ಪಾಲಕರು ಮಕ್ಕಳ ಓದಿನಕಡೆಗೆ ಕಾಳಜಿ ವಹಿಸಿ

0
7
loading...

ಗುಳೇದಗುಡ್ಡ: ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಕರೊಂದಿಗೆ ಕೈಚೋಡಿಸಬೇಕು. ಮಕ್ಕಳ ಓದಿನ ಕಡೆಗೆ ಪಾಲಕರೂ ಕಾಳಜಿ ವಹಿಸಬೇಕು ಎಂದು ಉಪಪ್ರಾಚಾರ್ಯ ಮನೋಹರ ಚಲವಾದಿ ಹೇಳಿದರು.
ಅವರು ಇಲ್ಲಿನ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಒದಿನ ಬಗ್ಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಪಾಲಕರು ನೇರವಾಗಿ ಶಾಲೆಗೆ ಬಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸರ್ಕಾರ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿದೆ. ಪಾಲಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಸಣ್ಣಪುಟ್ಟ ಕಾರಣಗಳಿಗೆ ಮಕ್ಕಳನ್ನು ಶಾಲೆ ತಪ್ಪಿಸದಂತೆ ನೋಡಿಕೊಳ್ಳಬೇಕು ಎಂದರು.

ಶಿಕ್ಷಕರಾದ ಸಿ.ಎಂ. ಕುರುಬರ, ವ್ಹಿ.ಜಿ. ದೇಶಪಾಂಡೆ, ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿದರು, ಕಾರ್ಯಕ್ರಮದಲ್ಲಿ ೧೦ ನೇ ತರಗತಿಯ ವಿದ್ಯಾರ್ಥಿನಿಯರ ತಾಯಂದಿರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಎಲ್.ಪಿ. ಗುಗ್ಗರಿಗೌಡರ ನಿರೂಪಿಸಿದರು. ಜಯಶ್ರಿÃ ಆಲೂರವರು ವಂದಿಸಿದರು.

loading...