ಪಿಎಲ್ ಡಿ ಬ್ಯಾಂಕ್ ಚುನಾವಣೆ ದಿನಾಂಕ ಘೋಷನೆ ಮಾಡದಿದ್ದರೆ ಮತ್ತೆ ಧರಣಿ:ಹೆಬ್ಬಾಳಕರ

0
22
loading...

ಪಿಎಲ್ ಡಿ ಬ್ಯಾಂಕ್ ಚುನಾವಣೆ ದಿನಾಂಕ ಘೋಷನೆ ಮಾಡದಿದ್ದರೆ ಮತ್ತೆ ಧರಣಿ:ಹೆಬ್ಬಾಳಕರ

ಕನ್ನಡಮ್ಮ ಸುದ್ದಿ-ಬೆಳಗಾವಿ :ಪಿ ಎಲ್ ಡಿ ಬ್ಯಾಂಕಿನ ಅದ್ಯಕ್ಷರ ಚುನಾವಣೆಯನ್ನು ವಿನಾಕಾರಣ ಮುಂದೂಡಿರುವದನ್ನು ವಿರೋಧಿಸಿ ನಿನ್ನೆ ರಾತ್ರಿ ತಹಶೀಲ್ದಾರ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸಿದ್ದೆ ,ಆದರೆ ಹೆಚ್ಚುವರಿ ಜಿಲ್ಲಾಧಿಕಾರಿಗಳು (ADC) ನಗರ ಪೋಲೀಸ್ ಆಯುಕ್ತರು ಮತ್ತು ಬೆಳಗಾವಿ ಉಪ ವಿಭಾಗಾಧಿಕಾರಿಗಳು ಇಂದು ಮದ್ಯಾಹ್ನದ ವರೆಗೆ ಚುನಾವಣೆಯ ದಿನಾಂಕ ನಿಗದಿ ಮಾಡುವದಾಗಿ ಭರವಸೆ ಕೊಟ್ಟ ಹಿನ್ನಲೆಯಲ್ಲಿ ಅವರ ಮೇಲೆ ವಿಶ್ವಾಸವಿಟ್ಟು ಧರಣಿ ನಿಲ್ಲಿಸಿದ್ದೇನೆ.

ಇಂದು ಮದ್ಯಾಹ್ನ 3 ಘಂಟೆಯವರೆಗೆ ಅವರು ನನಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ವಿಶ್ವಾಸವಿದೆ ಮೂರು ಘಂಟೆಯವರೆಗೆ ನ್ಯಾಯ ಸಿಗದಿದ್ದರೆ 3-30 ಘಂಟೆಯಿಂದ ತಹಶೀಲ್ದಾರ ಕಚೇರಿ ಎದುರು ನ್ಯಾಯ ಸಿಗೋವರೆಗೆ ಧರಣಿ ನಡೆಸುತ್ತೇನೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

loading...