ಪ್ರವಚನದಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ: ಸಚಿವ ಮನಗೂಳಿ

0
9
dav
loading...

 

ನಿಡಗುಂದಿ: ವಿದ್ಯೆ, ಒಳ್ಳೆಯ ಸಂಸ್ಕಾರ ಇವರೆಡು ಜನರನ್ನು ಮಾನವರನ್ನಾಗಿ ರೂಪಿಸುತ್ತವೆ, ವಿದ್ಯೆ ಶಿಕ್ಷಣದಿಂದ ದೊರೆತರೆ, ಸಂಸ್ಕಾರ ಹಿರಿಯರ ಇರುವಿಕೆ, ಪ್ರವಚನ ಧರ್ಮದಿಂದ ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು.
ಪಟ್ಟಣದ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ, ವಿವಿಧ ಸಂಘಟನೆಗಳು ನೀಡಿದ ಸನ್ಮಾನ ಸ್ವಿÃಕರಿಸಿ ಅವರು ಮಾತನಾಡಿದರು. ಪುರಾಣ, ಪ್ರವಚನದಿಂದ ನಮಗೆ ಉತ್ತಮ ಸಂಸ್ಕಾರ ದೊರೆಯುತ್ತದೆ, ಶರಣರ ನುಡಿಗಳನ್ನು ಕೇಳುವುದು ಅಗತ್ಯ, ಇವು ಮಾನವನ್ನಾಗಿ ರೂಪಿಸುತ್ತವೆ ಎಂದರು. ಶುದ್ಧ ಮನಸ್ಸಿದ್ದರೇ, ಒಳ್ಳೆಯ ಆಲೋಚನೆಗಳು ಬರುತ್ತವೆ ಎಂದರು.

ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಒಂದು ಕೋಣೆ ಕಟ್ಟಲು ೩ ಲಕ್ಷ ರೂ ಅನುದಾನ ನೀಡುವ ಭರವಸೆಯನ್ನು ಸಚಿವರು ನೀಡಿದರು. ಸುಸಜ್ಜಿತ ಕೋಣೆ ನಿರ್ಮಿಸಿ, ಇಲ್ಲಿಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು.
ಬೇಡಿಕೆಗೆ ಆಗ್ರಹ: ಪಟ್ಟಣ ತಾಲ್ಲೂಕು ಕೇಂದ್ರವಾಗಿದ್ದು, ಇನ್ನೂ ಯಾವುದೇ ಕಚೇರಿಗಳು ಆರಂಭಗೊಂಡಿಲ್ಲ, ತಾಲ್ಲೂಕಿಗೆ ಸೇರ್ಪಡೆಗೊಂಡ ಮುದ್ದೆÃಬಿಹಾಳ ತಾಲ್ಲೂಕಿನ ಹಲವಾರು ಗ್ರಾಮಗಳು ನಿಡಗುಂದಿ ತಹಶೀಲ್ದಾರ್ ಕಚೇರಿಗೆ ಇನ್ನೂ ಸೇರಿಲ್ಲ, ಪಟ್ಟಣಕ್ಕೆ ಬಸ್ ಡಿಪೋ ಮಂಜೂರು ಮಾಡಬೇಕು, ಬಿಇಓ ಹಾಗೂ ಎಪಿಎಂಸಿ ಆರಂಭಿಸಬೇಕು, ನಿಡಗುಂದಿ ಪಟ್ಟಣದಲ್ಲಿ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಕಚೇರಿ ಆರಂಭಿಸಬೇಕು, ಕೈಮಗ್ಗ ನೇಕಾರರ ವಸತಿ ನಿಲಯ ಆರಂಭಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಅವಟಿ, ನಾಗರಿಕರ ಪರವಾಗಿ ಸಚಿವರಿಗೆ ಮನವಿ ಅರ್ಪಿಸಿದರು.

ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೆÃನೆ ಎಂದು ಸಚಿವ ಮನಗೂಳಿ ಭರವಸೆ ನೀಡಿದರು.
ಬಿಎಂಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ನಾಗರಬೆಟ್ಟ ಸಚಿವರನ್ನು ಸನ್ಮಾನಿಸಿದರು. ಜೆಡಿಎಸ್ ಮುಖಂಡ ಶಿವನಗೌಡ ಬಿರಾದಾರ, ಸೋಮಶೇಖರ ಬಿರಾದಾರ, ಶಿವಾನಂದ ಅವಟಿ, ಪಟ್ಟಣ ಪಂಚಾಯಿತಿ ಸದಸ್ಯ ಶಂಕರ ರೇವಡಿ, ಬಸವರಾಜ ಕುಂಬಾರ, ಸಂಗಣ್ಣ ಕೋತಿನ, ರಮೇಶ ರೇಶ್ಮಿ, ತಹಶೀಲ್ದಾರ್ ಎಂ.ಬಿ. ನಾಗಠಾಣ ಸೇರಿದಂತೆ ಇತರರು ಇದ್ದರು.

ವಿವಿಧ ಸಂಘ ಸಂಸ್ಥೆಗಳು ಸಚಿವರನ್ನು ಸನ್ಮಾನಿಸಿದರು. ಸೋಮಶೇಖರ ನಾಗರಬೆಟ್ಟ ಸ್ವಾಗತಿಸಿದರು. ರಾಜನಾಳ ನಿರೂಪಿಸಿದರು. ಸಂಗಮೇಶ ರೂಡಗಿ ವಂದಿಸಿದರು.

loading...