ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಪದೋನ್ನತಿಗೆ ಅನುಮತಿ ನೀಡಿದೆ

0
5
loading...

ನವದೆಹಲಿ: ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಪದೋನ್ನತಿ ವಿಚಾರ ಕಡೆಗೂ ಸುಖಾಂತ ಕಂಡಿದೆ. ಉತ್ತರಾಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಪದೀನ್ನತಿಗೆ ಕೇಂದ್ರ ಸರ್ಕಾರ ಅನುಮತಿಸಿದೆ.
ಇದಕ್ಕೆ ಮುನ್ನ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕೆನ್ನುವ ಕೊಲಿಜಿಯಂ ತೀರ್ಮಾನವನ್ನು ತಿರಸ್ಕರಿಸಿದ್ದ ಕೇಂದ್ರ ಸರ್ಕಾರ ಈಗ ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿನೀತ ಸರಣ್ ಅವರೊಂದಿಗೆ ಕೆ.ಎಂ. ಜೋಸೆಫ್ ಅವರನ್ನು ಸಹ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿಸಲು ಸಮ್ಮತಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಲು ಇದಾಗಲೇ ಅರ್ಜಿ ಫಾರ್ಮ್ ಗಳ ವಿತರಣಾ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿದುಬಂದಿದೆ.
ಉನ್ನತ ನ್ಯಾಯಮೂರ್ತಿಗಳ ನೇಮಕಾತಿಗಳ ಬಗ್ಗೆ ಸರ್ಕಾರ ಹಾಗೂ ನ್ಯಾಯಾಂಗಗಳ ನಡುವಿನ ಸಾರ್ವಜನಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಕ್ರಮ ಮಹತ್ವದ್ದೆನಿಸಿಕೊಳ್ಳುತ್ತದೆ. ವರ್ಷದ ಜನವರಿ 10 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಾಧೀಶ ಕೆ. ಎಂ. ಜೋಸೆಫ್ ಅವರ ಹೆಸರನ್ನು ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರ ಹೆಸರಿನೊಡನೆ ಶಿಫಾರಸು ಮಾಡಿತ್ತು. ಆದರೆ ಕೊಲಿಜಿಯಂ ನೀಡಿದ್ದ ಶಿಫಾರಸಿನಂತೆ ಮಲ್ಹೋತ್ರಾ ಅವರನ್ನು ಸುಪ್ರೀಂ ನ್ಯಾಯಮೂರ್ತಿಯನ್ನಾಗಿಸಿದ್ದ ಕೇಂದ್ರ ಜೋಸೆಫ್ ಹೆಸರನ್ನು ತಿರಸ್ಕರಿಸಿತ್ತು.
ಏಪ್ರಿಲ್ ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ದಿಪಕ್ ಮಿಶ್ರಾ ಕಾನೂನು ಸಚಿವ ರವಿಶಂಕರ್ ಪ್ರಸಾದ್ ವರಿಗೆ ಪತ್ರ ಬರೆದು .ಎಂ. ಜೋಸೆಫ್ ಅವರ ಶಿಫಾರಸಿನ ಮರುಪರಿಶೀಲನೆಗೆ ವಿನಂತಿಸಿದ್ದರು.

loading...