ಪುರಸಭೆ ಚುನಾವಣೆ: ಕಣದಲ್ಲಿ ಉಳಿದ 55 ಅಭ್ಯರ್ಥಿಗಳು

0
40
loading...

ರವಿ ಮೇಗಳಮನಿ
ಕನ್ನಡಮ್ಮ ಸುದ್ದಿ-ಹಿರೇಕೆರೂರ: ಪಟ್ಟಣ ಪಂಚಾಯತಿಯ 20 ವಾರ್ಡ್‌ಗಳಿಗೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಪಕ್ಷೇತರ ಸೇರಿ ಒಟ್ಟು 60 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಇಂದು 5 ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದರಿಂದ ಅಂತಿಮವಾಗಿ 55 ಅಭ್ಯರ್ಥಿಗಳು ಚುನಾವಣೆಯ ಕಣದಲ್ಲಿ ಉಳಿದಿದ್ದಾರೆ.
ಪಟ್ಟಣ ಪಂಚಯಿತಿಯ ಚುನಾವಣೆಗೆ ಆ.29 ರಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿಳಲಿದ್ದು, 31 ಕ್ಕೆ ಮತದಾನ ನಡೆಯಲಿದೆ. ಸೆ.3 ರಂದು ತಹಸೀಲ್ದಾರ ಕಚೇರಿಯಲ್ಲಿ ಮತ ಎಣಿಕೆ ಪ್ರಕ್ರೀಯೆ ಜರುಗಲಿದೆ. ಮತದಾನಕ್ಕಾಗಿ 20 ವಾರ್ಡುಗಳಿಗೆ 20 ಮತಗಟ್ಟೆ ಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ 7 ಸೂಕ್ಷ್ಮ, 2 ಅತಿ ಸೂಕ್ಷ್ಮ, 11 ಸಾಮಾನ್ಯ ಮತಗಟ್ಟೆಗಳಾಗಿದ್ದು, ಪ್ರತಿ ಮತಗಟ್ಟೆಗೆ 4 ಚುನಾವಣೆ ಸಿಬ್ಬಂದಿ ಹಾಗೂ 1 ರಿಂದ 10 ರವರೆಗೆ ತಹಸೀಲ್ದಾರ ಎ.ವಿ.ಶಿಗ್ಗಾಂವಿ ಮತ್ತು 11 ರಿಂದ 20 ರವರೆಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ ಮಲ್ಲಾಡದ ಚುನಾವಣೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಮತದಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರಿಕರಣಗೊಳಿಸಲಾಗುತ್ತಿದೆ.
2018-19ನೇ ಪಟ್ಟಣ ಪಂಚಾಯತಿ ಚುನಾವಣೆಗೆ ಬಿಜೆಪಿಯಿಂದ 15, ಕಾಂಗ್ರೆಸ್‌ನಿಂದ 20, ಜೆಡಿಎಸ್‌ನಿಂದ 8 ಹಾಗೂ ಪಕ್ಷೇತರ 12 ಸೇರಿದಂತೆ ಒಟ್ಟು 55 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಚುನಾವಣೆ ದಿನದಿಂದ ದಿನಕ್ಕೆ ಕಾವೇರ ತೊಡಗಿದ್ದು, ಎಲ್ಲ ಅಭ್ಯರ್ಥಿಗಳು ಈಗಾಗಲೆ ಬಿರುಸಿನ ಮತಯಾಚನೆ ನಡೆಸುತ್ತಿದ್ದಾರೆ.
ವಾರ್ಡ್‌ವಾರ ವಿವರ
1ನೇ ವಾರ್ಡ್‌: ಅಶೋಕ ಜಾಡಬಂಡಿ(ಕಾಂಗ್ರೆಸ್‌), ರಮೇಶ ಬಾತವ್ವನವರ(ಬಿಜೆಪಿ), ಮಾಲತೇಶ ತಿರಕ್ಕಪ್ಪನರ(ಜೆಡಿಎಸ್‌), ರಮೇಶ ತೋರಣಗಟ್ಟಿ(ಪಕ್ಷೇತರ).
2ನೇ ವಾರ್ಡ್‌: ರುದ್ರಗೌಡ ನೀಲನಗೌಡ(ಕಾಂಗ್ರೆಸ್‌), ಮಹೇಂದ್ರ ಬಡಳ್ಳಿ(ಬಿಜೆಪಿ).
3ನೇ ವಾರ್ಡ್‌: ದಿಲ್‌ಶಾ ಬಳಿಗಾರ(ಕಾಂಗ್ರೆಸ್‌), ಮೆಹಬೂಬಿ ರಟ್ಟೀಹಳ್ಳಿ(ಜೆಡಿಎಸ್‌), ನಶೀಮಾ ಶಿಕಾರಿಪುರ(ಪಕ್ಷೇತರ).
4ನೇ ವಾರ್ಡ್‌: ಅಯೂಬಖಾನ್‌ ಪಠಾಣ(ಕಾಂಗ್ರೆಸ್‌), ಸಾವಿತ್ರಾ ಮಾರವಳ್ಳಿ(ಜೆಡಿಎಸ್‌), ಸನಾವುಲ್ಲಾ ಮಕಾಂದಾರ(ಪಕ್ಷೇತರ).
5ನೇ ವಾರ್ಡ್‌: ಶಿವಲೀಲಾ ರಂಗಕ್ಕನವರ(ಕಾಂಗ್ರೆಸ್‌), ಚಂದ್ರಕಲಾ ಕೋರಿಗೌಡರ(ಬಿಜೆಪಿ), ಹಮಿದಾಬಿ ಮುಲ್ಲಾ(ಜೆಡಿಎಸ್‌).
6ನೇ ವಾರ್ಡ್‌: ಮುಜಿಬುರಹಮಾನ ರಿಕಾರ್ಟಿ(ಕಾಂಗ್ರೆಸ್‌) ಹಾಗೂ ಪಕ್ಷೇತರರಾಗಿ ಸೈಯದ್‌ಅಲಿ ಕಿರವಾಡಿ, ಹರೀಶ ಕಲಾಲ.
7ನೇ ವಾರ್ಡ್‌: ಸರಸ್ವತಿ ಬೊಂಗಾಳೆ(ಕಾಂಗ್ರೆಸ್‌), ಮಲ್ಲಿಕಾ ಶೆಟ್ಟಿ(ಬಿಜೆಪಿ), ಶಂಶಾದ ಕುಪ್ಪೇಲೂರ(ಜೆಡಿಎಸ್‌).
8ನೇ ವಾರ್ಡ್‌: ಮಹಮ್ಮದಹುಸೇನ ವಡ್ಡಿನಕಟ್ಟಿ,(ಕಾಂಗ್ರೆಸ್‌) ರಮೇಶ ಕೊಡಿಹಳ್ಳಿ(ಬಿಜೆಪಿ).
9ನೇ ವಾರ್ಡ್‌: ತೊಟೇಶಪ್ಪ ಹಳಕಟ್ಟಿ(ಕಾಂಗ್ರೆಸ್‌), ಕಂಠಾಧರ ಅಂಗಡಿ (ಬಿಜೆಪಿ).
10ನೇ ವಾರ್ಡ್‌: ಗಣೇಶ ಲಾಪೋಜಿ(ಕಾಂಗ್ರೆಸ್‌), ಚಂದ್ರಪ್ಪ ಮಾರವಳ್ಳಿ(ಬಿಜೆಪಿ), ಮನೋಹರ ಗಿರಣಿ(ಜೆಡಿಎಸ್‌)ಿ, ರಾಜು ಕರಡಿ(ಪಕ್ಷೇತರ).
11ನೇ ವಾರ್ಡ್‌: ಹನುಮಂತಪ್ಪ ಕುರುಬರ(ಕಾಂಗ್ರೆಸ್‌), ಹನುಮಂತಪ್ಪ ಮಡಿವಾಳರ(ಬಿಜೆಪಿ), ದಾದಪೀರ್‌ ಜಂಗ್ಲೇಣ್ಣೆನವರ(ಜೆಡಿಎಸ್‌).
12ನೇ ವಾರ್ಡ್‌: ಅನಸೂಯಾ ತಂಬಾಕದ(ಕಾಂಗ್ರೆಸ್‌), ಅರುಣಾ ಹಂಪಾಳಿ(ಬಿಜೆಪಿ).
13ನೇ ವಾರ್ಡ್‌: ಅಲ್ತಾಫಖಾನ್‌ ಪಠಾಣ(ಕಾಂಗ್ರೆಸ್‌), ಮಹ್ಮದಯುಸೂಫ್‌ ಖತಿಬ್‌(ಬಿಜೆಪಿ).
14ನೇ ವಾರ್ಡ್‌: ರಜಿಯಾ ಅಸದಿ(ಕಾಂಗ್ರೆಸ್‌), ಪಕ್ಷೇತರರಾಗಿ ಹಮೀದಾಬಾನು ಗೋಪನಹಳ್ಳಿ, ರೇಹಾನಾ ಬಾನು ಖಾದ್ರಿ.
15ನೇ ವಾರ್ಡ್‌: ಶಿಲ್ಪಾ ಬಡಳ್ಳೇರ(ಕಾಂಗ್ರೆಸ್‌), ಸುಧಾ ಚಿಂದಿ(ಬಿಜೆಪಿ).
16ನೇ ವಾರ್ಡ್‌: ಗುರುಶಾಂತ ಯತ್ತಿನಹಳ್ಳಿ(ಕಾಂಗ್ರೆಸ್‌), ಬಸವರಾಜ ಚಿಂದಿ(ಬಿಜೆಪಿ).
17ನೇ ವಾರ್ಡ್‌: ರೇಣುಕಾ ಮಾಳ್ಳಮ್ಮನವರ(ಕಾಂಗ್ರೆಸ್‌), ಕವಿತಾ ಹಾರ್ನಳ್ಳಿ(ಬಿಜೆಪಿ).
18ನೇ ವಾರ್ಡ್‌: ಹೊನ್ನಪ್ಪ ಸಾಲಿ(ಕಾಂಗ್ರೆಸ್‌), ಪ್ರವೀಣ ತಳವಾರ(ಜೆಡಿಎಸ್‌), ಪಕ್ಷೇತರರಾಗಿ ಬಸವರಾಜ ಕಟ್ಟಿಮನಿ, ಆನಂದ ನಾಯ್ಕರ.
19ನೇ ವಾರ್ಡ್‌: ಮಧು ಪಾಟೀಲ(ಕಾಂಗ್ರೆಸ್‌), ವಿಜಯಶ್ರೀ ಬಂಗೇರ(ಬಿಜೆಪಿ), ಗೀತಾ ದಂಡಗಿಹಳ್ಳಿ(ಪಕ್ಷೇತರ).
20ನೇ ವಾರ್ಡ್‌: ಕುಸುಮಾ ಬಣಕಾರ(ಕಾಂಗ್ರೆಸ್‌), ರತ್ನಾ ಪುಟ್ಟಕ್ಕಳವರ(ಬಿಜೆಪಿ), ವಿಶಾಲಾಕ್ಷಿ ಬಿಳಿಕೇರ (ಪಕ್ಷೇತರ).

loading...