ದೇವರಾಜ ಅರಸರು ಬಡವರಿಗೆ ಬೆಳಕನ್ನು ನೀಡಿದವರು: ಗಿರೀಶ ಸ್ವಾದಿ

0
3
loading...

ದೇವರಾಜ ಅರಸರು ಬಡವರಿಗೆ ಬೆಳಕನ್ನು ನೀಡಿದವರು: ಗಿರೀಶ ಸ್ವಾದಿ
ಕನ್ನಡಮ್ಮ ಸುದ್ದಿ-ಸವದತ್ತಿ : ಡಿ. ದೇವರಾಜ ಅರಸ ರವರು ವ್ಯಕ್ತಿಯಾಗಿರಲಿಲ್ಲ ಬಡಜನರಿಗೆ ಶಕ್ತಿಯಾಗಿ ಜೀವನ ಸಾಗಿಸಿದ್ದರು. ಉನ್ನತ ಹುದ್ದೆಯನ್ನು ಏರಿ ಬಡಜನರಿಗೆ ಹಿಂದುಳಿದವರಿಗೆ ದೀನ ದಲಿತರಿಗೆ ಆಶಾ ಕಿರಣರಾಗಿದ್ದರು.ಊಳುವವನೆ ಒಡೆಯ ಎಂಬ ಕಾಯ್ದೆಯನ್ನು ಮಾಡಿ ಬಡಜನರಿಗೆ ಅನುಕೂಲತೆ ಮಾಡಿ ಬಡವರಿಗೆ ಬೆಳಕನ್ನು ನೀಡಿದವರು ಎಂದು ತಹಶೀಲ್ದಾರ ಗಿರೀಶ ಸ್ವಾದಿ ಯವರು ಮಾತನಾಡಿದರು. ಅವರು ದಿ ೨೦ ಸೋಮವಾರ ದಂದು ತಾಲೂಕ ಪಂಚಾಯತ ಸಭಾಭವನದಲ್ಲಿ ಹಿಂದುಳಿದ ವರ್ಗದ ಇಲಾಖೆಯ ವತಿಯಿಂದ ಆಚರಿಸಿದ ಡಿ. ದೇವರಾಜ ಅರಸ ರವರ ೧೦೩ ನೇ ಜಯಂತ್ಯೊÃತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅದೇ ರಿತಿಯಾಗಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಎಫ.ಯು ಪೂಜಾರ ಮಾತನಾಡಿ ಡ. ದೇವರಾಜ ಅರಸ ರವರು ಇಂದು ಅವರು ಇಲ್ಲದೇ ಇರಬಹುದು ಆದರೆ ಅವರ ತತ್ವಾದರ್ಶಗಳು ಇನ್ನೂ ಜೀವಂತವಾಗಿವೆ, ಜಯಂತ್ಯೊÃತ್ಸವಗಳನ್ನು ಸರ್ಕಾರ ಏಕೆ ಆಚರಿಸುತ್ತಿದೆ ಎಂದರೆ ಅವರು ಬಡಜನರಿಗಾಗಿ ತಮ್ಮ ಸೇವೆಯನ್ನು ನೀಡಿದವರು ಆದ್ದರಿಂದ ಇಂತಹ ಮಹಾನಿಯರ ಜಯಂತ್ಯೊÃತ್ಸವಗಳನ್ನು ಸರ್ಕಾರ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ವೇದಿಕೆ ಮೆಲೆ ಅತಿಥಿಗಳಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿ ಪಿ ಲೋಕೇಶ, ಪುರಸಭೆ ಮುಖ್ಯಾಧಿಕಾರಿ ಕೆ ಆಯ ನಾಗನೂರ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ವಿ ಕೆ ಜಟಗೊಂಡ, ಎ ಪಿ ಎಮ ಸಿ ಕಾರ್ಯದರ್ಶಿ ಬಿ ಎ ಹುಲ್ಯಾಳ , ಕ್ಷತ್ರೆÃಶ ದಾಸರ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶೋಭಾ ಕುಂಬಾರ ಪ್ರಾರ್ಥನೆ ಗೀತೆ ಹಾಡಿದರು, ಎಮ ಬಿ ಚಿನಗುಡಿ ಕಾರ್ಯಕ್ರಮ ನಿರೂಪಿಸಿದರು, ಪಿ ಎಸ ಗುಮ್ಮಗೊಳ ವಂದನಾರ್ಪಣೆ ಮಾಡಿದರು.

loading...