ದೇಶದ ಆರ್ಥಿಕತೆಗೆ ವಿಶಿಷ್ಟ ಕೊಡುಗೆ ನೀಡಿದ ಬಣಜಿಗರು: ಹಂಚಲಿ

0
3
loading...

ಕನ್ನಡಮ್ಮ ಸುದ್ದಿ-ಗದಗ: ಶತಮಾನಗಳ ಕಾಲದಿಂದಲೂ ದೇಶದ ವಾಣಿಜ್ಯ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಕಾರಣವಾಗಿರುವ ಬಣಜಿಗ ಸಮಾಜದ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಶಿಕ್ಷಕ ಅಶೋಕ ಹಂಚಲಿ ಅಭಿಪ್ರಾಯಪಟ್ಟರು.
ಇಲ್ಲಿಯ ಜಿಲ್ಲಾ ಬಣಜಿಗರ ಸಂಘದಾಶ್ರಯದಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಬಣಜಿಗ ಸಮಾಜ ಲಿಂಗಾಯತ ಸಮಾಜದ ಒಂದು ಭಾಗವಾಗಿದ್ದರೂ ಸಹ, ಅದೇ ಒಂದು ಜಾತಿ ಸೂಚಕವಲ್ಲ. ಅದೊಂದು ಜೀವನ ಪದ್ದತಿಯಾಗಿದೆ. ಜಗಜ್ಯೋತಿ ಬಸವೇಶ್ವರರು ಪ್ರತಿಪಾದಿಸಿದ ಕಾಯಕ ಯೋಗವನ್ನು ಅಳವಡಿಸಿಕೊಂಡಿರುವ ಸಮಾಜವಾಗಿದೆ ಎಂದರು.
ಬಣಜಿಗರು ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡು ದೇಶದ ಆರ್ಥಿಕತೆಗೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಆದರೆ ಈ ಸಮುದಾಯದವರಿಗೆ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಾವದೇ ಅದ್ಯತೆ ನೀಡಲಾಗಿಲ್ಲ. ಪ್ರಸ್ತುತ ದಿನಗಳಲ್ಲಿ ರಾಜಕೀಯ ಬಲವಿಲ್ಲದಿದ್ದಲ್ಲಿ ಸಮಾಜದ ಅಭಿವೃದ್ದಿ ಅಸಾಧ್ಯವೆನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಸಮಾಜದ ಹಿರಿಯರು ಚಿಂತನೆ ನಡೆಸಬೇಕಾದ ಅವಶ್ಯಕತೆಯಿದೆ ಬಣಜಿಗ ಎಂದರೆ ಅದೊಂದು ಸಾಮಾಜಿಕ ಬದ್ದತೆಯುಳ್ಳ ವ್ಯಕ್ತಿ, ಶರಣಧಾರೆಯಲ್ಲಿಯೇ ಸಾಗಿ ಸಮಾಜದಲ್ಲಿ ಆದರ್ಶವ್ಯಕ್ತಿ ಎಂದು ಗುರುತಿಸಿಕೊಳ್ಳಲ್ಪಡುವ ವ್ಯಕ್ತಿ ಎಂದರು. ಡಾ.ಶಿವಬಸಪ್ಪ ಹೆಸರೂರ ಮಾತನಾಡಿ ಬಣಜಿಗರು ಅತ್ಯಂತ ಸ್ವಾಭಿಮಾನಿಗಳು. ಬಣಜಿಗರೆಂದು ಮತ್ತೊಬ್ಬರ ಮುಂದೆ ಕೈ ಚಾಚಿ ನಿಲ್ಲುವವರಲ್ಲ. ತಮ್ಮ ಸ್ವಪ್ರಯತ್ನದಿಂದಲೇ ಉನ್ನತಿ ಸಾಧಿಸಿ ಮತ್ತೊಬ್ಬರಿಗೆ ಮಾರ್ಗದರ್ಶಿಯಾಗಬಲ್ಲವರು. ಈ ದಿಶೆಯಲ್ಲಿ ಬಣಜಿಗರಿಗೆ ಯಾವದೇ ಭಿಕ್ಷೆ ಬೇಕಿಲ್ಲ. ಸಮಾಜದ ಸಂಘಟನೆಯ ಬಲವನ್ನು ಅರಿತು ಸರಕಾರವೇ ಪ್ರಾತಿನಿಧ್ಯ ನೀಡುವದಿದ್ದಲ್ಲಿ ನೀಡಲಿ. ಇಲ್ಲದಿದ್ದಲ್ಲಿ ಸಂಘಟನೆಯ ಬಲದಿಂದ ಅದನ್ನು ಪಡೆಯೋಣ ಎಂದು ಹೇಳಿದರು.
ಅಂದಾನಪ್ಪ ಪಟ್ಟಣಶೆಟಿ,್ಟ ಬಸವರಾಜ ರಾಮನಕೊಪ್ಪ, ರುದ್ರಣ್ಣ ಹೊಸಕೇರಿ, ಗಂಗಾಧರಪ್ಪ ಕೋಟಿ, ರೇವಣಸಿದ್ದಪ್ಪ ಯಳಮಲಿ, ವಿರೂಪಾಕ್ಷಪ್ಪ ಅಕ್ಕಿ, ಶಿವಲೀಲಾ ಕುರಡಗಿ ಉಪಸ್ಥಿತರಿದ್ದರು. ಡಾ.ಶಂಭು ಉಮೇಶ ಪುರದ, ಶಿವಾನಂದ ಗಡಾದ, ಯೋಗ ಪಟು ವೀಣಾ ಪಟ್ಟಣಶೆಟ್ಟರ, ಡಾ.ಸಾಕ್ಷಿ ಷಡಕ್ಷರಿ ಮೆಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ, ಯೋಗ ಪ್ರದರ್ಶನ ನಡೆಯಿತು. ಆರ್.ಆರ್.ಪಟ್ಟಣ ನಿರೂಪಿಸಿದರು, ಬಸವರಾಜ ಉಮಚಗಿ ಸ್ವಾಗತಿಸಿ ಪರಿಚಯಿಸಿದರು. ಶರಣಬಸಪ್ಪ ಬಂಡಿವಾಡ ವರದಿ ವಾಚನ ಮಾಡಿದರು ಪ್ರಾಸ್ತವಿಕವಾಗಿ ಚೇತನ ಅಂಗಡಿ ಮಾತನಾಡಿದರು ಕಾರ್ತಿಕ ಮುಳಗುಂದ ವಂದಿಸಿದರು.
ರಾಚಪ್ಪ ಚವಡಿ, ಮಹೇಶ ಬೆಲ್ಲದ, ಎಸ್.ಎಸ್.ಕೊಟ್ಟರಶೆಟ್ಟರ, ರಾಜು ಶೆಲ್ಲಿಕೇರಿ, ರಾಜು ಕುರಡಗಿ, ಈಶಣ್ಣ ಮುನವಳ್ಳಿ, ಈರಣ್ಣ ಹುಲಬನ್ನಿ, ನಾಗೇಶ ಸವಡಿ, ಎಸ್.ಟಿ.ಮೇಲಗಿರಿ, ಸಂಗಪ್ಪ ಪಡೇಸೂರ ಇದ್ದರು.

loading...