ಪ್ರದೀಪ ಗೀರಗಾಂವ ಮೇಲೆ ಹಲ್ಲೆ ಖಂಡಿಸಿ: ಪ್ರತಿಭಟನೆ

0
17
loading...

ಇಂಡಿ: ವಿಜಯಪುರದಲ್ಲಿ ಅ.27 ರಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಪ್ರದೀಪ ಗಿರಗಾಂವಕರ ಅವರ ಮೇಲೆ ಪೊಲೀಸ್‌ ಸರ್ಕಲ್‌ ಇನ್ಸೆಪೇಕ್ಟರ್‌ ಶಂಕರಗೌಡ ಹಾಗೂ ಸಿಬ್ಬಂದಿ ವರ್ಗದವರು ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಖಂಡಿಸಿ ಇಂಡಿ ಸರಾಫ ಮಾಲೀಕರು ಮಂಗಳವಾರ ಅಂಗಡಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯು ನಗರದ ಸರಾಫ ಬಜಾರದಿಂದ ಮೆರವಣಿಗೆಯನ್ನು ಹೊರಟು ಪಟ್ಟಣದ ನಾನಾ ವೃತ್ತಗಳ ಮುಖಾಂತರ ಮಿನಿ ವಿಧಾನಸೌಧದಲ್ಲಿ ಸಭೆಯಾಗಿ ಮಾರ್ಪಟ್ಟಿತು. ಈ ಸಭೆಯ ನೇತೃತ್ವವನ್ನು ತಾಲೂಕು ಸರಾಫ ಸಂಘದ ಅಧ್ಯಕ್ಷ ಸೋಮನಗೌಡ ಬಿರಾದಾರ ಮಾತನಾಡಿ ವಿಜಯಪುರದಲ್ಲಿ ಸರಾಫ ಮಾಲೀಕರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದಾರೆ. ಅಂತಹ ಪೊಲೀಸ್‌ ಅಧಿಕಾರಿಯನ್ನು ಕಾನೂನಿ ಕ್ರಮ ಕೈಕೊಳ್ಳಬೇಕು ಹಾಗೂ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಉಪ ತಹಶೀಲ್ದಾರ ಎ.ಎಂ ಗಲಗಲಿ ಅವರಿಗೆ ತಾಲೂಕು ಸಂಘದ ಅಧ್ಯಕ್ಷ ಸೋಮನಗೌಡ ಬಿರಾದಾರ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ರಮೇಶ ಪೋದ್ದಾರ, ಎ.ಜಿ. ಪೋದ್ದಾರೆ, ಗಂಗಾಧರ ಬಡೀಗೇರ, ಶೀರು ಬಡಿಗೇರ, ಶ್ರೀಶೈಲ ಅರ್ಜುಣಗಿ, ನಾಮದೇವ ಡಾಂಗೆ, ಸುಜಿತಕುಮಾರ ಲಾಳಸಂಗಿ, ವಿಜಯಕುಮಾರ ಮಹೀಂದ್ರಕರ, ನಾಗೇಂದ್ರ ಪತ್ತಾರ, ವೇಂಕಟೇಶ ಪತ್ತಾರ, ಎನ್‌.ಎಸ್‌, ಬಡೀಗೇರ, ಎಂಎ. ಪತ್ತಾರ, ಆರ್‌.ಎಂ ಪತ್ತಾರ, ಎಸ್‌.ಆರ್‌. ಪೋದ್ದಾರ, ಎಸ್‌.ಎಂ ಮಣೂರ, ಜಿ.ಬಿ. ಚೌಹಾಣ, ಎಸ್‌.ಎ. ಚಾಕೂರ ಸೇರಿದಂತೆ ನೂರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು.

loading...