ದೆಹಲಿ ಮೆಟ್ರೋ ನಿಲ್ದಾಣಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಹೆಸರು;ಕೇಂದ್ರ ಸಚಿವ ಅನಂತ್ ಕುಮಾರ್ ಸಂತಸ

0
7
loading...

ದೆಹಲಿ/ಬೆಂಗಳೂರು:ದೆಹಲಿಯ ಮೋತಿಬಾಗ್‍ನ ಕರ್ನಾಟಕ ಸಂಘದ ಪಕ್ಕದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರ ಯ್ಯ ಹೆಸರನ್ನು ಇಟ್ಟಿರುವುದಕ್ಕೆ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ನವದೆಹಲಿಯ ಬಾರಾ ಖಾಂಭಾ ಮೆಟ್ರೋ ನಿಲ್ದಾಣದಲ್ಲಿಂದು ನಡೆದ ಸರ್.ಎಂ.ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು,ರಾಜ್ಯದ ಆರೂವರೆ ಕೋಟಿ ಜನರ ಪರವಾಗಿ ಕನ್ನಡದಲ್ಲಿ ಅಭಿನಂದನೆ ಸಲ್ಲಿಸಿ ವಿಶೇಷತೆ ಮೆರೆದರು.
ದೇಶದಲ್ಲಿ ಮೆಟ್ರೋ ರೈಲಿನ ಯೋಜನೆ ಸಾಕಾರಗೊಳ್ಳಲು ಮೊದಲನೇ ದಿನದಿಂದಲೂ ಜಪಾನ್ ನೀಡುತ್ತಿರುವ ಸಹಾಯಕ್ಕೆ ಜಪಾನ್ ದೇಶದ ರಾಯಭಾರಿಗೆ ತಮ್ಮ ಅಭಿನಂದನೆ ಸಲ್ಲಿಸಿದರು.
ಸರ್.ಎಂ.ವಿಶ್ವೇಶ್ವರಯ್ಯ ಕರ್ನಾಟಕದವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ.ಅವರು ಮೈಸೂರಿನ ದಿವಾನರಾಗಿ ಹಾಗೂ ಜನಪ್ರಸಿದ್ಧ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.ವಿಶ್ವದಾದ್ಯಂತ ಸುಮಾರು 70ಕ್ಕೂ ಹೆಚ್ಚು ನೀರಾವರಿ ಯೋಜನೆಗಳ ಹರಿಕಾರ ಅವರು ಎಂದು ಶ್ಲಾಘಿಸಿದರು.
ಕರ್ನಾಟದ ರಾಜ್ಯದ ಅಳಿಯ ಕೇಂದ್ರದ ನಗರಾಭಿವೃದ್ಧಿ ಮಂತ್ರಿ ಹರದೀಪ್ ಸಿಂಗ್ ಪೂರಿ ಇಂದು ಈ ಮೆಟ್ರೋ ನಿಲ್ದಾಣಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಹೆಸರನ್ನಿಡುವ ಮೂಲಕ ಆರೂವರೆ ಕೋಟಿ ಜನರಿಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
2001ನೇ ಸಾಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರದಲ್ಲಿ ತಾವು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಚುಕ್ಕಾಣಿ ಹಿಡಿದಿದ್ದನ್ನು ನೆನೆಪಿಸಿಕೊಂಡ ಅವರು, ರಾಷ್ಟ್ರೀಯ ನಗರ ಸಾರಿಗೆ ನೀತಿ ರೂಪಿಸಲು ಜವಾಬ್ದಾರಿಯನ್ನು ನೀಡಲಾಗಿತ್ತು.
ಆ ನೀತಿಯಲ್ಲಿ ದೆಹಲಿ, ಬೆಂಗಳೂರು, ಕೊಚ್ಚಿನ್,ಹೈದರಾಬಾದ್,ಅಹ್ಮದಾಬಾದ್,ಲಕ್ನೋ ಮತ್ತು ಮುಂಬೈ ನಗರಗಳಲ್ಲಿ ಮೆಟ್ರೋ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು. ದೆಹಲಿ ಮೆಟ್ರೋ ಯೋಜನೆ ಅಟಲ್ ಬಿಹಾರಿ ವಾಜಪೇಯಿ ಅವರಿಂದಲೇ ಉದ್ಘಾಟನೆಗೊಂಡಿದ್ದನ್ನು ಸ್ಮರಿಸಿಕೊಂಡರು.
ರಾಷ್ಟ್ರಿಯ ನಗರ ಸಾರಿಗೆ ನೀತಿಯ ರಚನೆಯನ್ನು ಪ್ರಾರಂಭಿಸಿದ ವ್ಯಕ್ತಿಯಾಗಿ, ಇಂದು ದೇಶದಲ್ಲಿ 1 ರಿಂದ 500 ಕಿಲೋ ಮೀಟರ್‍ಗಳಿಗೂ ಹೆಚ್ಚು ಮೆಟ್ರೋ ಮಾರ್ಗ ರಚನೆಯಾಗಿರುವುದನ್ನು ನೋಡಲು ಸಂತಸವಾಗುತ್ತದೆ.ಈ 500 ಕಿಲೋ ಮೀಟರ್ 1000 ಕಿಲೋ ಮೀಟರ್‍ಗಳನ್ನು ತಲುಪಲಿ ಎಂದು ಹಾರೈಸಿದರು.

loading...