ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ: ಶಾಸಕ ಬೊಮ್ಮಾಯಿ

0
5
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ: ಶಾಲಾ ಮಕ್ಕಳಿಗೆ ಪಠ್ಯದ ಜೊತೆಗೆ ಆಟವೂ ಮುಖ್ಯವಾಗಿದ್ದು, ದೈಹಿಕ ಹಾಗೂ ಮಾನಸಿಕ ಸ್ಥೈರ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2018/19 ನೇ ಸಾಲಿನ ತಡಸ್ ವಲಯ ಸಮೂಹ ಮಟ್ಟದ ಕ್ರೀಡಾಕೂಟದ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯೆನ್ನುವುದು ವ್ಯಕ್ತಿ ಪಾಲ್ಗೊಳ್ಳುವಿಕೆ, ಗುರುತಿಸುವಿಕೆ, ಶಿಸ್ತು. ಸಮಯ ಪ್ರಜ್ಞೆ ಪರಿಶ್ರಮದ ಅರಿವು ವಿದ್ಯಾರ್ಥಿ ದೆಸೆಯಲ್ಲಿ ಮೂಡಿಸುತ್ತದೆ. ಗೆಲುವಿನ ಮಹತ್ವ ಸೋಲಿನ ಅನುಭವವಾದಾಗ ಸಾಧ್ಯ. ಆತ್ಮವಿಶ್ವಾಸ ಗಟ್ಟಿಗೊಳಸಿಕೊಳ್ಳಲು ಕ್ರೀಡೆ ಅವಶ್ಯಕವೆಂದರು.
ಮಕ್ಕಳ ಹೆಚ್ಚು ಪರಿಶ್ರಮ ಪಟ್ಟು ವಿದ್ಯಾವಂತರಾಗಿ ಶಾಲೆಗೆ ಕೀರ್ತಿ ತರಬೇಕು. ಚರಿತ್ರೆಗಿಂತ ವ್ಯಕ್ತಿ ಚಾರಿತ್ರೆ ಮುಖ್ಯವಾಗಿದ್ದು, ಸಾಧಿಸುವ ಛಲ ನಿಮ್ಮಲ್ಲಿರಬೇಕೆಂದು ಸಲಹೆ ನೀಡಿದರು.
ಶಾಸಕರು ಹಾಗೂ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ನೀಡಿದ ಶಶಿಧರ ಯಲಿಗಾರ ಅವರಿಗೆ ಹಾಗೂ ಊಟದ ವ್ಯವಸ್ಥೆ ಮಾಡಿದ ಗ್ರಾಮದ ಗಣ್ಯರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಐಶ್ವರ್ಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಗ್ರಾ.ಪಂ ಸದಸ್ಯ ಚನ್ನಪ್ಪ ಬಿಂದಲಿ ಸ್ವಾಗತಿಸಿದರು, ತಾ.ಪಂ. ಸದಸ್ಯೆ ಸೋಮಕ್ಕ ರಾಠೋಡ, ಶಶಿಧರ ಯಲಿಗಾರ, ಸೋಮಣ್ಣ ಸೂರಗೊಂಡ, ಕಿರಣ ಅವರಾಧಿ, ಮಹಾದೇವಪ್ಪ ದೇಟೀನ, ಮಲ್ಲನಗೌಡ್ರ ಪಾಟೀಲ, ಎಸ್,ಆರ್, ಅದರಗುಂಚಿ, ಭೂಪಾಲ ಪಾಯಣ್ಣವರ. ಶೇಖಪ್ಪ ಸೂರಗೊಂಡ, ಮುಖ್ಯ ಶಿಕ್ಷಕ ಪಿ.ಎಲ್.ದೊಡ್ಡಮನಿ, ದೈಹಿಕ ಶಿಕ್ಷಣ ಸಂಯೋಜಕ ಬಿ.ಎಸ್ ಪಟ್ಟಣಶೇಟ್ಟಿ ಇದ್ದರು. ಶಿಕ್ಷಕ ಜಗಧೀಶ ಉಮಚಗಿ ನಿರೂಪಿಸಿದರು.

loading...