ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿನಿಯರು ಮುಂಚಿಣಿ: ಶಾಸಕ ನಿಲ

0
4
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿನಿಯರು ಮುಂಚುಣಿಯಲ್ಲಿದ್ದಾರೆ.ಆದ್ದರಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ನಿಲ್ಲಿಸದಿರಿ ಎಂದು ಶಾಸಕ ಅನಿಲ ಬೆನಕೆ ಹೇಳಿದರು.
ಅವರು ಮಂಗಳವಾರ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾದ ೨೦೧೮-೧೯ ನೇ ಸಾಲಿನ ವಿವಿಧ ವಿಭಾಗದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿನಿಯರು ಈ ದೇಶದ ಪ್ರಗತಿಯಲ್ಲಿ ಮುಂಚುಣಿಯಲ್ಲಿದ್ದಾರೆ. ಆದ್ದರಿಂದ ವಿದ್ಯಾರ್ಥಿನಿಯರು ಅರ್ದಕ್ಕೆ ಓದನ್ನು ನಿಲ್ಲಿಸದೆ ಉನ್ನತ ಅಭ್ಯಾಸದ ಕಡೆಗೆ ಗಮನ ಹರಿಸಬೇಕು, ಮತ್ತು ಮಹಿಳೆಯರು ಈ ಸಮಾಜದಲ್ಲಿ ಪುರುಷರಂತೆಯೇ ಎಲ್ಲ ಕ್ಷೆÃತ್ರದಲ್ಲಿ ಸಮಾನಳಾಗಿದ್ದು ಗೌರವದಿಂದ ಕಾಣಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಪಿ.ಹಚ್.ಡಿ ಪದವಿಯನ್ನು ಪಡೆದಂತಹ ಪ್ರೊÃಪೆಸರ್ ಪ್ರಮೋಧ ಹಳೇಮನಿ ಅವರನ್ನು ಸನ್ಮಾನಿಸಿ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಉಮಾ ಸಾಲಿಮಠ, ಡಾ: ಆರ್.ಎಸ್.ಮಾಂಗಳೇಕರ, ಪ್ರೊÃ. ಸಿ. ಈಶ್ವರಚಂದ್ರ, ಎಸ್.ಬಿತಟಗಾರ ಹಾಗೂ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

loading...