ಪ್ರತಿಭೆ ಹೊರಹಾಕಲು ಸೂಕ್ತ ವೇದಿಕೆ ಅವಶ್ಯ: ರಾಮಣ್ಣ

0
1
loading...

ಕನ್ನಡಮ್ಮ ಸುದ್ದಿ-ಧಾರವಾಡ: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ ಸಂಘಟಿಸುವ ಪ್ರತಿಭಾ ಕಾರಂಜಿ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಹುದುಗಿರುವ ಅನೇಕ ವಿಧದ ಪ್ರತಿಭೆಗಳನ್ನು ಹೊರಹಾಕಲು ಸೂಕ್ತವಾದ ವೇದಿಕೆಯಾಗಿದೆ ಎಂದು ಕಿತ್ತೂರು ಚೆನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಂಕಿನ ಇನಾಂಹೊಂಗಲ ಶಾಖೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ ಹೇಳಿದರು.
ತಾಲೂಕಿನ ಹಾರೋಬೆಳವಡಿ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಸರಕಾರಿ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಅಮ್ಮಿನಬಾವಿ ಕ್ಲಸ್ಟ್‍ರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಈರನಗೌಡ ಕಲ್ಲನಗೌಡರ ಅಧ್ಯಕ್ಷತೆವಹಿಸಿದ್ದರು. ಅಮ್ಮಿನಬಾವಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎನ್. ಸಾವಳಗಿ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಮಹತ್ವ ಕುರಿತು ಮಾತನಾಡಿದರು. ರಾಯಪ್ಪ ಸೊಗಲದ, ಹಾರೋಬೆಳವಡಿ ಗ್ರಾಮ ಪಂಚಾಯತಿ ಸದಸ್ಯರು, ಅಮ್ಮಿನಬಾವಿ ಕ್ಲಸ್ಟರ್ ಭಾಗದ ಎಲ್ಲ ಪ್ರೌಢ ಶಾಲೆಗಳ ಅಧ್ಯಾಪಕರು ಇದ್ದರು. ಮುಖ್ಯಾಧ್ಯಾಪಕಿ ರೇಣುಕಾ ಹೆಗಡಿ ಸ್ವಾಗತಿಸಿದರು. ಆರ್.ಜಿ. ಬಣಕಾರ ನಿರೂಪಿಸಿದರು. ಐ.ಬಿ. ದೇಸಾಯಿ ವಂದಿಸಿದರು.

loading...