ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಕಲ ಸಿದ್ಧ್ದತೆ : ಡಿಸಿ ಶಾಂತಾರಾಮ

0
22

ಬಾಗಲಕೋಟೆ: ಜಿಲ್ಲೆಯ 12 ನಗರ ಸ್ಥಳೀಯ ಸಾರ್ವತ್ರಿಕ ಚುನಾವಣೆಗೆ ಆಗಸ್ಟ 31 ರಂದು ಮತದಾನ ನಡೆಯಲಿದ್ದು, ಚುನಾವಣೆಗಳು ಶಾಂತಿಯುತವಾಗಿ ಜರುಗಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಜಿ.ಶಾಂತಾರಾಮ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಜಿಲ್ಲೆಯ 5 ನಗರಸಭೆ, 5 ಪುರಸಭೆ ಹಾಗೂ 3 ಪಟ್ಟಣ ಪಂಚಾಯತಿಗಳ ಒಟ್ಟು 312 ವಾರ್ಡುಗಳ ಪೈಕಿ 309 ವಾರ್ಡಗಳಿಗೆ ಚುನಾವಣೆ ನಡೆಯಲಿದ್ದು, ಅಂತಿಮವಾಗಿ 904 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದ್ದಾರೆ.
ಬಾಗಲಕೋಟೆ ನಗರಸಭೆ ವಾರ್ಡ ನಂ.2ಕ್ಕೆ, ತೇರದಾಳ ಪುರಸಭೆ ವಾರ್ಡ ನಂ.20ಕ್ಕೆ ಹಾಗೂ ಗುಳೇದಗುಡ್ಡ ವಾರ್ಡ ನಂ.6ಕ್ಕೆ ತಲಾ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 309 ವಾರ್ಡಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮತದಾರರ ವಿವರ ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 484880 ಮತದಾರರಿದ್ದು, ಅದರಲ್ಲಿ 241125 ಪುರುಷ, 243722 ಮಹಿಳಾ ಹಾಗೂ 33 ಇತರೆ ಮತದಾರರಿದ್ದಾರೆ. ಬಾಗಲಕೋಟ ನಗರಸಭೆಗೆ ಒಟ್ಟು 99891, ಇಲಕಲ್ಲ ನಗರಸಭೆಗೆ 48679, ಜಮಖಂಡಿ ನಗರಸಭೆಗೆ 59458, ರಬಕವಿ-ಬನಹಟ್ಟಿ ನಗರಸಭೆಗೆ 64665, ಮುಧೋಳ ನಗರಸಭೆಗೆ 49629, ಮಹಾಲಿಂಗಪುರ ಪುರಸಭೆಗೆ 31026, ತೇರದಾಳ ಪುರಸಭೆಗೆ 28149, ಬಾದಾಮಿ ಪುರಸಭೆಗೆ 26693, ಗುಳೇದಗುಡ್ಡ ಪುರಸಭೆಗೆ 28349, ಹುನಗುಂದ ಪುರಸಭೆಗೆ 16880, ಕೆರೂರ ಪಟ್ಟಣ ಪಂಚಾಯತಿಗೆ 15951 ಹಾಗೂ ಬೀಳಗಿ ಪಟ್ಟಣ ಪಂಚಾಯತಿಗೆ 15510 ಮತದಾರರಿದ್ದಾರೆ. ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆ ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 312 ವಾರ್ಡಗಳಲ್ಲಿ 507 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 115 ಅತೀ ಸೂಕ್ಷ್ಮ, 161 ಸೂಕ್ಷ್ಮ ಹಾಗೂ 231 ಸಾಮಾನ್ಯ ಮತಗಟ್ಟೆಗಳಿವೆ. ಬಾಗಲಕೋಟ 92 ಮತಗಟ್ಟೆ ಪೈಕಿ 15 ಅತೀ ಸೂಕ್ಷ, 21 ಸೂಕ್ಷ್ಮ, 56 ಸಾಮಾನ್ಯ, ಇಲಕಲ್ಲ 57 ಪೈಕಿ 8 ಅತೀ ಸೂಕ್ಷ್ಮ, 14 ಸೂಕ್ಷ್ಮ, 35 ಸಾಮಾನ್ಯ, ಜಮಖಂಡಿ 58 ಪೈಕಿ 12 ಅತೀ ಸೂಕ್ಷ್ಮ, 16 ಸೂಕ್ಷ್ಮ, 30 ಸಾಮಾನ್ಯ, ರಬಕವಿ-ಬನಹಟ್ಟಿ 67 ಪೈಕಿ 26 ಅತೀ ಸೂಕ್ಷ್ಮ, 31 ಸೂಕ್ಷ್ಮ, 10 ಸಾಮಾನ್ಯ, ಮುಧೋಳ 53 ಪೈಕಿ 9 ಅತೀ ಸೂಕ್ಷ್ಮ, 17 ಸೂಕ್ಷ್ಮ, 27 ಸಾಮಾನ್ಯ, ಮಹಾಲಿಂಗಪೂರ 34 ಪೈಕಿ 6 ಅತೀ ಸೂಕ್ಷ್ಮ, 9 ಸೂಕ್ಷ್ಮ, 19 ಸಾಮಾನ್ಯ, ತೇರದಾಳ 30 ಪೈಕಿ 8 ಅತೀ ಸೂಕ್ಷ್ಮ, 10 ಸೂಕ್ಷ್ಮ, 12 ಸಾಮಾನ್ಯ, ಬಾದಾಮಿ 27ಪೈಕಿ 5ಅತೀ ಸೂಕ್ಷ್ಮ, 12ಸೂಕ್ಷ್ಮ, 10 ಸಾಮಾನ್ಯ, ಗುಳೇದಗುಡ್ಡ 27 ಪೈಕಿ 6 ಅತೀ ಸೂಕ್ಷ್ಮ, 11 ಸೂಕ್ಷ್ಮ, 10 ಸಾಮಾನ್ಯ, ಹುನಗುಂದ 23 ಪೈಕಿ 5 ಅತೀ ಸೂಕ್ಷ್ಮ, 7 ಸೂಕ್ಷ್ಮ, 11 ಸಾಮಾನ್ಯ, ಕೆರೂರ 21 ಪೈಕಿ 6 ಅತೀ ಸೂಕ್ಷ್ಮ, 4 ಸೂಕ್ಷ್ಮ, 11 ಸಾಮಾನ್ಯ ಹಾಗೂ ಬೀಳಗಿ 18 ಪೈಕಿ 9 ಅತೀ ಸೂಕ್ಷ್ಮ, 9 ಸೂಕ್ಷ್ಮ ಮತಗಟ್ಟೆಗಳಿವೆ.
ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ರಾಜ್ಯ ಚುನಾವಣಾ ಆಯೋಗವು ಬಾಗಲಕೋಟ, ಇಲಕಲ್ಲ ನಗರಸಭೆ, ಬಾದಾಮಿ, ಗುಳೇದಗುಡ್ಡ, ಹುನಗುಂದ ಪುಸರಭೆ, ಕೆರೂರ ಪಟ್ಟಣ ಪಂಚಾಯತಿಗೆ ಸಾಮಾನ್ಯ ವೀಕ್ಷಕರಾಗಿ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕ ಚಿದಾನಂದ ವತಾರೆ (9591419817), ವೆಚ್ಚ ವೀಕ್ಷಕರಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ರಾಮಪ್ಪ ಹಟ್ಟಿ(9449411952), ಜಮಖಂಡಿ, ರಬಕವಿ-ಬನಹಟ್ಟಿ ನಗರಸಭೆ, ಮುಧೋಳ, ಮಹಾಲಿಂಗಪೂರ, ತೇರದಾಳ ಪುರಸಭೆ ಹಾಗೂ ಬೀಳಗಿ ಪಟ್ಟಣ ಪಂಚಾಯತಿಗೆ ಸಾಮಾನ್ಯ ವೀಕ್ಷಕರಾಗಿ ಜನರಲ್‌ ಮ್ಯಾನೇಜರ (ಆಡಳಿತ) (8970651444), ವೆಚ್ಚ ವೀಕ್ಷಕರಾಗಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರ ಸೋಮನಾಥ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಮತದಾರು ಯಾವುದೇ ರೀತಿಯ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಇವರನ್ನು ಸಮಪರ್ಕಿಸಬಹುದಾಗಿದೆ.

loading...