ನಟ ಸುದೀಪ್ ವಿರುದ್ಧ ಮುಖ್ಯಮಂತ್ರಿಗೆ ದೂರು

0
6
loading...

ಬೆಂಗಳೂರು: ನಟ ಸುದೀಪ್ ವಿರುದ್ಧ ಫಿಲಂ ಚೇಂಬರ್‍ಗೆ ಚಿಕ್ಕಮಗಳೂರಿನ ಎಸ್ಟೇಟ್ ಮಾಲೀಕರೊಬ್ಬರು ದೂರು ನೀಡಿದ್ದಾರೆ.
ಕಿಚ್ಚ ಕ್ರಿಯೇಶನ್ಸ್ ಬ್ಯಾನರ್‍ನಡಿ ವಾರಸ್ದಾರ ಎನ್ನುವ ಧಾರಾವಾಹಿಯನ್ನು ಸುದೀಪ್ ನಿರ್ಮಿಸಿದ್ದರು. ಈ ಸೀರಿಯಲ್‍ನ ಶೂಟಿಂಗ್ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‍ವೊಂದರಲ್ಲಿ ನಡೆದಿತ್ತು. ಚಿತ್ರೀಕರಣದ ವೇಳೆ ಎಸ್ಟೇಟ್‍ನಲ್ಲಿ ಹಾನಿಯಾಗಿದೆ.ಅಲ್ಲದೆ ಬಾಡಿಗೆ ಹಣ ನೀಡಿಲ್ಲ ಎಂದು ಎಸ್ಟೇಟ್ ಮಾಲೀಕ ಸುದೀಪ್ ವಿರುದ್ಧ ಆರೋಪ ಮಾಡಿದ್ದಾನೆ.
ಸದ್ಯ ಕಾಫಿ ಎಸ್ಟೇಟ್ ಮಾಲೀಕ ದೀಪಕ್ ಮಯ್ಯೂರ್ ಪಟೇಲ್ ಎಂಬುವವರು ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಮುಖ್ಯ ಮಂತ್ರಿ ಕುಮಾರಸ್ವಾಮಿಗೆ ದೂರು ನೀಡಿದ್ದಾರೆ.
2016ರಲ್ಲಿ ವಾರಸ್ದಾರ ಧಾರಾವಾಹಿಯನ್ನು ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದಾಗ ಬೈಗೂರು ಗ್ರಾಮದಲ್ಲಿರುವ ನನ್ನ ಕಾಫಿ ತೋಟವನ್ನು ಬಳಕೆ ಮಾಡಿಕೊಂಡಿದ್ದರು.ನನ್ನ ತೋಟ ಬಳಕೆ ಮಾಡಿಕೊಳ್ಳುವ ಮುನ್ನ ಮುಂಗಡವಾಗಿ ನನಗೆ 5 ಲಕ್ಷ ಹಣ ನೀಡಿದ್ದರು.
ಆದರೆ,ಶೂಟಿಂಗ್ ವೇಳೆ ಚಿತ್ರೀಕರಣ ತಂಡ ಮತ್ತು ನನ್ನ ನಡುವೆ ಕಿರಿಕ್ ಆಗಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಯಿತು. ಇಷ್ಟೆಲ್ಲ ಆದರೂ ಚಿತ್ರೀಕರಣ ತಂಡದವರು ನನಗೆ ನ್ಯಾಯಯುತವಾಗಿ ಬರಬೇಕಾದ ಹಣ ಪಾವತಿ ಮಾಡದೆ ವಂಚಿಸಿದ್ದಾರೆ. ಈ ಎಲ್ಲ ಸತ್ಯ ಕಿಚ್ಚ ಕ್ರಿಯೇಷನ್ ಮಾಲೀಕ ಸುದೀಪ್ ಈ ವಿಚಾರದ ಬಗ್ಗೆ ಚಕಾರವೆತ್ತದೆ ಇರುವುದು ಬೇಸರ ತರಿಸಿದೆ.
ನನಗಾದ ಅನ್ಯಾಯದ ಬಗ್ಗೆ ಸುದೀಪ್‍ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿಗಳು ಹಾಗೂ ಚಲನಚಿತ್ರ ವಾಣಿಜ್ಯಮಂಡಳಿ ಈ ವಿಚಾರವನ್ನು ಸುದೀಪ್ ಗಮನಕ್ಕೆ ತಂದು ನನಗೆ ಬರಬೇಕಾದ ಹಣ ದೊರಕಿಸಿಕೊಡುವಂತೆ ದೀಪಕ್ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

loading...