ಪ್ರಕೃತಿ ವಿಕೋಪ ತಡೆಗಟ್ಟಲು ಪರಿಸರ ರಕ್ಷಣೆ ಅವಶ್ಯ

0
0
loading...

ಕನ್ನಡಮ್ಮ ಸುದ್ದಿ-ಅಳ್ನಾವರ: ಭೂ ಕುಸಿತ ಮತ್ತು ಜಲ ಪ್ರವಾಹಗಳಂತಹ ಪ್ರಕೃತಿ ವಿಕೋಪಗಳನ್ನು ತಡೆಗಟ್ಟಲು ಪರಿಸರ ಸಂರಕ್ಷಣೆ ಅವಶ್ಯ. ಈಚೆಗೆ ಕೇರಳ ರಾಜ್ಯ ಮತ್ತು ಕೊಡುಗು ಜಿಲ್ಲೆಯಲ್ಲಿ ನಡೆದ ಜಲ ಪ್ರಳಯಕ್ಕೆ ಪ್ರಕೃತಿ ನಾಶವೆ ಕಾರಣ ಎಂದು ಹಳಿಯಾಳ ಉಪ ವಿಭಾಗದ ಉಪ ಅರಣ್ಯಾಧಿಕಾರಿ ಡಾ. ಎಸ್‌. ರಮೇಶ ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆಯಲ್ಲಿ ಯುವ ಜನಾಂಗದ ಪಾತ್ರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಮತ್ತು ಜೀವ ಜಗತ್ತು ಪ್ರಪಂಚದ ವಿಶ್ಮಯಕಾರಿ ಅಂಶಗಳು. ಅವುಗಳ ಸಂರಕ್ಷಣೆಯಲ್ಲಿ ಮಹತ್ವವಾದ ಬದಲಾವಣೆ ಕಂಡುಕೊಳ್ಳಲು ಮುಂದಾಗಬೇಕಿದೆ. ಸಾಮಾಜಿಕ ಕಳಕಳಿಯ ಜೊತೆಗೆ ಪರಿಸರಯುಕ್ತ ರಚನಾತ್ಮಕ ಕಾರ್ಯಕ್ರಮಗಳನ್ನು ಜೀವನದುದ್ದಕ್ಕೂ ಬೆಳೆಸಿಕೊಂಡು ಹೋಗಬೇಕು. ನಮ್ಮ ಸಂಸ್ಕೃತಿ, ಪರಿಸರ ರಕ್ಷಣೆಗೆ ಜೀವನ ಮುಡುಪಾಗಿಡಬೇಕು ಎಂದರು.
ಒತ್ತಡದ ಜೀವನದಲ್ಲಿ ಅತ್ಯಮೂಲ್ಯವಾದ ಸಮಯಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಪದವಿ ಶಿಕ್ಷಣದ ಜೊತೆಗೆ ನಿತ್ಯ ಜೀವನದ ಅವಶ್ಯಕತೆಗಳ ಬಗ್ಗೆ ಚಿಂತಿಸಬೇಕು. ತಂತ್ರಜ್ಞಾನದ ಪರಿಕರಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಳ್ಳಬೇಕು. ಮೊಬೈಲ್‌, ಬೈಕ್‌, ವಾಟ್ಸಪ್‌, ಇಂಟರನೆಟ್‌ ಮತ್ತು ಪೇಸಬುಕ್‌ ಚಟುವಟಿಕೆಗಳ ಲೋಕದಲ್ಲಿ ವಿಹರಿಸದೆ ಅದರ ಸದ್ಬಳಕೆ ಮಾಡಿಕೊಂಡು ಕ್ರಮ ಬದ್ದ ಜೀವನ ನಡೆಸಬೇಕು ಎಂದರು.
ಡಾ. ಸಿ.ಎನ್‌. ಹೊಂಬಾಳೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಒಂದು ಗಿಡವನ್ನು ನೆಡುವ ಹವ್ಯಾಸ ರೂಡಿಸಕೊಳ್ಳಬೇಕು. ಕಾಲೇಜಿನ ಆವರಣ ಸದಾ ಹಸರಿಮಯವಾಗಿಸಲು ಪ್ರಯತ್ನ ಮಾಡಬೇಕು, ನಾಡಿನ ಅಮೂಲ್ಯ ಸಂಪತ್ತಾದ ಕಾಡನ್ನು ರಕ್ಷಿಸಲು ಯುವ ಜನಾಂಗ ಮುಂದೆ ಬರುವ ಮೂಲಕ ಪರಿಸರ ರಕ್ಷಣೆಯಲ್ಲಿ ತಮ್ಮದೆ ಆದ ಕೊಡುಗೆ ನೀಡಲು ಸನ್ನದ್ಧರಾಗಬೇಕು ಎಂದರು.
ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಬೇದಾರ, ಡಿ.ಬಿ. ಪಠಾಣ, ಮಾರುತಿ ಬೋರನಹಟ್ಟಿ, ಡಾ. ಸುರೇಶ ದೊಡ್ಡಮನಿ, ಅಶ್ವಿನಿ ನಿಪ್ಪಾಣಿ, ದೇಶಪ್ಪಾ ರಾಠೋಡ, ಸುಶೀಲಾ ಕರ್ಜಗಿ, ಲತಾ ನಾಯಕ, ಮಮತಾ ಭಟ್‌, ಅರುಣ ಬೋಸಲೆ, ಲಕ್ಷ್ಮಣ ನಾಯಕ, ಎಸ್‌.ಬಿ. ಕೋಟಿ, ಅಭಿಷೇಕ ಪಾಟೀಲ, ರಶ್ಮಿ ಬಿಜಾಪೂರ, ಎ.ಎಂ. ಸುತಾರ, ಪಿ.ವೈ. ಕಮ್ಮಾರ ಇದ್ದರು.
ಕಾವೇರಿ ಜಾಧವ ಪ್ರಾರ್ಥಿಸಿದರು, ಸಿದ್ದೇಶ್ವರ ಕಣಬರ್ಗಿ ಸ್ವಾಗತ ಹಾಗೂ ಅಥಿತಿ ಪರಿಚಯ ಮಾಡಿದರು. ಉಮೇಶಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಪಾಲ ಕುರಕುರಿ ನಿರೂಪಿಸಿದರು, ಪಿ.ಆರ್‌. ನಾಗರಾಳ ವಂದಿಸಿದರು.

loading...