ಪ್ರತ್ಯೇಕ ರಾಜ್ಯ ರಚನೆಗೆ ಬಿಜೆಪಿ ಬೆಂಬಲವಿಲ್ಲ: ಶಾಸಕ ಶೆಟ್ಟರ್

0
7
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಪ್ರತ್ಯೇಕ ಉತ್ತರ ಕರ್ನಾಟಕ ಬಂದ್ ಬಿಜೆಪಿ ಪ್ರಾಯೋಜಿತ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರತ್ಯೇಕ ರಾಜ್ಯ ರಚನೆಗೆ ಬಿಜೆಪಿ ಬೆಂಬಲವಿಲ್ಲ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ ಕತ್ತಿ, ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರೀಯಸಿದ ಅವರು, ಅವರ ವೈಯಕ್ತಿಕ ಹೇಳಿಕೆ ವೈಯಕ್ತಿಕ ಆ ವಿಷಯ ನನಗೆ ಕೇಳಿದರ ಹೇಗೆ. ಅವರು ಸಹ, ಅಭಿವೃದ್ಧಿಯಲ್ಲಿ ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಈಡಬೇಕಾಗುತ್ತದೆ ಎಂದಿದ್ದಾರೆ, ಎಂದರು. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಡಾ.ಡಿ.ಎಂ. ನಂಜುಂಡಪ್ಪ ಅವರ ವರದಿ ಪ್ರಕಾರ ಅನುದಾನ ನೀಡಲು ಆರಂಭಿಸಿದ್ದೇ ಯಡಿಯೂರಪ್ಪ ಅವರು. ಸುವರ್ಣಸೌಧ ನಿರ್ಮಾಣವೂ ಅವರೇ ಆರಂಭಿಸಿದ್ದರು. ಐಐಟಿಯನ್ನು ಈ ಭಾಗಕ್ಕೆ ತಂದವರು ಯಾರು ಎಂದು ನೇರವಾಗಿ ಪ್ರಶ್ನಿಸಿದರು. ‘ರಾಜ್ಯದಲ್ಲಿ ಬಹುತೇಕ ಆಡಳಿತ ನಡೆಸಿದ್ದು ಕಾಂಗ್ರೆಸ್ ಪಕ್ಷ. ಅವರೇ ನಿರ್ಲಕ್ಷ್ಯ ಮಾಡಿದ್ದಾರೆ. ಕಾಂಗ್ರೆಸ್‍ದಿಂದ ಮುಖ್ಯಮಂತ್ರಿಗಳಾಗಿದ್ದವರು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದನ್ನು ಮೊದಲು ಒಪ್ಪಿಕೊಳ್ಳಲಿ’ ಎಂದರು.

loading...