ಪಪಂ ಚುನಾವಣೆ: ಮತಗಟ್ಟೆ ಪರಿಶೀಲಿಸಿದ ಅಧಿಕಾರಿಗಳು

0
6
loading...

ಯಲಬುರ್ಗಾ: ಸ್ಥಳೀಯ ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸ್ಥಾಪಿಸಿರುವ ಮತಗಟ್ಟೆಗಳನ್ನು ಗುರುವಾರ ಅಧಿಕಾರಿಗಳು ಪರಿಶೀಲಿಸಿದರು. ಯಲಬುರ್ಗಾ ಪಟ್ಟಣದಲ್ಲಿ ಮೊದಲು 11 ವಾರ್ಡುಗಳು ಇತ್ತು. ಆದರೆ ವಾರ್ಡುಗಳ ವಿಂಗಡಣೆಯಿಂದ ಈಗ ಒಟ್ಟು 15 ವಾರ್ಡುಗಳಾಗಿದ್ದಾವೆ. ತಹಸೀಲ್ದಾರ್ ರಮೇಶ ಅಳವಂಡಿಕರ ನೇತೃತ್ವದಲ್ಲಿ ಸಹಿಪ್ರಾಶಾಲೆ.ನಂ2, ಸರಕಾರಿ ಉರ್ದು ಶಾಲೆ, ಸಹಿಪ್ರಾಶಾಲೆ, ನಂ3.ಸರಕಾರಿ ಪದವಿ ಪೂರ್ವ ಕಾಲೇಜು, ಶಾಸಕರ ಶಾಲೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸ್ಥಾಪಿಸಿರುವ ಮತಗಟ್ಟೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ವಿಜಯಕುಮಾರ ಗುಂಡೂರು, ಸಿಪಿಐ ರಮೇಶ ರೋಟ್ಟಿ, ಪಿಎಸ್ ಐ ವಿನಾಯಕ, ಪಪಂ ಮುಖ್ಯಾಧಿಕಾರಿ ನಾಗೇಶ, ಸಿಬ್ಬಂದಿ ಯಂಕಣ್ಣ, ಬಸಲಿಂಗಪ್ಪ ಭಾಸ್ಕರ ಇದ್ದರು.

loading...