ಪುರಸಭೆ ಚುನಾವಣೆ: ಮತದಾರರ ಒಲೈಕೆಗಾಗಿ ಅಭ್ಯರ್ಥಿಗಳ ಕಸರತ್ತು

0
5
loading...

ಮಹಾಂತೇಶ ಹಡಪದ
ರೋಣ: ಪಟ್ಟಣದ ಪುರಸಭೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲಿದೆ. ಚುನಾವಣೆಯ ಘೋಷಣೆಯಾದಾಗಿನಿಂದ ಅಭ್ಯರ್ಥಿಗಳ ಹುಡುಕಾಟವು ಜೋರಾಗಿತ್ತು. ಗೆಲ್ಲುವ ಕುದುರೆಯನ್ನು ನೋಡಿಯೇ ಅಭ್ಯರ್ಥಿಗಳ ಆಯ್ಕೆಯಲ್ಲ್ಲಿ ಸ್ಥಳೀಯ ಶಾಸಕರ ಪಾತ್ರ ಅಮೋಘವಾಗಿತ್ತು. ಚುನಾವಣೆಯ ನಾಮಪತ್ರ ಸಲ್ಲಿಕೆಯು ಪೂರ್ಣಗೊಂಡು ಸೋಮವಾರ ಪರೀಶೀಲನೆಯಲ್ಲಿ ತೊಡಗಿದ್ದಾರೆ.ಬಿರುಸಿನ ಪ್ರಚಾರ: ಪಟ್ಟಣದಲ್ಲಿ ಪ್ರಮುಖವಾಗಿ 23 ವಾರ್ಡ್‍ಗಳನ್ನು ಹೊಂದಿರುವ ಪುರಸಭೆಯಲ್ಲಿ ಈಗಾಗಲೇ ಅಧಿಕೃತ ಅಭ್ಯರ್ಥಿಗಳ ಪಟ್ಟಿಯು ಬಿಡುಗಡೆಗೊಂಡಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿ ಗೆಲುವಿನ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಪ್ರತಿ ವಾರ್ಡಗಳಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಸೋಮವಾರ ನಾಮಪತ್ರಗಳ ಪರೀಶೀಲನೆಯಲ್ಲಿ ಒಬ್ಬ ಅಭ್ಯರ್ಥಿಯ ನಾಮಪತ್ರವು ತಿರಸ್ಕøತಗೊಂಡಿದೆ.ಗೆಲುವು ಯಾರ ಪಾಲಿಗೆ: ಸ್ಥಳೀಯ ಚುನಾವಣೆಯು ಪಟ್ಟಣದಲ್ಲಿ ಒಂದು ರೀತಿಯಲ್ಲಿ ವಿಧಾನಸಭಾ ಕ್ಷೇತ್ರದಂತೆಯೇ ಬಿಂಬಿತವಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ಪ್ರತಿಷ್ಠಿತವಾಗಿದ್ದು, ಗೆಲುವಿಗಾಗಿ ತಮ್ಮದೇ ರೀತಿಯಲ್ಲಿ ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.
ಪ್ರತಿಷ್ಠೆಯ ಸಂಕೇತವಾದ 7ನೇ ವಾರ್ಡ: ಪುರಸಭೆಯ ಚುನಾವಣೆಯಲ್ಲಿ ಗೆಲುವು ಯಾರದೆಂಬುದು ನಿಶ್ಚಿತವಾಗಿ ನಿರ್ದರಿಸುವುದೇ ಕಷ್ಟಕರವಾಗಿದ್ದು, ಈ ವಾರ್ಡಗಳಲ್ಲಿ ಮಾಜಿ ಶಾಸಕರ ಪುತ್ರ ಹಾಗೂ ಸದಸ್ಯರ ನಡುವಿನ ಜಿದ್ದಾಜಿದ್ದಿಯಾಗಿಯೇ ಮೊಳಗಿದೆ. ಒಂದೆಡೆ ರೋಣ ಮತಕ್ಷೇತ್ರದ ಮಾಜಿ ಶಾಸಕ ಜಿ.ಎಸ್.ಪಾಟೀಲರ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗುತ್ತದೆ. ವಾರ್ಡಗಳಲ್ಲಿ ಮತದಾರರು ಈ ಬಾರಿಯು ಕಾಂಗ್ರೆಸ್‍ನ್ನು ಕೈಹಿಡಿಯುತ್ತಾರೆ ಎಂಬ ಮಹದಾಸೆ ಒಂದು. ಇನ್ನೊಂದೆಡೆ ಕಾಂಗ್ರೆಸ್ ಆಡಳಿತದಿಂದ ಜನತೆಯು ಬೆಸತ್ತು, ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿಯೇ ಉತ್ತರಿಸಿದ್ದಾರೆ ಎಂದು ಬಿಜೆಪಿಯು ನೀಡುತ್ತಲಿದೆ.ಈ ಬಾರಿಯಲ್ಲಿ ರೋಣ ಮತಕ್ಷೇತ್ರದಲ್ಲಿ ಬಿಜೆಪಿಯು ತನ್ನದೇ ಆದ ಅಡಳಿತವನ್ನು ನಡೆಸುತ್ತಲಿದ್ದು, ಈ ಚುನಾವಣೆಯಲ್ಲಿಯೂ ಕೂಡಾ ಗೆಲುವನ್ನು ಸಾಧಿಸುತ್ತಲಿದೆ ಎಂದು ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಮುಂದಿನ ಲೋಕಸಭೆಯ ಚುನಾವಣೆಯಲ್ಲಿಯೂ ಕೂಡಾ ಬಿಜೆಪಿಯು ಗೆಲುವನ್ನು ಸಾಧಿಸಿ, ದೇಶದ ಏಳಿಗೆಗೆ ಶ್ರಮಿಸುವಂತಾಗುತ್ತದೆ. ಅದಕ್ಕೆ ಸ್ಥಳೀಯ ಚುನಾವಣೆಯೇ ಸಾಕ್ಷಿಯಾಗಲಿವೆ. ವಾರ್ಡ್‍ಗಳ ಮತದಾರರು ಬಿಜೆಪಿ ಗೆಲ್ಲಿಸುತ್ತಾರೆ.
ಮುತ್ತಣ್ಣ ಲಿಂಗನಗೌಡ್ರ, ಬಿಜೆಪಿ ತಾಲೂಕಾಧ್ಯಕ್ಷ ರೋಣ. ನಮ್ಮಲ್ಲಿ ಈ ಬಾರಿಯ ವಿಧಾಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಗ್ಗಟ್ಟಿನ ಕೊರತೆಯುಂಟಾಗಿ, ಸೋಲಿನ ಭೀತಿ ಎದುರಾಗಿತ್ತು. ಆದರೆ ಮತ್ತೇ ಒಂದಾಗಿದೆ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಚಿತವಾಗಿದೆ.
ಸಂಗು ನವಲಗುಂದ, ಕಾಂಗ್ರೆಸ್ ಯುವ ಮುಖಂಡ ರೋಣ.

loading...