ಪತ್ರಕರ್ತರ ಸಂಘದಿಂದ ವಾಜಪೇಯಿಗೆ ಶ್ರದ್ಧಾಂಜಲಿ

0
4
loading...

ಕನ್ನಡಮ್ಮ ಸುದ್ದಿ-ಕುಮಟಾ: ಮಾಜಿ ಪ್ರಧಾನಿ ವಾಜಪೇಯಿ ಅವರು ವಿಧಿವಶರಾದ ಹಿನ್ನೆಲ್ಲೆಯಲ್ಲಿ ಶುಕ್ರವಾರ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಭೆ ನಡೆಯಿತು.
ಪತ್ರಕರ್ತರಾದ ಅನ್ಸಾರ್ ಶೇಖ್, ಸುಬ್ರಾಯ ಭಟ್, ಎಂ ಜಿ ನಾಯ್ಕ, ಪ್ರವೀಣ ಹೆಗಡೆ, ಜಿ ಡಿ ಶಾನಭಾಗ ಗಣೇಶ ರಾವ್ ಮಾತನಾಡಿ, ದೇಶ ಕಂಡ ಮುತ್ಸದ್ಧಿ ರಾಜಕಾರಣಿ ಭಾರತ ರತ್ನ ಎಲ್ಲರ ನೆಚ್ಚಿನ ಹೆಮ್ಮೆಯ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರನ್ನು ನಾವು ಇಂದು ಕಳೆದುಕೊಂಡಿದ್ದೇವೆ. ವಾಜಪೇಯಿರವರು ಬಹಳ ಸರಳ ಜೀವನ ನಡೆಸಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು ಎಂದರು.

ಸಭೆಯ ಪೂರ್ವದಲ್ಲಿ ಎಲ್ಲ ಪತ್ರಕರ್ತರು ವಾಚಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶಂಕರ ಶರ್ಮಾ, ಚರಣರಾಜ್ ನಾಯ್ಕ, ರಾಘವೇಂದ್ರ ಜಿ ದಿವಾಕರ, ನಾಗರಾಜ ಪಟಗಾರ, ರವಿ ಗಾವಡಿ, ದಿನೇಶ ಗಾಂವ್ಕರ್, ಅಮರನಾಥ ಭಟ್, ಮಯೂರ ಪಟಗಾರ, ನಟರಾಜ, ಪ್ರಜ್ವತ್, ಸುಬ್ರಹ್ಮಣ್ಯ, ಗಣಪತಿ ವೈದ್ಯ, ಸಂತೋಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವಿವಿಧಡೆ ಶ್ರದ್ಧಾಂಜಲಿ ಸಭೆ:
ಬಿಜೆಪಿ ಸಂಸ್ಥಾಪಕ, ಅಜಾತ ಶತ್ರು, ಭಾರತ ರತ್ನ ಮಾಜಿ ಪ್ರಧಾನಿ ವಾಜಪೇಯಿ ಅವರ ವಿಧಿವಶರಾದ ಹಿನ್ನೆಲ್ಲೆಯಲ್ಲಿ ಬಿಜೆಪಿ ಕಛೇರಿ ಹಾಗೂ ಪಟ್ಟಣದ ಮೂರುಕಟ್ಟೆಯಲ್ಲಿ ಕುಮಟಾದ ಸಮಸ್ತ ಜನತೆ ಶ್ರದ್ಧಾಂಜಲಿ ಸಭೆ ನಡೆಸಿದರು. ಬಿಜಪಿ ಪ್ರಮುಖರು, ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿ, ನುಡಿ ನಮನ ಸಲ್ಲಿಸಿದರು. ಸಭೆಯ ಆರಂಭದಲ್ಲಿ ವಾಚಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ನಡೆಸಿದರು.

loading...