ಪುರಸಭೆ ಸದಸ್ಯರ ಪರ ಸಿ.ಎಸ್‌ ನಾಡಗೌಡ ಮತಯಾಚನೆ

0
9
loading...

ಮುದ್ದೇಬಿಹಾಳ : ಈ ಹಿಂದಿನ ಕಾಂಗ್ರೆಸ್‌ ಸರಕಾರದ ಅಧಿಕಾರದ ಅವಧಿಯಲ್ಲಿ ಜನಪರವಾದ ಉತ್ತಮ ಆಡಳಿತದ ಸಾಧನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ ಜೊತೆಗೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತದಲ್ಲಿರುವದರಿಂದ ಕಾಂಗ್ರೆಸ್‌ ಪಕ್ಷ ಬಹು ಮುಖ್ಯ ಪಾತ್ರ ವಹಿಸಲಿದೆ ಎನ್ನುವ ಕಾರಣಕ್ಕೆ ಸಧ್ಯ ಪ್ರಾರಂಭಗೊಂಡಿರುವ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೆ ಅತೀಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಚೀವ ಸಿ ಎಸ್‌ ನಾಡಗೌಡ ಹೇಳಿದರು. ಪಟ್ಟಣದ ಇಲ್ಲಿನ ತಾಳಿಕೋಟಿ ರಸ್ತೆಯಲ್ಲಿ ಬರುವ ಮೈಬೂಬ ನಗರ ಬಡಾವಣೆ ವಾರ್ಡ ನಂಬರ್‌ 21 ರ ಕಾಂಗ್ರೇಸ್‌ ಅಭ್ಯರ್ಥಿ ಸಾಹೇಬಲಾಲ ರಾಜೇಸಾಬ ದೇಸಾಯಿ ಅವರ ಪರವಾಗಿ ಮತಯಾಚಿಸಿ.

ಈ ವೇಳೆ ಅಭ್ಯರ್ಥಿ ಸಾಹೇಬಲಾಲ ರಾಜೇಸಾಬ ದೇಸಾಯಿ, ಕಾಂಗ್ರೆಸ್‌ ಮುಖಂಡ ಎಸ್‌.ಜಿ ಪಾಟೀಲ, ಕಸಾಪ ಅಧ್ಯಕ್ಷ ಎಂ.ಬಿ ನಾವದಗಿ, ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಮೈಬೂಬ ಟಕ್ಕಳಕಿ, ಮಹಾಂತೇಶ ಸಂಗಾರಡ್ಡಿ, ದಸ್ತಗೀರಸಾಬ ಸಂಕನಾಳ, ಶಿವು ಕಣಕಾಲ, ಮುರ್ತುಜ ನಾಗರಾಳ, ರಹೇಮಾನ ಹಳ್ಳುಋ, ಮೈಬೂಬ ಮುಲ್ಲಾ ಸೇರಿದಂತೆ ಮತ್ತಿತರರು ಇದ್ದರು.

loading...