ನಗರಕ್ಕೆ ಪವನ ಸ್ಟಾರ್ ಪುನೀತ: ಪವನ-ಅಪೇಕ್ಷಾ ದಂಪತಿಗಳಿಗೆ ಶುಭಾಶಯ

0
10
loading...

ಬಾಗಲಕೋಟೆ: ಚಿತ್ರ ನಿರ್ದೇಶಕ ಪವನ ಒಡೆಯರ ಹಾಗೂ ಚಿತ್ರ ನಟಿ ಅಪೇಕ್ಷಾ ಪುರೋಹಿತ ಅವರ ಮದುವೆ ಸಮಾರಂಭಕ್ಕೆ ಚಿತ್ರ ನಟ ಹಾಗೂ ಪವನ ಸ್ಟಾರ್ ಪುನೀತ ರಾಜಕುಮಾರ ಅವರು ಭೇಟಿ ನೀಡಿ ಶುಭಾಶಯ ಹೇಳಿದರು.
ವಿದ್ಯಾಗಿರಿ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಕಳೆದ ದಿನದಿಂದಲೇ ನಡೆದು ಅರಕಕ್ಷತೆ ಸಮಾರಂಭ ಹಾಗೂ ಇಂದು ಮದುವೆ ಸಮಾರಂಭ ನಡೆದಿತ್ತು.ಬೆಳ್ಳಿಗೆ ದಿಢೀರದಂತೆ ಆಗಮಿಸಿ,ಪುನೀತ ರಾಜಕುಮಾರ ವಾಹನದ ಮೂಲಕ,ನೇರವಾಗಿ ಕಲ್ಯಾಣ ಮಂಟಪ ಆಗಮಿಸಿ,ಪುನೀತ ನೂತನ ದಂಪತಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮದುವೆ ಬಂದಿರುವ ಸಂಭಂದಿಕರು, ಗೆಳೆಯರು ಹಾಗೂ ಹಿತೈಷಿಗಳು ನಟ ಪುನೀತ ರಾಜಕುಮಾರ ರೊಂದಿಗೆ ಸೇಲ್ಪಿ ತೆಗೆದುಕೊಂಡು ಖುಷಿ ಪಟ್ಟರು.

ಕಾಫಿ ತೋಟ ಚಿತ್ರದ ನಟಿ ಅಪೇಕ್ಷಾ ಪುರೋಹಿತ ಬಾಗಲಕೋಟೆ ನಗರದ ನಿವಾಸಿ.ಪವನ ಒಡೆಯರು ನಟ ಪುನೀತ ರಾಜಕುಮಾರ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ನಟಸೌರ್ವಭವ ಚಿತ್ರವನ್ನು ಸಹ ಪುನೀತ ರಾಜಕುಮಾರ ನಟನೆ ಮಾಡಿದ್ದು, ಪವನ ಒಡೆಯರ ನಿರ್ದೇಶನ ಮಾಡುತ್ತಿದ್ದಾರೆ.ಈ ಹಿನ್ನಲೆಯಲ್ಲಿ ನಟ ಪುನೀತ ರಾಜಕುಮಾರ ಅವರು,ಬಾಗಲಕೋಟೆ ನಗರಕ್ಕೆ ಬಂದು ನೂತನ ದಂಪತಿಗಳಿಗೆ ಶುಭ ಕೋರಿದರು.ಈ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾಡಿದ ನಟ ಪುನೀತ ರಾಜಕುಮಾರ, ಕೊಡಗು ಜಿಲ್ಲೆಯಲ್ಲಿ ಉಂಟಾದ ಜಲ ಪ್ರಳಯದ ಬಗ್ಗೆ ಖೇದ ವ್ಯಕ್ತಪಡಿಸಿದರು. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೇಳಿ,ರಾಜ್ಯದ ಜನತೆ ಜಲ ಪ್ರಳಯವಾಗಿರುವ ಕೊಡಗು ಜಿಲ್ಲೆಗೆ ಸಹಾಯ ಹಸ್ತ ಚಾಚ ನೀಡಬೇಕು ಎಂದು ತಿಳಿಸಿದರು.

loading...