ಪೊಲೀಸರ ಆರೋಗ್ಯ ಸುಧಾರಣೆಗೆ ಎರಡು ದಿನ ಕಾರ‍್ಯಾಗಾರ:ರಾಜಪ್ಪ

0
3
loading...

ಪೊಲೀಸರ ಆರೋಗ್ಯ ಸುಧಾರಣೆಗೆ ಎರಡು ದಿನ ಕಾರ‍್ಯಾಗಾರ:ರಾಜಪ್ಪ

ಕನ್ನಡಮ್ಮ ಸುದ್ದಿ-ಬೆಳಗಾವಿ:ಪೊಲೀಸರ ಆರೋಗ್ಯ ಸುಧಾರಣೆಗಾಗಿ ಕಾರ್ಯ ಕ್ಷಮತೇ ಹೆಚ್ಚಿಸುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಆರೋಣಾ ಸಂಸ್ಥೆಯ ಸಂಯೋಗದಲ್ಲಿ ಶುಕ್ರವಾರ ಮತ್ತು ಶನಿವಾರ ಆರೋಗ್ಯ ಕರ‍್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಿಸಿ ರಾಜಪ್ಪ ತಿಳಿಸಿದರು.
ಗುರುವಾರ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪೊಲೀಸರರ ಬಿಡುವಿಲ್ಲದ ಕೆಲಸದ ಮದ್ಯ ಪೊಲೀಸ್‌ರ ಒತ್ತಡ ಕಡಿಮೆ ಮಾಡಿಕೊಳ್ಳಲು ಆರೋಗ್ಯದ ಸುಧಾರಣೆ ಅವಶ್ಯಕವಾಗಿದ್ದು ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುವುದು ತಿಳಿಸಲಾಗುವುದು.ಠಾಣೆಗೆ ಬರುವ ಸಾರ್ವಜನಿಕರ ಜೋತೆ ಹೇಗೆ ಸ್ಪಂಧಿಸಬೇಕು ಮತ್ತು ಪೊಲೀಸರ ಮೈಂಡ್ ಸೆಟ್ ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುವುದು ಕರ‍್ಯಾಗಾರ ನಡೆಸಲಾಗುವುದು ಎಂದರು.
ನಗರದಲ್ಲಿ ಕೇಳಿ ಬರುತ್ತಿರುವ ಡ್ರಗ್ಸ್ ಮಾಪಿಯಾ ಬಗ್ಗೆ ಎಲ್ಲ ರೀತಿಯ ಕ್ರಮ ಜರುಗಿಸಲಾಗುವುದು. ನಗರಕ್ಕೆ ಆಗಮಿಸುವ ಎಲ್ಲ ವಾಹನಗಳ ಮೇಲೆ ನಿಗಾವಹಿಸಲಾಗುವುದು ಮತ್ತು ನಗರದ ಹಳೆ ಕಟ್ಟಡಗಳಲ್ಲಿ ಡ್ರಗ್ ಮಾರಾಟದ ಬಗ್ಗೆ ಕೇಳಿ ಬರುತ್ತಿದ್ದು ಇದರ ಬಗ್ಗೆಯೂ ಗಮನವಹಿಸಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಿಕ್ಕೆ ವಿಧ್ಯಾರ್ಥಿಗಳು ಗುರಿಯಾಗುತ್ತಿರುವುದುರಿಂದ ಎಲ್ಲಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು ಮತ್ತು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಯಾವುದೇ ಸಂಸ್ಥೆ ಶಾಮೀಲಾಗಿದ್ದು ಕಂಡು ಬಂದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ನಗರದ ಉದ್ಯಾನ ವನಗಳಲ್ಲಿ ಸಂಜೆ ಕತ್ತಲಾದ ನಂತರ ಅಕ್ರಮ ಚಟುವಟಿಕೆ ನಡೆಯದಂತೆ ಸಂಜೆ ೭ ರ ನಂತರ ವಾಯು ವಿಹಾರವನ್ನು ಉದ್ಯಾನ ವನದಲ್ಲಿ ನಿಷೇಧಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಸಿಪಿ ಸಿಮಾ ಲಾಟಕರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.

loading...