ಪುರಸಭೆ ಚುನಾವಣೆ: 76 ಅಪೇಕ್ಷಿತರ ನಾಮಪತ್ರ ಸಲ್ಲಿಕೆ

0
10
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪುರಸಭೆ ಆಡಳಿತ ಮಂಡಳಿಗೆ ಏರ್ಪಡಿಸಲಾಗಿರುವ ಚುನಾವಣೆಯಲ್ಲಿ 23 ವಾರ್ಡ್‍ಗಳಿಗೆ ಒಟ್ಟು 76 ಅಪೇಕ್ಷಿತರು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹಾಗೂ ಭಾಜಪ ಎಲ್ಲಾ ಕ್ಷೇತ್ರಗಳಲ್ಲಿ, ಜೆಡಿಎಸ್ 16 ರಲ್ಲಿ ಮತ್ತು ಶಿವಸೇನಾ ಪಕ್ಷವು ಒಂದು ವಾರ್ಡ್‍ದಲ್ಲಿ ಸ್ಪರ್ಧಿಸಿದೆ. 13 ಪಕ್ಷೇತರರಿದ್ದಾರೆ.
ಕಾಂಗ್ರೆಸ್ ಪಕ್ಷದ ವಾರ್ಡ್‍ವಾರು ವಿವರ ಇಂತಿದೆ:- ವಾರ್ಡ್ 1- ಶ್ರೀನಿವಾಸ ಹ. ಬಡಿಗೇರ, 2- ರುದ್ರಪ್ಪಾ ಯಲ್ಲಪ್ಪಾ ಕೆಸರೇಕರ, 3- ನವೀನ ಪ್ರಕಾಶ ಕಾಟ್ಕರ್, 4- ಪ್ರಭಾಕರ ಕೇಶವ ಗಜಾಕೋಶ, 5- ತುಕಾರಾಮ ಯ. ಜಾವಳ್ಳಿ, 6- ಅಝರುದ್ದೀನ ರಫೀಕ ಬಸರಿಕಟ್ಟಿ, 7- ಸಂತೋಷ ಬಿ. ಬೆಳಗಾಂವಕರ, 8- ಮುಸರತ್‍ಜಹಾ ಬಸಾಪುರ, 9- ಸುರೇಶ ವಗರಾಯ, 10- ಮೋಹನ ಮೇಲಗಿ, 11- ದ್ರೌಪದಿ ಅ. ಅಗಸರ, 12- ಸಾಹೀರಾ ಮಹ್ಮದರಫೀಕ ಮುಗದ, 13- ಪೂಜಾ ದೇಸಾಯಿಸ್ವಾಮಿ, 14- ಸತ್ಯಜೀತ ಗಿರಿ, 15- ಹನೋರಿಯಾ ಮಾಲಾ ಬೃಗಾಂಜಾ, 16- ಸುವರ್ಣಾ ಮಾದರ, 17- ಸುರೇಶ ತಳವಾರ, 18- ರೇಷ್ಮಾ ಮನಿಯಾರ್, 19- ಲಕ್ಷ್ಮೀ ಅ. ವಡ್ಡರ್, 20- ಫಯಾಜ್ ಅಹ್ಮದ ಶೇಖ, 21- ಅನಿಲ ಪಿ. ಗೌಳಿ (ಚವ್ಹಾಣ), 22- ಸುನೀತಾ ಮಾ. ಜಾಧವ, 23- ಶಮೀಮಬಾನು ರೆಹಮಾನ ಜಂಬೂವಾಲೆ.

ಭಾರತೀಯ ಜನತಾ ಪಕ್ಷ:- ವಾರ್ಡ್ 1- ಚಂದ್ರಕಾಂತ ಗಂಗರಾಮ ಕಮ್ಮಾರ, 2- ಶಂಕರ ರಾಮರಾವ ಪಟ್ಟೇಕರ, 3- ನಾಗರಾಜ ಯಲ್ಲಪ್ಪಾ ಸಾಣಿಕೊಪ್ಪ, 4- ಮಂಜುನಾಥ ಪರಶುರಾಮ ಗಜಾಕೋಶ, 5- ಸಂತೋಷ ವಿಷ್ಣು ಘಟಕಾಂಬಳೆ, 6- ಪ್ರಕಾಶ ಕೋನಪ್ಪನವರ, 7- ಶಿವಾಜಿ ನರಸಾನಿ, 8- ಸಲಿಮಾಬಿ ಎಮ್ ಇಟ್ಟಂಗಿವಾಲೆ, 9- ಗೋಪಾಲ ಗರಗ, 10- ಆನಂದ ಕಂಚನಾಳಕರ, 11- ರಾಜಶ್ರೀ ವಾಸುದೇವ ಪೂಜಾರಿ, 12- ನಸ್ರುತಾ ಶೇಖ, 13- ರಾಜಶ್ರೀ ಲಿಂಗರಾಜ ಹಿರೇಮಠ, 14- ಉದಯ ಶ್ರೀಕಾಂತ ಹುಲಿ, 15- ಶಾಂತಾ ಹನುಮಂತ ಹಿರೇಕರ, 16- ನೀತಾ ಗೋವಿಂದ ಭಂಡಗಿ, 17- ಯಲ್ಲಪ್ಪಾ ಹೋನ್ನಜಿ, 18- ರೂಪಾ ಅನಿಲ ಗಿರಿ, 19- ಯಲ್ಲವ್ವಾ ಕರೆಪ್ಪಾ ಭಂಜತ್ರಿ, 20- ಸುಭಾಸ ನಾಯ್ಕ, 21- ಸಂತಾನ ಸಾವಂತ, 22- ಸಂಗೀತಾ ಜಾಧವ, 23- ಮಾಲಾ ರಮೇಶ ಹುಂಡೇಕರ.
ಜನತಾದಳ (ಜಾತ್ಯಾತೀತ):- ವಾರ್ಡ್ 1- ಅನ್ವರಹ್ಮದ ಜ. ಮುಲ್ಲಾ, 2- ಸನಾವುಲ್ಲಾ ಎಂ. ಚಿಗರಿ, 3- ಫಯಾಜ್‍ಅಹ್ಮದ ರ. ಕೋಟೂರ, 4- ರವಿ ರಮೇಶ ವಡ್ಡರ್, 5- ಅಣ್ಣಪ್ಪಾ ಓಬಳೇಶ ವಡ್ಡರ್, 6- ಪ್ರಕಾಶ ಹರಕುಣಿ, 7- ರಮೇಶ ಪೂಜಾರಿ, 8- ನಜ್ಮಾ ಕೊಲ್ಹಾಪುರಿ, 11- ಬಿಬಿಸಫಿಯಾ ಎಂ. ದುರ್ಗಾಡಿ, 12- ಶಬಾನಾ ಸೈಯದಅಲಿ ಅಂಕೋಲೆಕರ, 13- ಚಾಂದಬಿ ನದಾಫ, 16- ಲಕ್ಷ್ಮೀ ಕೆ. ಗದಗ, 20- ಜಾನುಲ್ಲಾ ಎ. ಬಳಗಾರ, 21- ಪ್ರಕಾಶ ಗಿರಿ, 22- ಮೆಹಬೂಬಿ ಐ. ಮುಲ್ಲಾ, 23- ಶಾರದಾ ಎಂ. ಡೊಂಬರ್. ಶಿವಸೇನಾ:- ವಾರ್ಡ್ 4- ಸುಶಾಂತ ಸುಭಾಸ ಚವ್ಹಾಣ. ಪಕ್ಷೇತರರು:- ವಾರ್ಡ್ 5- ಸಿದ್ರಾಮಪ್ಪಾ ದಾನಪ್ಪನವರ, 7- ವಾಮನ ಪೂಜಾರಿ, ಶಂಕರ ಬೆಳಗಾಂವಕರ, ಪ್ರಸಾದ ಹುಣ್ಸವಾಡಕರ, 12- ಅಮೀನಾಬಿ ಹಸ್ನಾರ ಹಾಜಿಬೇರಿ, 14- ಕಾಮೇಲ್ ಡಿ. ಸಿಕ್ವೇರಾ, 19- ಕರೆವ್ವಾ ಮಲ್ಲೇಶಿ ವಡ್ಡರ್, 20- ಫಾರುಕ ಬಾಳೇಕುಂದ್ರಿ, 21- ಅಕ್ಬರಸಾಬ ಡಂಕವಾಲೆ, ಕ್ಲಾರೆನ್ಸ್ ಸಂತಾನ ಪಿಂಟೋ, 22- ರತ್ನಾ ಅಮೋನಕರ, 23- ಲಕ್ಷ್ಮೀ ವೆಂಕಟೇಶ ಅನಗೊಂಡ, ಪ್ರೇಮಾ ಹನುಮಂತ ಹರಿಜನ.

ಅಧ್ಯಕ್ಷರಿಬ್ಬರಿಗೆ ತಪ್ಪಿದ ಬಿ ಫಾರಂ :-
ಕಾಂಗ್ರೆಸ್ ಪಕ್ಷದ ನಿರ್ಗಮಿತ ಆಡಳಿತ ಮಂಡಳಿಯಲ್ಲಿದ್ದ ಇಬ್ಬರು ಅಧ್ಯಕ್ಷರುಗಳಿಗೆ ಕಾಂಗ್ರೆಸ್ ಪಕ್ಷವು ಬಿ ಫಾರಂ ನೀಡಿಲ್ಲ. ಈ ಪೈಕಿ ಬಿ ಫಾರಂ ವಂಚಿತ ಹಾಲಿ ಅಧ್ಯಕ್ಷ ಶಂಕರ ಬೆಳಗಾಂವಕರ ಅವರು ತಮ್ಮ ವಾರ್ಡ್‍ದಲ್ಲಿ ಮೀಸಲಾತಿ ಬದಲಾದ ಕಾರಣ ತಮಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ವಾರ್ಡ್ ನಂ.7 ರಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೋರ್ವ ಆಕಾಂಕ್ಷಿಯಾಗಿದ್ದ ಮಾಜಿ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಅವರು ತಮಗೆ ಪಕ್ಷ ಅವಕಾಶ ನೀಡದೇ ಇರುವದರಿಂದ ನಾಮಪತ್ರ ಸಲ್ಲಿಸಲಿಲ್ಲ.

loading...