ಪಶ್ಚಿಮ ಇರಾನ್‍ನಲ್ಲಿ ಸರಣಿ ಭೂಕಂಪ

0
8
loading...

ಟೆಹ್ರಾನ್ : ಪಶ್ಚಿಮ ಇರಾನ್‍ನಲ್ಲಿ ಸರಣಿ ಭೂಕಂಪವಾಗಿ ಓರ್ವ ಮೃತಪಟ್ಟು , ನೂರಾರು ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ ಇರಾನ್ ನ ಕೆರ್ಮಾನ್ ಶಾಹ್ ಪ್ರಾಂತ್ಯದ ಜಾವನ್‍ರುಡ್ ನಗರದಲ್ಲಿ ಎರಡು ಬಾರಿ ಭೂ ಕಂಪಿಸಿತ್ತು. ರಿಕ್ಟರ್ ಮಾಪಕದಲ್ಲಿ 4.4 ಮತ್ತು 4.2 ತೀವ್ರತೆ ದಾಖಲಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

70 ವರ್ಷದ ವ್ಯಕ್ತಿಯೊಬ್ಬರು ಭೂಕಂಪದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇರಾನ್‍ನಲ್ಲಿ ನವೆಂಬರ್ 2017ರಲ್ಲಿ 7.3 ತೀವ್ರತೆಯ ಭೂಕಂಪನವು ಒಂದೇ ಪ್ರದೇಶದಲ್ಲಿ ಸಂಭವಿಸಿ 530 ಜನ ಸಾವಿಗೀಡಾಗಿದ್ದರು. ಸಹಸ್ರಾರು ಮಂದಿ ಗಾಯಗೊಂಡಿದ್ದರು.

loading...