ಇತ್ತು, ಈ ಕಾರಣಕ್ಕಾಗಿಯೇ ಹನುಮಂತನಿಗೆ ಇಷ್ಟವಾಗುವ ಆಹಾರ ಸೇವನೆ ಮಾಡಬೇಕು ಎಂದು ಕರೆ ನೀಡಿದರು.

ಬದುಕು ಒಳ್ಳೆಯ ಫಲ ಕೊಡಬೇಕಾದರೆ, ದೇಹದಲ್ಲಿ ಶಕ್ತಿ ಸಾಮರ್ಥ್ಯ ಇರಬೇಕು ಎಂದು ಶ್ರಿÃಗಳು ಹೇಳಿದರು.
ಮಲ್ಲಿಕಾರ್ಜುನ ಕಟ್ಟಿಮನಿ, ಗುರುರಾಜ ಅಮಾತೆ, ಹೇಮಾ ಬೆನಕಟ್ಟಿ, ಅನುಸೂಯಾ ಹಂಚಿನಾಳ, ಲಕ್ಷಿö್ಮÃ ನರಗುಂದ, ಜ್ಯೊÃತಿ ಪಾಟೀಲ, ಸುನೀತಾ ಜಹಾಗೀರದಾರ, ಲಕ್ಷಿö್ಮÃ ದೊಡಮನಿ, ತ್ರಿವೇಣಿ ಕಟ್ಟಿಮನಿ, ಬಬಿತಾ ಪಾಟೀಲ, ಉಮಾ ಪಾಟೀಲ ಉಪಸ್ಥಿತರಿದ್ದರು.

loading...