ನಗರ ಅಭಿವೃದ್ಧಿಗೆ ಒತ್ತಾಯಿಸಿ ಪೌರ ಕಾರ್ಮಿಕರ ಧರಣಿ

0
3
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ಆನೆಗುಂದಿ ರಸ್ತೆಯಲ್ಲಿರುವ ಸರ್ವೆ ನಂ.56 ರಲ್ಲಿರುವ ಪೌರ ಕಾರ್ಮಿಕರ ನಗರವನ್ನು ಅಭಿವೃದ್ಧಿ ಪಡಿಸಲು ಮತ್ತು ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪೌರ ಕಾರ್ಮಿಕರು ಸೋಮವಾರ ಹೈದ್ರಾಬಾದ್, ಕರ್ನಾಟಕ ಪ್ರದೇಶ ಪೌರ ಸೇವಾ ನೌಕರರ ಸಂಘದ ಆಶ್ರಯಲ್ಲಿ ಧರಣಿ ನಡೆಸಿದರು.
ಹಂಗಾಮಿ ನೌಕರರ ವೇತನದಲ್ಲಿ ಮಾರ್ಚ ಮತ್ತು ಏಪ್ರಿಲ್‍ನಿಂದ ಕಡಿತಗೊಳಿಸಿರುವ ಹಣವನ್ನು ವಿಮೆ ಮತ್ತು ಬ್ಯಾಂಕ್‍ಗಳಿಗೆ ಭರಿಸಬೇಕು. ಮೇ, ಜೂನ್ ಮತ್ತು ಜುಲೈ ತಿಂಗಳುಗಳ ವೇತನ ಬಿಡುಗಡೆ ಮಾಡಬೇಕು. ಕಾರ್ಮಿಕರಿಗೆ ನೀಡಬೇಕಾದ ರಜಾ ವೇತನವನ್ನು ತ್ವರಿತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಪೌರ ಕಾರ್ಮಿಕರಾದ ವಿರುಪಣ್ಣ, ಶೇಖ ಹುಸೇನಸಾಬ್, ಹುಲುಗಪ್ಪ, ಹನುಮಂತ, ಹುಲುಗಪ್ಪ, ಹುಲಿಗೆಮ್ಮ ಇವರ ವೈದ್ಯಕೀಯ ವೆಚ್ಚವನ್ನು ಭರಿಸಬೇಕು ಎಂದು ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ ಪೌರಾಯುಕ್ತೆ ಕೆ.ಶ್ರುತಿಯವರಿಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.

loading...