ಪರ್ಯಾಯ ವ್ಯವಸ್ಥೆ ಇಲ್ಲದೆ ಕಿತ್ತು ಹೊಂಟಿದೆ ಡಾಂಬರ

0
3
loading...

ಕನ್ನಡಮ್ಮ ಸುದ್ದಿ-ಸಾವಳಗಿ: ಗ್ರಾಮ ಪಂಚಾಯತ ವಾರ್ಡಗಳ ಸಮಸ್ಯೆಗಳಿಗೆ ಕಿವಿಯಾಗುವವರೇ ಇಲ್ಲದಂತಾಗಿದೆ ಸಾವಳಗಿಯಲ್ಲಿ, ಪ್ರತಿ ವಾರ್ಡಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಎದ್ದು ಕಾಣುತ್ತಿದೆ, ಸಮಸ್ಯೆಗಳಿರುವಲ್ಲಿ ಸದಸ್ಯರು ಬೇಟಿ ನೀಡಿ ಸಮಸ್ಯೆ ಪರಿಹಾರ ನೀಡುವದನ್ನು ಬಿಟ್ಟು ಅವುಗಳನ್ನು ನೋಡಿ ಸುಮ್ಮನಿರುವುದು ವಿಪರ್ಯಾಸವೇ ಸರೀ ಪರ್ಯಾಯ ವ್ಯವಸ್ಥೆ ಇಲ್ಲದೆ ಮೂರನಾಲ್ಕು ತಿಂಗಳಿನಿಂದ ನಡು ರಸ್ತೆ ಮೇಲೆ ನೀರು ಹರಿದು ಅರ್ದ ಡಾಂಬರ ಕಿತ್ತು ಹೊದರು ಈವರೆಗೂ ಯಾವೋಬ್ಬ ಸದಸ್ಯರು ಇತ್ತ ಸರಿಪಡಿಸುವ ಗೋಜಿಗೆ ಹೋಗಿಲ್ಲಾ.
ಟ್ಯಾಂಕರ ನೀರು ರಸ್ತೆ ನಿಂತು ಮಹಿಳೆಯರು, ವೃದ್ದರು ಎಲ್ಲಿ ಜಾರಿ ಬಿದ್ದು ಕಾಲ ಮರ‍್ಕೊಂತಿವೋ ಎಂದು ಜೀವ ಕೈಯ್ಯಾಗ ಹಿಡ್ಕೊಂಡು ಸಂಚರಿಸಬೇಕಾಗಿದೆ. ನಾಲ್ಕೆöÊದು ತಿಂಗಳಿನಿಂದ ನಡು ರಸ್ಯೆಯಲ್ಲೆ ನೀರು ನಿಂತು ಬಿಟ್ಟಿದೆ, ಗಬ್ಬ ರಾಡಿ ಆಗೈತಿ, ಸೋಳ್ಳೆಗಳು ಇಲ್ಲಿ ಹೆಚ್ಚಾಗೈತಿ, ಚರಂಡಿ ವ್ಯವಸ್ಥೆ ಮಾಡಿ ನೀರು ಸರಾಗವಾಗಿ ಹೊಗುವಂತೆ ಮಾಡಬೇಕಾದ ಗ್ರಾಮ ಪಂಚಾಯತ ಸದಸ್ಯರು ಆ ಗೋಜಿಗೆ ಹೋಗಿಲ್ಲಾ. ಗ್ರಾಮ ಪಂಚಾಯತ ಸದಸ್ಯರ ಮನೆ ಮುಂದೆನೇ ಈ ಪರಿಸ್ಥಿತಿ ಇದೆ, ಸಾಮಾನ್ಯರ ಪಾಡು ಏನಾಗಿರಬಾರದು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

loading...