ಪೌಷ್ಠಿಕಾಂಶವಿರುವ ಆಹಾರ ಸೇವಿಸಿ: ಶಾಸಕ ಮಹಾಂತೇಶ 

0
6
loading...

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು : ಇಂದಿನ ದಿನಮಾನಗಳಲ್ಲಿ ಹೆಚ್ಚಿನ ಪೌಷ್ಠಿಕಾಂಶವಿರುವ ಆಹಾರವನ್ನು ಸೇವಿಸಬೇಕು. ಸಿದ್ದಪಡಿಸಿದ್ದ ಆಹಾರಕ್ಕೆ ಮಾರುಹೋಗಿ ಆರೋಗ್ಯವನ್ನು ಕುಂಟಿತಗೊಳಿಸುಕೊಳ್ಳುತ್ತಿದ್ದಾರೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದ ಸಭಾ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದ ಶ್ರಾವಣದ ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿದ್ದ “ಶ್ರಾಮಣದಲ್ಲೊಂದು ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿರಿದ್ಯಾನಗಳಲ್ಲಿನ ಪೌಷ್ಠಿಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವದರಿಂದ ಇವುಗಳ ಮಹತ್ವವನ್ನು ಗ್ರಾಮೀಣ ಮಟ್ಟದಿಂದಲೇ ಪರಿಚಯಿಸುವ ಕಾರ್ಯ ಆಗಬೇಕಿದೆ ಹೇಳಿದರು.
ದೇಶಿಯವಾಗಿ ಹಲವಾರು ಬಗೆಯ ಸಿರಿದಾನ್ಯಗಳನ್ನು ಬೆಳೆಯಲಾಗುತ್ತದ್ದರೂ ಅವುಗಳನ್ನು ನಿರ್ಲಕ್ಷ ಮನೋಭಾವನೆಯಿಂದ ನೊಡುವ ಮುಖಾಂತರ ಆರೋಗ್ಯವನ್ನು ಕುಂಠಿತಗೊಳಿಸಿಕೊಳ್ಳುತ್ತಿದ್ದಾರೆ.ಈಗಿನ ಆಧುನಿಕ ಯುಗದ ವೈವಿಧ್ಯಮಯ ಆಹಾರ ಪದ್ದತಿಗಳಾದ ಪಿಜಾ, ಬರ್ಗರ ಇತಂಹ ಫಾಸ್ಟ್ ಪ್ಮಡ್‌ಗಳಿಂದಾಗಿ ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಎದುರಾಗುತ್ತಿದೆ. ಪರಿಣಾಮ ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಮಾರಣಾಂತಿಕ ರೋಗಗಳಿಗೆ ಒಳಗಾಗುತ್ತಿರುವುದು ವಿಷಾಧಕರ ಸಂಗತಿಯಾಗಿದೆ. ದೇಶಿ ಬೆಳಗಳ ಬಗ್ಗೆ ಹಾಗೂ ಅದರಿಂದ ತಯಾರಿಸಲಾಗುವ ವಿವಿಧ ಖಾಧ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿರುವ ಧರ್ಮಸ್ಥಳ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಗ್ರಾಮೀಣ ಭಾಗದ ಮಹಿಳೆಯರನ್ನು ಸ್ವಾವಲಂಭಿಯಾಗಿ ಜೀವನ ನಡೆಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಅವರಿಂದ ತಯಾರಿಸಿದ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡಲು ನಿಮ್ಮ ಸಂಸ್ಥೆಯು ಒಂದು ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಬೇಕು ಇದಕ್ಕೆ ಬೇಕಾದ ಕಟ್ಟಡದ ವ್ಯವಸ್ಥೆ ಮಾಡಿಕೊಡುತ್ತೆÃನೆ ಎಂದು ಹೇಳಿದರು.
ಭಾರತೀಯ ಕೃಷಿಕ ಸಮಾಜದ ತಾಲೂಕಾ ಅಧ್ಯಕ್ಷ ಡಾ|| ಜಗದೀಶ ಹಾರೂಗೊಪ್ಪ ಮಾತನಾಡಿ, ಸಿರಿಧಾನ್ಯಗಳ ಬಳಕೆಯಿಂದ ಆಗುವ ಮಹತ್ವವನ್ನು ತಿಳಿಸಿರು. ರಾಜಗುರು ಸಂಸ್ಥಾನ ಕಲ್ಮಠದ ಮಡೀವಾಳ ರಾಜಯೋಗೀಂದ್ರ ಸ್ವಾಮೀಜಿ, ಆರ್ಶಿವಚನ ನೀಡಿದರು, ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ಉಂಡೆ, ಚಕುಲಿ, ಹೊಳಿಗೆ, ಮೋಸರಅನ್ನ, ಉಪ್ಪಿಟ್ಟು, ಇಡ್ಲಿ, ಪೈಸಾ, ರಾಗಿ ಆಮ್ಲಿ, ಮಂಜಿಗೆ ಸೇರಿದಂತೆ ೭೦ ಕ್ಕೂ ಹೆಚ್ಚು ದೇಶಿ ಆಹಾರ ಪದಾರ್ಥಗಳನ್ನು ಪ್ರಧರ್ಶನಕ್ಕೆ ಹಿಡಲಾಯಿತ್ತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಹನೀಫ ಸುತಗಟ್ಟಿ, ಬಿಜೆಪಿ ರೈತಮೊರ್ಚಾ ಜಿಲ್ಲಾಧ್ಯಕ್ಷ ಬಸನಗೌಡ ಶಿದ್ರಾಮಣಿ, ಧಾರವಾಡದ ಗ್ರಾಮೀಣಾಭಿವೃದ್ಧಿ ಸಂಘದ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ, ಸುರೇಶ ಮೃಲಿ, ಉಮಾದೇವಿ ಬಿಕ್ಕಣ್ಣವರ, ಸೇರಿದಂತೆ ಇತರರು ಇದ್ದರು. ಇದಕ್ಕೂ ಮೊದಲು ಜ್ಞಾನ ವಿಕಾಸ ಸದಸ್ಯರು ದೇಶಭಕ್ತಿ ನೃತ್ಯವನ್ನು ಪ್ರಸ್ತುತ ಪಡಿಸಿದರೆ ಮಹಾದೇವಿ ಹಾಲಗಿಮರಡಿ ಪ್ರಾರ್ಥಿಸಿದರು, ತಾಲೂಕಾ ಯೋಜನಾಧಿಕಾರಿ ಪ್ರಶಾಂತ ಸ್ವಾಗತಿಸಿ ವಂದಿಸಿದರು.

loading...