ಪರಿಸರದ ನಿರ್ಲಕ್ಷ್ಯ ಪ್ರಕೃತಿ ಮುನಿಸಿಗೆ ಕಾರಣ: ಶ್ರೀಗಳು

0
2
loading...

ಕನ್ನಡಮ್ಮ ಸುದ್ದಿ-ಗದಗ: ಪ್ರಕೃತಿಯ ಮೇಲಿನ ನಿರಂತರ ಅಲಕ್ಷ್ಯದಿಂದ ಮಾನವ ಇಂದು ಪ್ರಕೃತಿಯ ಮುನಿಸಿಗೆ ಒಳಗಾಗಿದ್ದಾನೆ. ಪ್ರತೀಕಾರದ ರೀತಿಯಲ್ಲಿ ಜಲಪ್ರಳಯ, ಭೂಕಂಪದಂತಹ ಘಟನೆಗಳು ಘಟಿಸುತ್ತಿವೆ ಎಂದು ಗದುಗಿನ ಜ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದರು. ಸ್ವಾತಂತ್ರ್ಯಾ ನಂತರ ಭಾರತ ಹಲವಾರು ರಂಗಗಳಲ್ಲಿ ಅಭೂತಪೂರ್ವ ಸಾಧನೆ ತೋರಿದೆ. ಬಹುಭಾಷೆ, ಬಹುಜಾತಿ, ಬಹುಸಂಸ್ಕøತಿಯ ಈ ದೇಶ ಹಲವಾರು ವರ್ಷಗಳ ಕಾಲ ಮುಸ್ಲಿಂರ, ಬ್ರಿಟಿಷರ ಆಳ್ವಿಕೆಯ ಪ್ರಭಾವಕ್ಕೆ ಒಳಗಾಗಿ ಅನೇಕ ಏಳುಬೀಳುಗಳನ್ನು ಕಂಡಿದೆ. ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿಗೆ ಮುನ್ನುಡಿಯಾಗಿ ಭಾರತದ ಸಂವಿಧಾನ ರಚನೆಗೊಂಡಿದ್ದು, ಆ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಅವಕಾಶಗಳು ದೊರಕಿವೆ. ಪ್ರಜಾಪ್ರಭುತ್ವದ ಮೌಲ್ಯಗಳ ಆಚರಣೆಯಿಂದ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಗುರುತಿಸುವಂತಾಗಿದೆ ಎಂದರು. ಡಾ. ರಾಜಶೇಖರ ಜಮದಂಡಿ ಮಾತನಾಡಿ, ಇಂದು ಭಾರತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಯುವಕರ ಪಡೆಗೆ ಸೂಕ್ತ ಮಾರ್ಗದರ್ಶನದ ಕೊರತೆ ಕಾಡುತ್ತಿದೆ. ದಂಗೆ, ಹೋರಾಟದ ನೆಪದಲ್ಲಿ ನಮ್ಮ ಆಸ್ತಿಯನ್ನೇ ನಾವು ಹಾಳು ಮಾಡುತ್ತಿದ್ದೇವೆ. ನಮ್ಮ ಸಂಸ್ಕøತಿಯನ್ನು ಪಾಶ್ಚಾತ್ಯರು ಅನುಕರಿಸುತ್ತಿದ್ದರೆ ನಾವು ಪಾಶ್ಚಾತ್ಯರನ್ನು ಅನುಕರಿಸುತ್ತಿರುವದು ವಿಪರ್ಯಾಸದ ಸಂಗತಿಯಾಗಿದೆ. ದೇಶದ ಸಂಪನ್ಮೂಲ ಸದ್ಭಳಕೆಯಾಗಬೇಕು. ನಿರುದ್ಯೋಗ, ಭ್ರಷ್ಠಾಚಾರದಂತದ ಸಮಸ್ಯೆಗಳಿಗೆ ಪರಿಹಾರ ದೊರಕುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಬೆಳೆಯಬೇಕು. ವಿದೇಶಿ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ ಸ್ವದೇಶಿ ಬಳಕೆಯಿಂದ ಭಾರತದ ಆರ್ಥಿಕ ಶಕ್ತಿಯನ್ನು ಬೆಳೆಸುವ ಕಾರ್ಯವನ್ನು ಮಾಡುವದು ಇಂದಿನ ಅಗತ್ಯವಾಗಿದೆ ಎಂದರು.
ಶ್ರಾವಣ ಮಾಸದ ಅಂಗವಾಗಿ ವಚನ ದರ್ಶನ ಪ್ರವಚನವನ್ನು ನೀಡಿದ ಸಂಗಮೇಶ್ವರದೇವರು ಅನುಭವ ಮಂಟಪ, ಬಸವಕಲ್ಯಾಣ ಇವರು ಮಾತನಾಡಿ, ಸಂಗ ಸಹವಾಸ ಮಹತಿಯನ್ನು ತಿಳಿಸಿದರು. ಸತ್ಸಂಗದಿಂದ ಪರಮಾನಂದ ದೊರೆಯುತ್ತದೆ. ನಿರ್ಮೋಹತ್ವ ಬೆಳೆದು ಬದುಕಿನ ಉನ್ನತಿ ಸಾಧ್ಯವಾಗುತ್ತದೆ ಎಂಬುದನ್ನು ಶರಣರ ವಚನಗಳ ಮೂಲಕ ಉದಾಹರಿಸಿದರು.ಗದಗ ಬೆಟಗೇರಿ ನಗರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುರೇಶ ಕಟ್ಟಿಮನಿ ಅವರನ್ನು ಪೂಜ್ಯರು ಸನ್ಮಾನಿಸಿದರು. ಸಂಮಾನೋತ್ತರವಾಗಿ ಮಾತನಾಡಿ, ಗದಗ ಬೆಟಗೇರಿ ಅವಳಿ ನಗರದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಹಾಗೂ ನಾರಾಯಣ ಹಿರೇಕೊಳಚಿ ಅವರಿಂದ ವಚನ ಸಂಗೀತ ಜರುಗಿತು. ಧರ್ಮಗ್ರಂಥ ಪಠಣವನ್ನು ವೈಷ್ಣವಿ ಕನಾಜ, ವಚನ ಚಿಂತನೆಯನ್ನು ಅನುಷಾ ಕನಾಜ ನೆರವೇರಿಸಿದರು. ವೇಲೂರು ನಾಗರಾಜ ಇದ್ದರು. ಮಂಜುಳಾ ಹಾಸಲಕರ ನಿರೂಪಿಸಿದರು. ಅಧ್ಯಕ್ಷ ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು.

loading...