ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್‍ಗೆ ಬೆಂಬಲಿಸಿ: ಮಾಜಿ ಸಚಿವ ರಾಯರೆಡ್ಡಿ

0
17

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಮುಂಬರುವ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ, ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಪಟ್ಟಣದ ಮತದಾರರ ಆಶೀರ್ವಾದದಿಂದ ಕಾಂಗ್ರೆಸ್ ಆಡಳಿತವನ್ನು ನಡೆಸುವ ಮೂಲಕ ಪಟ್ಟಣದಲ್ಲಿ ಕುಡಿಯುವ ನೀರು, ಸಿಸಿ ರಸ್ತೆ ನಿರ್ಮಾಣ, ಮನೆ ಹಂಚಿಕೆ ಸೇರಿದಂತೆ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವ ಮೂಲಕ ಕಾಂಗ್ರೆಸ್ ಉತ್ತಮ ಆಡಳಿತವನ್ನು ನೀಡಿದೆ. ಈ ಹಿಂದೆ 11 ಸ್ಥಾನಗಳಿದ್ದ ಪಪಂ ಈಗ 15 ವಾರ್ಡುಗಳನ್ನು ಹೊಂದಿದೆ. ಇದರಲ್ಲಿ ಆರು ಜನ ಮಹಿಳೆಯರಿಗೆ ಅವಕಾಶ ನೀಡಿದ್ದು ಶ್ಲಾಘನೀಯ ಎಂದರು.
ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ಸಿಗಲಿ ಎನ್ನುವ ದೃಷ್ಠಿಕೋನವನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ಅಂದು ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿದ್ದ ರಾಜೀವ ಗಾಂಧಿಯವರು ಮಹಿಳೆಯರಿಗಾಗಿ ಮೀಸಲಾತಿ ತರುವ ಮೂಲಕ ಕಾನೂನನ್ನು ಜಾರಿಗೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಗೆಲ್ಲುವುದೆ ಮಾನದಂಡ ಇಟ್ಟುಕೊಳ್ಳದೆ. ಪಕ್ಷದ ಅಭ್ಯರ್ಥಿಗಳು ಉತ್ತಮರಾಗಿರಬೇಕು. ತಮ್ಮ ತಮ್ಮ ವಾರ್ಡ್‍ನಲ್ಲಿ ಹತ್ತು ಹಲವಾರು ಜನಪರ ಕೆಲಸಗಳನ್ನು ಮಾಡುವಂತಾಗಬೇಕು. ಜನರಿಗೆ ಹತ್ತಿರವಾಗುವಂತಹ ಉತ್ತಮ ಅಭ್ಯರ್ಥಿಗಳನ್ನು ಗುರ್ತಿಸುವಂತಾ ಕೆಲಸ ಆಬೇಕಿದೆ. ಮುಂದಿನ ಅವಧಿಯಲ್ಲಿ ಸಹ ಕಾಂಗ್ರೆಸ್ ಪಕ್ಷ ಮತ್ತೆ ಸ್ವಷ್ಟ ಬಹುಮತದೊಂದಿಗೆ 15 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ನಿಶ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವದರಲ್ಲಿಯಾವುದೇ ಸಂದೇಹಬೇಡ ಎಂದರು.
ತಾಲೂಕಿನ ಬಳೂಟಗಿ ಗ್ರಾಮಕ್ಕೆ ಮಂಜೂರಾಗಿದ್ದ ಬುದ್ದ ಬಸವ ಅಂಬೇಡ್ಕರ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ,ನಾನು ಚಾಲನೆ ನೀಡಿದ್ದೆ.ಆದರೆ ಬಿಜೆಪಯವರು ಈಗ ಅದನೆ ಮತ್ತೆ ಅಡಿಗಲ್ ಹಾಕಿ,ಈ ಯೋಜನೆ ನಾನೆ ತಂದಿದ್ದೆನೆ ಎನ್ನುವ ಮನೋಭಾವನೆ ಸರಿಯಲ್ಲ. ನೀರಾವರಿ ಬಗ್ಗೆ ಮಾತನಾಡುವ ಬಿಜೆಪಿಯವರು ತಾಕತ್ತಿದ್ದರೆ ಕೃಷ್ಣ ಬಿ ಸ್ಕಿಂ ಯೋಜನೆಗೆ ಕೇಂದ್ರ ಸರಕಾರದಿಂದ ಅನುದಾನ ತಂದು ನೀರು ತರಲಿ. ಬಂದ ಮೇಲೆ ನಾನೇ ಅವರಿಗೆ ಸನ್ಮಾನ ಮಾಡುವೇ. ತಾಲೂಕಿನ ಸಮಗ್ರ ನೀರಾವರಿ ಯೊಜನೆ ಜಾರಿಗೆ ತರುವಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಹನಮಂತಗೌಡ ಪಾಟೀಲ್, ಹೊಳೆಯಮ್ಮ ಪೋಲೀಸ್ ಪಾಟೀಲ್, ಗಿರಿಜಾ ಸಂಗಟಿ, ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡರ, ಪಪಂ ಅಧ್ಯಕ್ಷೆ ಜಯಶ್ರೀ ಅರಕೇರಿ, ಉಪಾಧ್ಯಕ್ಷ ಮೈಬೂಬಸಾಬ ಕನಕಗಿರಿ, ಬಿ.ಎಂ.ಶಿರೂರು, ಯಂಕಣ್ಣ ಯರಾಶಿ, ರಾಮಣ್ಣ ಸಾಲಭಾವಿ, ಶ್ರೀಪಾದಪ್ಪ ಅಧಿಕಾರಿ, ಕೆರಿಬಸಪ್ಪ ನಿಡಗುಂಡಿ, ಹನಮಂತರಾವ್ ದೇಸಾಯಿ, ಸಂಗಣ್ಣ ಟೆಂಗಿನಕಾಯಿ, ಅಕ್ತರಸಾಬ ಖಾಜಿ, ಮೌಲಾಹುಸೇನ್ ಬುಲ್ಡಿಯಾರ, ಜಯಶ್ರೀ ಕಂದಕೂರ, ಶರಣಮ್ಮ ಪೂಜಾರ, ರೇವಣಪ್ಪ ಹಿರೇಕುಬರ ಇದ್ದರು. ರಹಿಮಾನಸಾಬ ನಾಯಕ ನಿರೂಪಿಸಿ, ಸ್ವಾಗತಿಸಿದರು.

loading...