ನಿಸ್ವಾರ್ಥ ಸೇವೆ ಸಲ್ಲಿಸುವುದೇ ನನ್ನ ಗುರಿ: ಶಾಸಕ ಹಾಲಪ್ಪ

0
8
loading...

ಕನ್ನಡಮ್ಮ ಸುದ್ದಿ-ಕುಕನೂರ: ನಾನು ಜನಸೇವಕ, ಅಧಿಕಾರವಿದ್ದರೂ ಇರದಿದ್ದರೂ ಜನರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವುದೇ ನನ್ನ ಪರಮ ಗುರಿಯಾಗಿದೆ. ಸದಾ ಜನರ ಕಷ್ಟದಲ್ಲಿ ಭಾಗಿಯಾಗಿ ಅವರ ನೋವಿಗೆ ಸ್ಪಂಧಿಸುತ್ತೇನೆ ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದರು.
ಸಮೀಪದ ಚಂಡೂರ ಗ್ರಾಮದಲ್ಲಿ ಹಾಲುಮತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಬೇಕೆ ಹೊರತು ಇನ್ನುಳಿದ ಸಂದರ್ಭದಲ್ಲಿ ರಾಜಕೀಯವನ್ನು ಬದಿಗಿಟ್ಟು ನಿಸ್ವಾರ್ಥ ಜನಸೇವೆ ಮಾಡಬೇಕು. ಅದು ನಿಜವಾದ ರಾಜಕಾರಣವೆನಿಸಿಕೊಳ್ಳುತ್ತದೆ ಎಂದರು.
ತಾಲೂಕಿನ ಗ್ರಾಮದ ಅಭಿವೃದ್ದಿ ವಿಷಯದಲ್ಲಿ ಎಲ್ಲರೂ ಒಮ್ಮತದಿಂದ ದುಡಿದಾಗ ಮಾತ್ರ sಸರ್ವಾಂಗೀಣ ಅಭಿವೃದ್ದಿಯಾಗಲು ಸಾಧ್ಯವೆಂದರು. ಈ ಭಾಗದ ರೈತರ ಅಳಲನ್ನು ನಾನು ಕಣ್ಣಾರೆ ಕಂಡವನು ಅವರ ಸುಖದುಖ:ದಲ್ಲಿ ಭಾಗಿಯಾದವನು ಹೀಗಾಗಿ ರೈತರ ಆರ್ಥಿಕ ಪರಿಸ್ಥಿತಿಯ ಅರಿವು ನನಗಿದೆ ಕ್ಷೇತ್ರದ ಜನತೆಗಾಗಿ ನಾನು ಬಿ.ಎಸ್‌ ಯಡಿಯೂರಪ್ಪ ಸೇರಿದಂತೆ ಮುಂತಾದ ನಾಯಕರೊಂದಿಗೆ ಚರ್ಚಿಸಿ ಈ ಭಾಗಕ್ಕೆ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆನ್ನುವ ಕನಸು ನನ್ನದಾಗಿದೆ ಎಂದರು.
ಇಂದಿನ ಕಾಲಘಟ್ಟದಲ್ಲಿ ಮಹಿಳೆಯರಿಗೂ ಶಿಕ್ಷಣವಂತರನ್ನಾಗಿ ಮಾಡುವ ಗುರಿ ಪಾಲಕರದ್ದಾಗಿದೆ,ಸಾಮಾಜಿಕ,ರಾಜಕೀಯ ಸೇರಿದಂತೆ ಮುಖ್ಯವಾಹಿನಿಗೆ ಮಹಿಳೆಯರನ್ನು ಕರೆತರುವ ಮೂಲಕ ಸ್ತ್ರೀಯರಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಮಹತ್ವದ ಕೆಲಸವಾಗಬೇಕಿದೆ ಎಂದ ಅವರು ಉಳ್ಳವರ ಮಕ್ಕಳೇ ಅಕ್ಷರವಂತರಲ್ಲ ಬಡವ ಕೂಲಿಕಾರನ ಮಕ್ಕಳೂ ಕೂಡ ದೊಡ್ಡ ಅಧಿಕಾರಿಯಾಗಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಎಲ್ಲ ಮಕ್ಕಳ ಹತ್ತಿರವೂ ಸೂಪ್ತವಾದ ಪ್ರತಿಭೆಯಿರುತ್ತದೆ ಆದರೆ ಅದನ್ನು ಹೊರತರುವ ಕೆಲಸ ಪಾಲಕರು ಮಾಡಬೇಕು ಆದ ಕಾರಣ ಎಲ್ಲರೂ ತಮ್ಮ ಮಕ್ಕಳಿಗೆ ಗಂಡು, ಹೆಣ್ಣು ಎನ್ನುವ ಬೇಧ ಭಾವ ತೊರೆದು ಸಮಾನವಾದ ಶಿಕ್ಷಣ ನೀಡಬೇಕು ಎಂದರು.
ನಾನು ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡವನು ಯಾವುದೇ ಸಾಮಾಜಿಕ ವ್ಯವಸ್ಥೆಗೆ ರಾಜಿಮಾಡಿಕೊಂಡವನಲ್ಲ,ಜಾತಿ ರಾಜಕಾರಣ ಮಾಡಿ ಮೇಲೆ ಬಂದವನಲ್ಲ,ಕ್ಷೇತ್ರದ ಮತದಾರರು ನನ್ನ ಮೇಲೆ ಪ್ರೀತಿ ವಿಶ್ವಾಸವಿರಿಸಿ ನನ್ನನ್ನು ಚುನಾಯಿಸಿದ್ದಾರೆ ಅವರಿಗೆ ನಾನು ಚಿರ ಋಣಿ ಎಂದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕರ್‌, ಶರಣಪ್ಪ ಹೊಸಮನಿ, ಶಿವಕುಮಾರ ನಾಗಲಾಪೂರಮಠ, ಬಸವರಾಜ ಅಡವಿ, ಚನ್ನಪ್ಪ ಹುನಗುಂದ, ನಾಗಪ್ಪ ಮ್ಯಾಗೇರಿ,ಮಂಜುನಾಥ ಗಟ್ಟೆಪ್ಪನವರ್‌,ಶರಣಪ್ಪ,ವೈ ಎಸ್‌ ಕವಲೂರ, ರಡ್ಡೇರ, ಸಿದ್ದನಗೌಡರ, ಶರಣಪ್ಪ ಬಂಡಿಹಾಳ, ರಾಮನಗೌಡ್ರ, ಪ್ರಕಾಶ ತಗ್ಗೀನ, ಮಹದೇವಪ್ಪ ದಳಪತಿ, ಮುಕಪ್ಪ ಹಂಚಿನಾಳ, ಮಲ್ಲಿಕಾರ್ಜುನ ಹುಲ್ಲೂರ, ಮಲ್ಲಿಕಾರ್ಜುನ ನಾಯಕರ್‌, ನೀಲಪ್ಪ ಕರಿಗಾರ, ಮುಂತಾದವರು ಸೇರಿದಂತೆ ಸುಮಾರು 500 ಕ್ಕೂ ಹಾಲುಮತದ ಸಮಾಜ ಬಾಂದವರು ಕಾರ್ಯಕ್ರಮದಲ್ಲಿ ಇದ್ದರು.

loading...