ನಿಧಿ ಸಂಗ್ರಹಣೆಗೆ ಮುಂದಾದ ವಿದ್ಯಾರ್ಥಿಗಳು, ಶಿಕ್ಷಕರು

0
6
loading...

ಕಲಾದಗಿ: ಕೊಡಗಿನಲ್ಲಿ ಸತತ ಮಳೆಯಿಂದ ಉಂಟಾಗಿರುವ ಪ್ರಕೃತಿ ವಿಕೋಪಕ್ಕೆ ಸಿಲುಕಿರುವ ಜನತೆಗೆ ಸಹಾಯ ಮಾಡಲು ಇಲ್ಲಿಯ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಿಹಾರ ನಿಧಿ ಸಂಗ್ರಹಿಸಲು ಮುಂದಾಗಿದ್ದಾರೆ. ಸೋಮವಾರ ಬೆಳಿಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳಿಂದ ನಿಧಿ ಸಂಗ್ರಹಿಸಿದರು. ಮುಖ್ಯ ಶಿಕ್ಷಕ ಆರ್ ವಿ ಜೋಶಿ, ಪಿ.ಪಿ.ಜೋಶಿ, ಕೆ.ಆರ್.ಬಾಗವಾನ, ಎಮ್‌ವಾಯ್ ಬಾರಕೇರ್, ಪಿ.ಎಮ್.ಬಂಡಾರಿ ಇದ್ದರು.

loading...