ನೂರು ವರ್ಷಾ ಬದಕಬಲ್ಲೆ ಎನ್ನುವ ಆತ್ಮವಿಶ್ವಾಸವಿರಲ್ಲಿ: ಸಿದ್ದೇಶ್ವರ ಶ್ರೀಗಳು

0
9
loading...

ಬಸವನಬಾಗೇವಾಡಿ: ಜಗತ್ತಿನಲ್ಲಿ ನೂರು ವರ್ಷ ಬದುಕುಬಲ್ಲೆ ಎನ್ನುವ ಆತ್ಮವಿಶ್ವಾಸ ಪ್ರತಿಯೊಬ್ಬರಲ್ಲಿ ಬರಬೇಕು ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಸಿದ್ಧೇಶ್ವರ ಮಹಾಸ್ವಾಮೀಜಿಯವರು ಹೇಳಿದರು. ಸ್ಥಳೀಯ ಇಂಗಳೇಶ್ವರ ರಸ್ತೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ನಂತರ ಗಣೇಶ ನಗರದ ಯಲ್ಲಾಲಿಂಗ ಮಠದ ಸಭಾಮಂಟಪದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು ಮಣ್ಣಿನಲ್ಲಿ ಎಲ್ಲ ಸಂಪತ್ತುನ್ನು ಕಂಡ ಒಕ್ಕಲಿಗನ ಸಮೀಪ ದೇವರಿದ್ದಾನೆ, ರೈತರಷ್ಟು ಶ್ರೀಮಂತರು ಜಗತ್ತಿನಲ್ಲಿ ಯಾರು ಇಲ್ಲ, ಜಗತ್ತಿನ ರಕ್ಷಕ ರೈತ, ರೈತನ ರಕ್ಷಕ ದೇವರು, ಜಗತ್ತಿನಲ್ಲಿ ಎರಡು ಸಂಪತ್ತುಗಳು ಇವೆ ಎಂದು ಹೇಳಿದರು.
ಅಂತರಂಗದ ಕೃಷಿ, ಹೊರಗಿನ ಕೃಷಿ ಮಾಡಿ ಆನಂದವಾಗಿರುವರೇ ಕೃಷಿಕರು, ರೈತ ಯಾವುದೇ ಶಾಲೆಗೆ ಹೋಗಿಲ್ಲ ಆತನ ದುಡಿಮೆಯಲ್ಲಿ ಯಾವುದೇ ಆಸೆ ಇಲ್ಲದೆ ದುಡಿದು ಜಗತ್ತನೇ ರಕ್ಷಿಸುತ್ತಾನೆ, ಮನುಷ್ಯನ ಬದುಕಿಗೆ ಬಂಗಾರ ಬೆಳೆಯಾಗಬಾರದು ಅದು ಅನ್ನದ ಬೆಳೆಯಾಗಬೇಕು, ಒಕ್ಕಲಿಗ ಸ್ವಾಭಿಮಾನಿಯಾಗಿ ಜೀವನ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ಡಿಸಿಸಿ ಬ್ಯಾಂಕಿನ ಸಿಒ ಕೆ.ಬಿ. ರಾಜಣ್ಣ, ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು, ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಪ್ರಾಸ್ತವಿಕ ಮಾತನಾಡಿದರು, ಅಲ್ಲಾಭಕ್ಷ ಬಿಜಾಪುರ, ಶಿವನಗೌಡ ಬಿರಾದಾರ, ತಹಶೀಲ್ದಾರ ಎಂ.ಎನ್‌.ಚೋರಗಸ್ತಿ, ಬ್ಯಾಂಕಿನ ಉಪಾಧ್ಯಕ್ಷ ಸುರೇಶ ನಾಯಕ, ಮಲ್ಲೇಶಿ ಕಡಕೋಳ, ನಿಂಗಪ್ಪ ಅವಟಿ, ಶ್ರೀಶೈಲ ಪರಮಗೊಂಡ ಸೇರಿದಂತೆ ಇತರರು ಇದ್ದರು ಬ್ಯಾಂಕಿನ ವ್ಯವಸ್ಥಾಪಕ ಪ್ರವೀಣ ಚಿಕ್ಕೊಂಡ ಸ್ವಾಗತಿಸಿದರು, ಅಶೋಕ ಹಂಚಲಿ ನಿರೂಪಿಸಿದರು, ಪ್ರೊ. ಯುವರಾಜ ಮಾದನಶೆಟ್ಟಿ ವಂದಿಸಿದರು.

loading...