ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದವರು ಶರಣರು: ಪ್ರೊ.ಬಸವರಾಜ

0
3
loading...

ಬೆಳಗಾವಿ:ಜಾತಿ ವರ್ಗ ವರ್ಣ ತಾರತಮ್ಯತೆಗಳನ್ನು ತೊಡೆದುಹಾಕಿ ಸಮಾನತೆಯ ತತ್ವವನ್ನು ನೀಡಿದವರು ಹನ್ನೆರಡನೆಯ ಶತಮಾನದ ಶರಣರು. ಸಮಾಜಕ್ಕೆ ಭದ್ರವಾದ ಅಡಿಪಾಯವನ್ನು ಹಾಕುವ ಮೂಲಕ ಗೊಡ್ಡು ಸಂಪ್ರದಾಯಕ್ಕೆ ತೀಲಾಂಜಲಿ ಇತ್ತರು. ಮಾತ್ರವಲ್ಲದಲ್ಲಿ ಮಾನವನ್ನು ಮಹಾದೇವನನ್ನಾಗಿ ರೂಪಿಸಿದರು ಎಂದು ಬಸವರಾಜ ಪುರಾಣಿಕ ಹೇಳಿದರು.
ಶಿವಬಸವನಗರದ ಲಿಂಗಾಯತ ಭವನದಲ್ಲಿ ಅಮವಾಸೆ ಅನುಭಾವ ಗೋಷ್ಠಿಯನ್ನುದ್ದೆÃಶಿಸಿ ‘ಶರಣರ ವೈಚಾರಿಕೆ ಚಿಂತನೆ’ ವಿಷಯದ ಮೇಲೆ ಉಪನ್ಯಾಸ ನೀಡಿದರು. ಬಸವಣ್ಣನವರು ದೇಶದ ಪ್ರಥಮ ವಿಚಾರವಾದಿ, ಸಮಾಜವನ್ನು ಕಟ್ಟುವ ಕಾರ್ಯಮಾಡಿದರು. ಸಮಾಜದಲ್ಲಿ ಬೇರುಬಿಟ್ಟಿದ ಮೌಢ್ಯತೆಗಳನ್ನು ತೊಡದುಹಾಕಲು ಪ್ರಯತ್ನಿಸಿದರು. ಅವರು ರಚಿಸಿರುವ ವಚನಗಳು ವಿಶ್ವ ಸಾಹಿತ್ಯದ ಮಣಿಹಗಳಾಗಿವೆ. ಅಂದು ಅನುಭವ ಮಂಟಪದ ಮೂಲಕ ಜಾತ್ಯಾತೀತ ಹಾಗೂ ವರ್ಣಾತೀತ ಸಮಾಜವನ್ನು ಕಟ್ಟುವ ಕಾರ್ಯಮಾಡಿದರು. ಪ್ರಥಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದರ್ಶಿಸಿದವರೆ ಬಸವಣ್ಣನವರು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಗಾವಿ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ರತ್ನ ಪ್ರಭಾ ಬೆಲ್ಲದ ಅವರು ಶರಣರ ವೈಚಾರಿಕ ಚಿಂತನೆಯು ನಮಗೆ ನಿರಂತರವೂ ಮಾರ್ಗದರ್ಶಿ ಎಂದು ತಿಳಿಸಿದರು.
ವೇದಿಕೆಯ ಮೇಲೆ ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಜಿಲ್ಲಾ ಘಟಕ ಮಹಾಸಭೆಯ ಅಧ್ಯಕ್ಷ ವಾಯ್.ಎಸ್.ಪಾಟೀಲ, ಕೇಂದ್ರ ಮಹಾಸಭೆಯ ಪ್ರಧಾನ ಕಾರ್ಯದರ್ಶಿಗಳ ಕಲ್ಯಾಣರಾವ್ ಮುಚಳಂಬಿ, ಸೋಮಲಿಂಗ ಮಾವಿನಕಟ್ಟಿ ಉಪಸ್ಥಿತರಿದ್ದರು.
ಇದೇಸ ಸಂದರ್ಭದಲ್ಲಿ ಪ್ರೆÃಮಾ ಕೊಂಗಿ, ಪ್ರೊ.ವಿಜಯಲಕ್ಷಿö್ಮÃ ಪುಟ್ಟಿ, ಬಿ.ಎಸ್.ರಾಯಾಜಿ ವಚನಗಾಯನ ಮಾಡಿದರು. ಶುಭಾ ತೇಲಸಂಗ, ಮತ್ತು ಶಂಕರ ಚೊಣ್ಣದ ಪ್ರಾರ್ಥಿಸಿದರು. ಗೀತಾ ಬೆಣಚಿನಮರಡಿ ಸ್ವಾಗತಿಸಿದರು. ಜ್ಯೊÃತಿ ಭಾವೀಕಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಿಸಿದರು. ಡಾ.ಮಹೇಶ ಗುರನಗೌಡರ ವಂದಿಸಿದರು. ಡಾ.ಎಫ್.ವಿ.ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ರಮೇಶ ಕಳಸಣ್ಣವರ, ವಿಜಯ ಕೊಂಗಾನೂರ ಆಗಮಿಸಿದ್ದರು.

loading...