ನಗರಸಭೆ ಬಿಜೆಪಿ ಪಕ್ಷದ ವಶವಾಗಲಿದೆ : ಶ್ರೀಕಾಂತ ಕುಲಕರ್ಣಿ

0
39
loading...

ಜಮಖಂಡಿ: ಸ್ಥಳೀಯ ನಗರಸಭೆ ಚುನಾವಣೆಯಲ್ಲಿ ಕಮೀಟಿ, ಸಮಿತಿ ನಿರ್ಣಯದಂತೆ, ನಗರಸಭೆ ಟಿಕೆಟ್‌ ಹಂಚಿಕೆ ಮಾಡಲಾಗಿದ್ದು, ನಗರದ 31 ವಾರ್ಡಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸುವ ಮೂಲಕ ನಗರಸಭೆ ಬಿಜೆಪಿ ಪಕ್ಷದ ವಶವಾಗಲಿದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
ನಗರದ ವಾರ್ಡ 17ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸುಕನ್ಯಾ ವಿನೋದ ಲೋಣಿ ಪರವಾಗಿ ಪಾದಯಾತ್ರೆ ಮೂಲಕ ಮತದಾರರ ಮನೆಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಆಡಳಿತಕ್ಕೆ ಮತದಾರರು, ಜನರು ಬೇಸತ್ತು ಹೋಗಿದ್ದು, ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ನಗರಸಭೆ ಎಲ್ಲ ವಾರ್ಡಗಳಲ್ಲಿ ಬಿಜೆಪಿ ಸಮಿತಿ ತಂಡಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ನಾನು ಪ್ರತಿ ವಾರ್ಡಿಗೂ ಪಾದಯಾತ್ರೆ ಮೂಲಕ ಮತಯಾಚಿಸುತ್ತಿದ್ದೇನೆ. ಬಿಜೆಪಿ ಪಕ್ಷಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದ್ದು, ಗೆಲವು ನಿಶ್ಚಿತವಾಗಿದೆ ಎಂದರು. ಪಾದಯಾತ್ರೆ ಪ್ರಚಾರದಲ್ಲಿ ನಗರಸಭೆ ಮಾಜಿ ಸದಸ್ಯ ಸುರೇಶ ಕಡಕೋಳ, ಶ್ರೀನಿವಾಸ ಅಪರಂಜಿ, ಬಿಜೆಪಿ ಪಕ್ಷದ ಮುಖಂಡರಾದ ಡಾ.ವಿಜಯಲಕ್ಷ್ಮೀ ತುಂಗಳ, ಬಸವರಾಜ ಕಲೂತಿ, ಬಸು ದೇವರವರ, ಅಜಯ ಕಡಪಟ್ಟಿ, ಪಾಂಡು ಬಂಡಿವಡ್ಡರ, ಸಂಗಮೇಶ ದಳವಾಯಿ, ಶಂಕರ ಕಾಳೆ, ಶ್ರೀಧರ ಕನ್ನೂರ, ನಾಗರಾಜ ತಂಗಡಗಿ, ಕೋಲೂರ ಸಹಿತ ಹಲವರು ಇದ್ದರು.

ಇದೇ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಈಶ್ವರ ಆದೆಪ್ಪನವರ, ಅಜಯ ಕಡಪಟ್ಟಿ, ಸೂರ್ಯವಂಶಿ, ಶ್ರೀಧರÀ ಕನ್ನೂರ, ರಾಜೇಸಾಬ ಕಡಕೋಳ, ಆದರ್ಶ ರೂಗಿಮಠ, ಗುಲಾಬ, ಹೀರಾ ಜಾದವ, ರಾಯಬಾ ಜಾದವ ಸಹಿತ ಹಲವರು ಇದ್ದರು.

loading...