ಪರಿಸರ ಸರಕ್ಷಣೆ ಎಲ್ಲರ ಕರ್ತವ್ಯ: ಶಾಸಕ ಪಾಟೀಲ

0
7
loading...

ಕನ್ನಡಮ್ಮ ಸುದ್ದಿ-ಹಿರೇಕೆರೂರ: ಬರು ಬರುತ್ತಾ ಕಾಡು ಹೋಗಿ ನಾಡಾಗುತ್ತಿದೆ. ಪರಿಸರದಲ್ಲಿ ಗಿಡ ಮರಗಳು ಕಡಿಮೆಯಾಗುತ್ತಿರುವುದರಿಂದ ಮಳೆ, ಬೆಳೆ ಕಡಿಮೆಯಾಗುತ್ತಿದೆ. ಪರಿಸರದಲ್ಲಿ ಗಿಡಮರಗಳು ಇದ್ದರೆ ಉತ್ತಮ ಗಾಳಿ, ಉತ್ತಮ ಮಳೆ ಬರುತ್ತದೆ. ಆದರೆ ಪರಿಸರದ ಬಗ್ಗೆ ಹೆಚ್ಚಾಗಿ ಗಮನಹರಿಸುತ್ತಿಲ್ಲ ಇದರಿಂದ ಮುಂದಿನ ದಿನದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಉತ್ತಮ ಮಳೆ ಗಾಳಿಗೆ ಗಿಡಮರಗಳು ಬೇಕು ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.
ಹಸಿರು ಕ್ರಾಂತಿ ನಿಮಿತ್ತ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ 5 ನೇ ಅಂಗನವಾಡಿ ಕೇಂದ್ರದ ಆವರಣದಲ್ಲಿ ಸಸಿ ನಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪರಿಸರದಲ್ಲಿ ಪ್ರತಿಯೊಬ್ಬರು ಒಂದು ಸಸಿ ನೆಟ್ಟು ಅದನ್ನು ಬೆಳೆಸಿ ಮರವನ್ನಾಗಿ ಮಾಡಿದರೆ ಅದು ನಮಗೆ ಉತ್ತಮ ಗಾಳಿ ನೀಡುತ್ತದೆ. ಗಿಡ ಮರಗಳನ್ನು ಬೆಳಸುವುದು ಕೇವಲ ಅರಣ್ಯ ಇಲಾಖೆಯ ಕರ್ತವ್ಯ ಅಲ್ಲ. ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದರು.
ರಟ್ಟೀಹಳ್ಳಿ ಕ್ಷೇತ್ರದ ಜಿ.ಪಂ.ಸದಸ್ಯ ಪ್ರಕಾಶ ಬನ್ನಿಕೋಡ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿ, ಪರಿಸರದಲ್ಲಿ ಸಸಿ ನಡುವದಷ್ಟೆ ಮುಖ್ಯವಲ್ಲ ನೆಟ್ಟ ಸಸಿಯನ್ನು ಮರವನ್ನಾಗಿ ಮಾಡಿದರೆ ಮಾತ್ರ ಸಸಿ ನಟ್ಟಿದಕ್ಕೂ ಸಾರ್ಥಕವಾಗುತ್ತದೆ. ನೆಟ್ಟ ಸಸಿಗಳನ್ನು ಬೆಳಸಿ ದೊಡ್ಡದಾಗಿ ಮಾಡಿದರೆ ಅದು ನಮಗೆ ನೆರಳು,ಹಣ್ಣು,ಉತ್ತಮ ವಾತಾರವಣವನ್ನು ನೀಡುತ್ತದೆ. ಗಿಡ ಮರಗಳನ್ನು ಬೆಳಸುವುದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ನಜೀರಸಾಬ ದೊಡ್ಡಮನಿ,ತಾ.ಪಂ.ಅಧ್ಯಕ್ಷ ಹೇಮಣ್ಣ ಮುದರಡ್ಡೇರ, ಜಿ.ಪಂ.ಸದಸ್ಯ ಪ್ರಕಾಶ ಬನ್ನಿಕೋಡ, ಎಸ್.ಕೆ.ಕರಿಯಣ್ಣನವರ, ಮಹದೇವಕ್ಕ ಗೋಪಕ್ಕಳಿ, ಸುಮಿತ್ರಾ ಪಾಟೀಲ, ಗ್ರಾ.ಪಂ.ಉಪಾಧ್ಯಕ್ಷೆ ಸುಧಾ ನಾಗರಾಜ ಯಡಚಿ, ಬಸನಗೌಡ ಕರೇಗೌಡ್ರ, ಎಪಿಎಂಸಿ ಸದಸ್ಯ ಮಹೇಶಪ್ಪ ನೇಶ್ವಿ, ಕರಬಸಪ್ಪ ಕುಸಗೂರು, ಪಿಡಿಒ ಪ್ರಕಾಶ ಸುಂಕಾಪುರ, ಅಂಗನವಾಡಿ ಮೇಲ್ವಚಾರಕಿ ಗೀತಾ ಸಜ್ಜನ, ಕಾರ್ಯಕರ್ತೆ ಸವಿತಾ ತಾವರಗಿ, ಗ್ರಾ.ಪಂ.ಸದಸ್ಯರು ಇದ್ದರು.

loading...