ದೇಶದೆಲ್ಲೆಡೆ ೭೨ ನೇ ಸ್ವಾತಂತ್ರö್ಯ ಕಂಪು, ರಾಷ್ಟç ರಾಜಧಾನಿಯಲ್ಲಿ ಬಿಗಿ ಭದ್ರತೆ

0
4
loading...

ನವದೆಹಲಿ: ೭೨ ನೇ ಸ್ವಾತಂತ್ರ÷್ಯ ದಿನಾಚರಣೆ ಅಂಗವಾಗಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ದೇಶವನ್ನು ಉದ್ದೆÃಶಿಸಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟç ರಾಜಧಾನಿಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

ದೆಹಲಿಯಲ್ಲಿ ಆ.೧೩ರಂದು ನಡೆದ ಜೆಎನ್‌ಯು ವಿದ್ಯಾರ್ಥಿ ಮುಖಂಡ ಉಮರ್ ಖಲೀದ್ ಮೇಲಿನ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದೆ. ಭದ್ರತೆಗಾಗಿ ಸುಮಾರು ೭೦ ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಧಾನಿ ಭಾಷಣ ಮಾಡುವ ವೇಳೆ ಹಿರಿಯ ಸಚಿವರು, ಉನ್ನತ ಅಧಿಕಾರಿಗಳು, ವಿದೇಶಿ ಗಣ್ಯರು ಹಾಗೂ ಜನರು ಉಪಸ್ಥಿತರಿರುವ ಐತಿಹಾಸಿಕ ಕೋಟೆ ಸುತ್ತಮುತ್ತ, ದೆಹಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇನ್ನು ಮೋದಿ ದೇಶದ ಪ್ರಧಾನಿಯಾಗಿ ಸ್ವಾತಂತ್ರ÷್ಯ ದಿನವಾದ ಇಂದು ಕೆಂಪುಕೋಟೆ ಮೇಲೆ ಅಧಿಕಾರವಧಿಯ ಕೊನೆಯ ಭಾಷಣ ಮಾಡಲಿದ್ದಾರೆ. ಈ ವೇಳೆ ದೇಶದ ಜನರಿಗೆ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಆರೋಗ್ಯ ಯೋಜನೆ ಗಿಫ್ಟ್ ನೀಡಲಿದ್ದಾರೆ ಎನ್ನಲಾಗುತ್ತಿದೆ. ಯೋಜನೆ ಬಗ್ಗೆ ಪ್ರಧಾನಿ ಅಧಿಕೃತವಾಗಿ ಘೋಷಣೆ ಮಾಡಿ ಜಾರಿಗೊಳಿಸುವ ಸಾಧ್ಯತೆ ಇದೆ. ಈ ಯೋಜನೆ ಕಾರ್ಯರೂಪಕ್ಕೆ ಮೋದಿ ಹಸಿರು ನಿಶಾನೆ ತೋರಿದ್ದೆÃ ಆದರೆ, ದೇಶದ ೧೦ ಕೋಟಿ ಕುಟುಂಬಗಳ ೫೦ ಕೋಟಿ ಜನರಿಗೆ ಆರೋಗ್ಯ ವಿಮೆ ಭಾಗ್ಯ ಸಿಗಲಿದೆ. ಈ ಮೂಲಕ ವಿಶ್ವದ ಅತಿದೊಡ್ಡ ಯೋಜನೆ ಎಂದು ಪರಿಗಣಿತವಾಗಲಿದೆ.

loading...