ಪುರಸಭೆ ಚುನಾವಣೆ: ೭೪ ಅಭ್ಯರ್ಥಿಗಳ ನಾಮಪತ್ರ ಸಕ್ರಮ

0
8
loading...

ಗುಳೇದಗುಡ್ಡ: ಆ.೩೧ ರಂದು ನಡೆಯಲಿರುವ ಸ್ಥಳೀಯ ಪುರಸಭೆಯ ಚುನಾವಣೆಗೆ ಸ್ಪರ್ಧಿಸಲು ಕೊನೆಯದಿನವಾದ ಶನಿವಾರ ಪುರಸಭೆಯ ಒಟ್ಟು ೨೩ ಸ್ಥಾನಗಳಿಗೆ ಒಟ್ಟು ೮೪ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಸೋಮವಾರ ನಡೆದ ನಾಮಪತ್ರಗಳ ಪರಿಶೀಲನೆ ಬಳಿಕ ೧೦ ನಾಮಪತ್ರಗಳು ತಿರಸ್ಕೃತಗೊಂಡಿದ್ದು ೭೪ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಈಗ ಸ್ಪರ್ಧೆಯಲ್ಲಿ ಉಳಿದಿರುವ ೭೪ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ೨೩, ಬಿಜೆಪಿಯ ೨೦, ಜೆಡಿಎಸ್‌ನ ೧೯ ಹಾಗೂ ಪಕ್ಷೆÃತರವಾಗಿ ೧೨ ಅಭ್ಯರ್ಥಿಗಳ ನಾಮಪತ್ರಗಳು ಸಕ್ರಮವಾಗಿವೆ. ಗುರುವಾರ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದು, ಅಂತಿಮವಾಗಿ ಸ್ಪರ್ಧಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸಂಖ್ಯೆ ಅಂದು ತಿಳಿಯಲಿದೆ.

loading...