ಪ್ರಾಮಾಣಿಕ ಸೇವೆಗೆ ತಕ್ಕ ಪ್ರತಿಫಲ ಇರುತ್ತದೆ: ಶಾಸಕ ಬಸನಗೌಡ ಯತ್ನಾಳ

0
3
loading...

ವಿಜಯಪುರ : ರಾಜಕೀಯದಲ್ಲಿ ಜಿರೋ ಆಗಿದ್ದ ನಾನು ಮತ್ತೊಮ್ಮೆ ಹಿರೋ ಆಗಿ ನಿಮ್ಮ ಮುಂದೆ ನಿಂತುಕೊಂಡಿದ್ದೆÃನೆ. ಇದಕ್ಕೆಲ್ಲಾ ಆರಾಧ್ಯದೈವ ಶ್ರಿÃಸಿದ್ದೆÃಶ್ವರ ಹಾಗೂ ನಡೆದಾಡುವ ದೇವರು ಶ್ರಿÃಸಿದ್ದೆÃಶ್ವರ ಮಹಾಸ್ವಾಮಿಗಳ ಆಶೀರ್ವಾದವೇ ಕಾರಣ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದಲ್ಲಿ ಶ್ರಿÃ ವಜ್ರಹನುಮಾನ ದೇವಾಲಯದ ಉದ್ಘಾಟನಾ ಹಾಗೂ ಮೂರ್ತಿ ಪ್ರತಿಷ್ಠಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿರೋ ಆಗಿದ್ದ ನಾನು ಮತ್ತೊಮ್ಮೆ ರಾಜಕೀಯದಲ್ಲಿ ಹಿರೋ ಆಗಿದ್ದೆÃನೆ. ಸಿದ್ದೆÃಶ್ವರ ಸಂಸ್ಥೆಯ ಮೂಲಕ ಸಿದ್ದೆÃಶ್ವರನ ಸೇವೆಯನ್ನು ಪ್ರಾಮಾಣಿಕತೆಯಿಂದಾಗಿ ಮಾಡಿದ ಫಲವಾಗಿ ನನಗೆ ರಾಜಕೀಯ ಪುನರ್‌ಜನ್ಮ ದೊರಕಿದೆ. ಪ್ರಾಮಾಣಿಕ ಸೇವೆಗೆ ತಕ್ಕದಾದ ಪ್ರತಿಫಲ ಇದ್ದೆÃ ಇರುತ್ತದೆ ಎಂದರು.

ವಿಜಯಪುರ ನಗರವನ್ನು ಮಾದರಿ ಕ್ಷೆÃತ್ರವನ್ನಾಗಿ ರೂಪಿಸುವ ಸಂಕಲ್ಪ ಮಾಡಿದ್ದೆÃನೆ. ನನ್ನ ಮೇಲೆ ವಿಶ್ವಾಸ ವಿರಿಸಿ ಜನಸೇವೆ ಮಾಡುವ ಆಶೀರ್ವಾದ ಮಾಡಿದ್ದಿÃರಿ, ಒಳ್ಳೆಯ ಕಾರ್ಯ ಕೈಗೊಂಡು ನೀವೇ ಹೆಮ್ಮೆ ಹಾಗೂ ಅಭಿಮಾನ ಪಡುವ ರೀತಿಯಲ್ಲಿ ಕಾರ್ಯ ಮಾಡಿ ನಿಮ್ಮ ವಿಶ್ವಾಸ ಉಳಿಸಿಕೊಳ್ಳುತ್ತೆÃನೆ ಎಂದರು.
ಪ್ರತಿಯೊಂದು ವಾರ್ಡ್ನಲ್ಲಿ ಖಾಲಿ ಇರುವ ಜಾಗೆಯನ್ನು ಗುರುತಿಸಿ ಆ ಜಾಗೆಯಲ್ಲಿ ವಾಕಿಂಗ್ ಟ್ರಾö್ಯಕ್, ಯೋಗಾ ಪ್ಲಾಟ್‌ಫಾರ್ಮ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ ಜಾಗ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದರು.

ಜ್ಞಾನಯೋಗಾಶ್ರಮದ ಶ್ರಿÃ ಸಿದ್ದೆÃಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಾನಿಧ್ಯ ವಹಿಸಿದ್ದ ಬ್ಯಾಡಗಿಹಾಳದ ಶ್ರಿÃ ಸಿದ್ಧರಾಮ ಮಹಾಸ್ವಾಮಿಗಳು ಆಶೀವರ್ಚನ ನೀಡಿದರು. ಜ್ಯೊÃತಿಷಿ ಕಿರಣ ಜೋಶಿ, ಹಿರಿಯ ಮುಖಂಡ ಶಿವಶರಣಗೌಡ ಪಾಟೀಲ, ಪಾಲಿಕೆ ಸದಸ್ಯರಾದ ಉಮೇಶ ವಂದಾಲ, ಪ್ರೆÃಮಾನಂದ ಬಿರಾದಾರ, ದೇವಾಲಯ ಸಮಿತಿ ಅಧ್ಯಕ್ಷ ಪಾಂಡುಸಾಹುಕಾರ ದೊಡಮನಿ ಉಪಸ್ಥಿತರಿದ್ದರು.

loading...