ನವೀಕೃತ ಶಾಖೆ ಆಧುನಿಕ ಸೌಲಭ್ಯ ಹೊಂದಿದೆ: ತಪಶೆಟ್ಟಿ

0
6
ಬಾಗಲಕೋಟೆ: ಬಿವಿವಿ ಸಂಘದ ಮಳಿಗೆಯಲ್ಲಿ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ನವೀಕೃತಗೊಂಡ ಶಾಖೆಯು ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರಬೇಕಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ನಗರದ ಬಿವಿವಿ ಸಂಘದ ವಾಣಿಜ್ಯ ಸಂಕೀರ್ಣದಲ್ಲಿರುವ ಕಟ್ಟಡದ ನವೀಕೃತ ಶಾಖೆ ಹಾಗೂ ಎಟಿಎಂ ಉದ್ಘಾಟನೆ ಸಮಾರಂಭದ ವೇಳೆ ಅವರು ಈ ವಿಷಯ ತಿಳಿಸಿದರು. ನವೀಕೃತ ಬ್ಯಾಂಕ್‌ನ ಕಟ್ಟಡದಲ್ಲಿ ಎಟಿಎಂ, ಆರ್‌ಟಿಜಿಎಸ್ ಸೇರಿದಂತೆ ಎಲ್ಲ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ. ಇದರಿಂದ ವ್ಯಾಪಾರಸ್ಥರು, ಶಾಲಾ ಕಾಲೇಜ್‌ಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

loading...

ಮುಂದಿನ ತಿಂಗಳು ಬ್ಯಾಂಕ್‌ನ ನೂತನ ಶಾಖೆಗಳು ಕೋಲ್ಹಾರ, ಮುದ್ದೆÃಬಿಹಾಳ ಮತ್ತು ಗಜೇಂದ್ರಗಡದಲ್ಲಿ ಆರಂಭಗೊಳ್ಳಲಿವೆ. ನಿಡಗುಂದಿಯಲ್ಲಿ ಬಾಡಗಿ ಕಟ್ಟಡದಲ್ಲಿರುವ ಶಾಖೆಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ಕೆಲಸ ನಡೆದಿದೆ. ಬ್ಯಾಂಕ್ ೧೨ ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಕೆಲಸ ನಡೆದಿದೆ. ಸೆ.೧೬ ರಂದು ಬ್ಯಾಂಕ್‌ನ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಲಿದ್ದು, ಈ ವೇಳೆ ಬ್ಯಾಂಕ್ ಇನ್ನಷ್ಟು ಹೊಸ ಯೋಜನೆಗಳನ್ನು ಪ್ರಕಟಿಸಲಿದೆ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಶಾಸಕ ವೀರಣ್ಣ ಚರಂತಿಮಠ, ಚರಂತಿಮಠ ಪ್ರಭುಸ್ವಾಮೀಜಿ ನವೀಕೃತ ಶಾಖೆ ಹಾಗೂ ಎಟಿಎಂ ಯಂತ್ರಗಳನ್ನು ಉದ್ಘಾಟಿಸಿದರು. ಮೇಲ್ಮನೆ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಸಂತೋಷ ಹೊಕ್ರಾಣಿ, ಬ್ಯಾಂಕ್‌ನ ಸಿಬ್ಬಂದಿ, ವ್ಯಾಪಾರಸ್ಥರು ಇದ್ದರು.

loading...