ನ್ಯಾಯಾಲಯ ಪ್ರಕರಣಗಳ ವರ್ಗಾವಣೆಗೆ ಮನವಿ

0
7
 

loading...

ರಬಕವಿ-ಬನಹಟ್ಟಿ:ರಾಜ್ಯ ಸರ್ಕಾರದ ಅಧಿಕೃತ ಘೋಷಣೆಯಂತೆ ರಬಕವಿ-ಬನಹಟ್ಟಿಯು ನೂತನ ತಾಲೂಕಾಗಿರುವ ಹಿನ್ನಲೆಯಲ್ಲಿ ಮುಧೋಳ ತಾಲೂಕು ಪೈಕಿ ಮಹಾಲಿಂಗಪೂರ ಆರಕ್ಷಕ ಠಾಣೆಯ ಸುಮಾರು ೧೦ ಹಳ್ಳಿಗಳಾದ ಮಹಾಲಿಂಗಪೂರ, ಬುದ್ನಿ ಪಿ.ಡಿ. ಕೆಸರಗೊಪ್ಪ, ಬಿಸನಾಳ, ಸೈದಾಪುರ, ಢವಳೇಶ್ವರ, ನಂದಗಾಂವ, ಮದಭಾಂವಿ, ಮಾರಾಪುರ ಹಾಗು ಸಂಗಾನಟ್ಟಿ ಗ್ರಾಮಗಳನ್ನು ತೇರದಾಳ ವಿಧಾನಸಭಾ ಕ್ಷೆÃತ್ರ ಹಾಗು ರಬಕವಿ-ಬನಹಟ್ಟಿ ತಾಲೂಕಿಗೆ ಸಂಬಂಧಪಟ್ಟಿದ್ದು, ದಿವಾಣಿ ಮತ್ತು ಕ್ರಿಮಿನಲ್ ಪ್ರಕರಣಗಳು ಈಗಾಗಲೇ ಮುಧೋಳ ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಪ್ರಕರಣಗಳನ್ನು ರಬಕವಿ-ಬನಹಟ್ಟಿ ತಾಲೂಕು ಪೈಕಿ ಬನಹಟ್ಟಿ ಹಿರಿಯ ದಿವಾಣಿ ನ್ಯಾಯಾಲಯ ಮತ್ತು ದಿವಾಣಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕೆಂದು. ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ ನೇತೃತ್ವದಲ್ಲಿ ವಕೀಲರ ನಿಯೋಗವು ಶುಕ್ರವಾರ ಧಾರವಾಡ ಹೈಕೋರ್ಟ್ ಆವರಣದಲ್ಲಿ ಬಾಗಲಕೋಟೆ ಜಿಲ್ಲಾ ಮತ್ತು ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್ ಅವರಿಗೆ ಮನವಿ ನೀಡಿದರು. ಇದಕ್ಕೆ ಸಂಬಂಧ ಸಮರ್ಪಕವಾದ ಉತ್ತರ ದೊರಕಿದ್ದು, ಈ ಕುರಿತು ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಸರಿಪಡಿಸುವ ಭರವಸೆ ನೀಡಿದ್ದಾರೆಂದು ಪುಟಾಣಿ ತಿಳಿಸಿದರು. ಇದೇ ಸಂದರ್ಭ ಹಿರಿಯ ನ್ಯಾಯವಾದಿಗಳಾದ ವಿಜಯ ಹೂಗಾರ, ಹರ್ಷವರ್ಧನ ಪಟವರ್ಧನ, ವೆಂಕಟೇಶ ನಿಂಗಸಾನಿ, ಶಿವರಾಜ ಮುಧೋಳ, ಪ್ರಶಾಂತ ಕಾಡದೇವರ ಉಪಸ್ಥಿತರಿದ್ದರು.

loading...