ನಮ್ಮ ಆಸಕ್ತಿ-ಶಕ್ತಿ ಅರಿತು ಗುರಿಯತ್ತ ಸಾಗಿ

0
5
loading...

ಜಮಖಂಡಿ : ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುನ್ನೂರಿನಲ್ಲಿ ಸಾಂಸ್ಕೃತಿಕ, ಕ್ರಿÃಡಾ, ಎನ್.ಎಸ್.ಎಸ್, ರೆಡ್‌ಕ್ರಾಸ್, ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜರುಗಿತು. ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿ ಎಚ್.ವಾಯ್.ಬಾಲದಂಡಿ, ಪಿ.ಎಸ್.ಆಯ್. ಗ್ರಾಮೀಣ ಪೋಲಿಸ್ ಠಾಣೆ ಜಮಖಂಡಿ ಇವರು ಸಸಿಗೆ ನೀರು ಹಾಕುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿ ಮಹಾವಿದ್ಯಾಲಯದ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ಕಾಲೇಜಿನ ಪುಷ್ಪದಂತೆ ಮಕರಂದವಾಗಿ ಕಾಲೇಜಿನ ಅಲಂಕಾರತೆಯನ್ನು ಹೆಚ್ಚಿಸುವತ್ತ ಗಮನ ನೀಡಿ ಗುರು-ಹಿರಿಯರಲ್ಲಿ ದೇವರನ್ನು ಕಾಣುವ ಮನೋಭಾವ ವ್ಯಕ್ತಿತ್ವ ಬೆಳಸಿಕೊಂಡರೆ ಅದೇ ನಿಮ್ಮ ಗಣ್ಯ ವ್ಯಕ್ತಿತ್ವ ಭಾರತ ದೇಶ ಅನೇಕತೆಯಲ್ಲಿ ಏಕತೆ ಸಾರುವ ರಾಷ್ಟç ಆದರೆ ಇತ್ತಿÃಚಿನ ದಿನಗಳಲ್ಲಿ ಅನೇಕತೆಯಲ್ಲಿ ಅನೇಕರಾಗಿ ಬಾಳುತ್ತಿದ್ದೆÃವೆ. ಅದಕ್ಕೆ ನಮ್ಮ ನೈತಿಕ ಮೌಲ್ಯಗಳ ಕುಸಿತವೇ ಕಾರಣ. ಪ್ರತಿಯೊಬ್ಬ ವಿದ್ಯಾರ್ಥಿಯು ಸಾಧಕನಿಂದ ಸ್ಪೂರ್ತಿ ಪಡೆದು ಸಾಧಕರಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಲೋಚನಾ. ಜವಳಗಿ ವಿಶ್ರಾಂತ ಪ್ರಾಧ್ಯಾಪಕರು ಎಸ್.ಆರ್.ಕಂಠಿ ಮಹಾವಿದ್ಯಾಲಯ ಮುಧೋಳ ಇವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಪಠ್ಯ ಎಷ್ಟು ಮುಖ್ಯವೋ ಅಷ್ಟೆÃ ಪಠ್ಯೆÃತರ ಚಟುವಟಿಕೆಗಳು ಮುಖ್ಯ ಎಂದು ಭಾವಿಸಬೇಕು. ಪಠ್ಯೆÃತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಸದೃಡ ಶರೀರ ನೈತಿಕ ಶಕ್ತಿ, ಮಾನಸಿಕ ಸ್ವಾರ್ಸ್ಥ ಬೌಧ್ಧಿಕ ಶಕ್ತಿ ವೃದ್ಧಿಸುತ್ತದೆ. ವಿದ್ಯಾರ್ಥಿ ಆರ್ಥಿಕವಾಗಿ ಬಡವನಾಗಿರಬಹುದು ಆದರೆ ಮಾನಸಿಕವಾಗಿ ಬಡವನಾಗಬಾರದು. ನಮ್ಮ ಆಸಕ್ತಿ-ಶಕ್ತಿ ಅರಿತು ಗುರಿಯತ್ತ ಸಾಗಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಸುನಂದಾ. ಎಸ್. ಶಿರೂರ ರವರು ವಿದ್ಯಾರ್ಥಿಗಳಿಗೆ ಮನರಂಜನೆ ಎಲ್ಲಿ ಬೇಕಾದರು ಸಿಗುತ್ತದೆ. ಆದರೆ ಬುದ್ದಿವಾದ ಒಳ್ಳೆಯತನ ನಡತೆ ಬೋಧಿಸುವ ಜ್ಞಾನ ಕೆಲವಡೆ ಸಿಗುತ್ತದೆ. ಸದೃಡ ದೇಹದಲ್ಲಿ ಸದೃಡ ಮನಸ್ಸು ಇರುತ್ತದೆ. ದೃಡ ಚಿತ್ತವುಳ್ಳವರು ಏನನ್ನಾದರು ಸಾಧಿಸಬಲ್ಲರು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಈ ಸಮಾರಂಭದಲ್ಲಿ ಹುನ್ನೂರ ಗ್ರಾಮದ ಗಣ್ಯ ನಾಗರಿಕರಾದ ಶಂಕರ. ಎಸ್. ಕೋರನವರ, ಪ್ರೊ. ಯು.ಎಸ್.ದೇಸಾಯಿ, ಪ್ರೊ. ಎಸ್.ಎಸ್.ಹಳೇಮನಿ, ಪ್ರೊ.ವೈ.ವೈ.ಕೊಕ್ಕನವರ, ಪ್ರೊ. ಎಚ್.ಜಿ.ಜಂಬಗಿ, ಪ್ರೊ.ಎಸ್.ವಾಯ್.ಸೂಳಿಭಾವಿ, ಪ್ರೊ. ಜೈಪ್ರಕಾಶ, ಪ್ರೊ. ಪ್ರಕಾಶ.ಬಡಿಗೇರ, ಪ್ರೊ. ಮಚಗಾರ, ಪ್ರೊ.ತಳಕೇರಿ, ಪ್ರೊ. ಶೆಟ್ಟರ, ಪ್ರೊ.ತೇರದಾಳ, ಪ್ರೊ. ಉದಪುಡಿ, ಪ್ರೊ. ಹೇಮಾ.ಜೈನಾಪೂರ. ಪ್ರೊ. ವೀಣಾ.ಮರಕಟ್ಟಿ, ಪ್ರೊ.ಸೀಮಾ.ಬರಗಡಗಿ, ಪ್ರೊ.ಅನುರಾಧ ಬಂಗಾರಿ, ಪ್ರೊ. ಭಾರತಿ ಜಮಖಂಡಿ, ಮಹಾವಿದ್ಯಾಲಯದ ಎಲ್ಲ ಬೋಧಕ/ ಬೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

loading...