ನೂತನ ಸೇವೆ ಆರಂಭಿಸಲಿರುವ ಅಂಚೆ ಕಛೇರಿ

0
19
loading...

ನವದೆಹಲಿ: ಅಂಚೆ ಕಚೇರಿ ನೂತನವಾಗಿ ಡಿಜಿಟಲ್ ಬ್ಯಾಂಕಿಂಗ್ ಸೇವೆ ಆರಂಭಿಸಲಿದೆ. ಈ ಮೂಲಕ ಅಂಚೆ ಕಚೇರಿಯ 34 ಕೋಟಿಗೂ ಹೆಚ್ಚಿನ ಉಳಿತಾಯ ಖಾತೆದಾರರಿಗೆ ಇದರ ಲಾಭ ಸಿಗಲಿದೆ. ಸರ್ಕಾರ ಐಪಿಪಿಬಿ ಜೊತೆ ಖಾತೆ ಸಂಪರ್ಕಿಸಲು ಒಪ್ಪಿಗೆ ನೀಡಿದೆ. ಹಾಗಾಗಿ ಖಾತೆದಾರರಿಗೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಸಿಗೋದು ಖಚಿತವಾಗಿದೆ.

ಇದರಿಂದ ಖಾತೆದಾರರಿಗೆ ತುಂಬಾ ಲಾಭವಾಗಲಿದೆ. ಅಂಚೆ ಕಚೇರಿ ಖಾತೆಯಿಂದ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. 17 ಕೋಟಿ ಅಂಚೆ ಕಚೇರಿಯಲ್ಲಿ ಸೇವಿಂಗ್ ಬ್ಯಾಂಕ್ ಅಕೌಂಟ್ ಇದೆ. ಉಳಿದ ಕಚೇರಿಗಳಲ್ಲಿ ತಿಂಗಳ ಸ್ಕೀಂ ಸೇರಿದಂತೆ ಕೆಲ ಸೌಲಭ್ಯಗಳಿವೆ. ಹಣ ವರ್ಗಾವಣೆ ಮಾಡಲು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಆನ್ಲೈನ್ ಮೂಲಕವೇ ಗ್ರಾಹಕರು ಕೆಲಸ ಮುಗಿಸಬಹುದು.

loading...