ನುರಿಸಿದ ಕಬ್ಬಿನ ಬಾಕಿ ನೀಡುವಂತೆ ಮಾಜಿ ಶಾಸಕ ಹೆಗಡೆ ಆಗ್ರಹ

0
8
loading...

ಕನ್ನಡಮ್ಮ ಸುದ್ದಿ-ಕಾರವಾರ: ಕಳೆದ 2016-17 ನೇ ಸಾಲಿನಲ್ಲಿ ನುರಿಸಿದ ಕಬ್ಬಿನ ಬಾಕಿ ಹಣ ಕೂಡಲೇ ನೀಡುವಂತೆ ಮಾಜಿ ಶಾಸಕ ಸುನಿಲ್‌ ಹೆಗೆಡೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿ ನಕುಲ್‌ ಅವರಿಗೆ ಮನವಿ ಸಲ್ಲಿಸಿದ ಸುನೀಲ್‌ ಹೆಗಡೆ, ಕಳೆದ ವರ್ಷದ ಇ.ಆಯ್‌.ಡಿ ಪ್ಯಾರಿ ಸಕ್ಕರೆ ಕಾರ್ಖಾನೆ, ಹಳಿಯಾಳ ಇವರು ಕಬ್ಬು ನುರಿಸುವ ಪೂರ್ವದಲ್ಲಿ ಹಳಿಯಾಳ ತಹಶೀಲ್ದಾರ ಮುಖಾಂತರ ಒಂದು ಆದೇಶವನ್ನು ಹೊರಡಿಸಿದ ಹಿನ್ನಲೆಯಲ್ಲಿ ರೈತರಿಗೆ 305 ರೂ. ನಂತೆ ಕಬ್ಬು ಬೆಳೆಸುವ ರೈತರಿಗೆ ಹಂತ ಹಂತವಾಗಿ ಹಣ ಜಮಾ ಮಾಡುವಂತೆ ಲಿಖಿತ ರೂಪದಲ್ಲಿ ತಿಳಿಸಿರುತ್ತಾರೆ. ಆದರೆ ಇವರ ಮಾತಿಗೆ ನಂಬಿದ ತಾಲೂಕಿನ ಎಲ್ಲಾ ರೈತರು ಬೇರೆ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವವುದನ್ನು ಬಿಟ್ಟು ಹಳಿಯಾಳ ಕಾರ್ಖಾನೆಗೆ ಮಾತ್ರ ಕಬ್ಬು ಪೂರೈಸಿರುತ್ತಾರೆ.
ಆದರೂ ಸಹಿತ ಕೆಲವು ದಿನಗಳ ಹಿಂದೆ ಸಕ್ಕರೆ ಕಾರ್ಖಾನೆಯವರು ಹಾನಿ ತೋರಿಸಿ ನಮಗೆ 305 ರೂ. ನೀಡಲು ಆಗುವುದಿಲ್ಲ ಅಂತ ಲಿಖಿತವಾಗಿ ತಹಶೀಲದಾರ ಹಳಿಯಾಳ ಅವರಿಗೆ ಹೇಳಿರುತ್ತಾರೆ. ಕೊಡಲೇ ನಮಗೆ 305 ರೂ ನಂತೆ ಮಾಡಿಕೊಡಬೇಕು ಎಂದರು.
ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಭಾರತೀಯ ಜನತಾ ಪಾರ್ಟಿ ಹಳಿಯಾಳ ಘಟಕ ಮನವಿಯಲ್ಲಿ ಪ್ರಸ್ಥಾಪಿಸಿದ್ದಾರೆ. ಒಂದು ವೇಳೆ ಒಪ್ಪದೇ ಇದ್ದಲ್ಲಿ ಮುಂದಿನ ದಿನ ನಾವು ಕಾರ್ಖಾನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಾಜಿ ನರಸಾನಿ, ಪ್ರಮೋದ ಹೆಗೆಡೆ, ಗಣಪತಿ ಕಂಜೇಕರ, ಮನೋಹರ ಮೀರಾಶಿ ಹಾಗೂ ಇನ್ನಿತರರು ಇದ್ದರು.

loading...