ಪ್ರಿಯಾಂಕ ಕುರಿತು ಮೌನ ಮುರಿದ ಸಲ್ಮಾನ್ ಖಾನ್

0
3
loading...

ಸಲ್ಮಾನ್ ಖಾನ್ ನಟಿಸುತ್ತಿರುವ ಭಾರತ್ ಚಿತ್ರದ ಚಿತ್ರಿÃಕರಣ ಆರಂಭವಾಗಿದೆÉ. ಸಲ್ಮಾನ್ ಖಾನ್ ಮೊದಲ ಶೆಡ್ಯೂಲ್ ಈಗಾಗಲೇ ಮುಗಿಸಿದ್ದಾರೆ. ಲವ್ ರಾತ್ರಿ ಚಿತ್ರದ ಟ್ರೆöÊಲರ್ ಬಿಡುಗಡೆಗೆ ಬಂದಿದ್ದ ಸಲ್ಮಾನ್ ಖಾನ್, ಭಾರತ್ ಬಿಟ್ಟ ಪ್ರಿಯಾಂಕ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಿಯಾಂಕ ಬಗ್ಗೆ ನನಗೆ ಖುಷಿಯಿದೆ. ಪ್ರಿಯಾಂಕ ಹಾಲಿವುಡ್ ನ ದೊಡ್ಡ ಚಿತ್ರಕ್ಕೆ ಸಹಿ ಹಾಕಿದ್ದೇನೆಂದು ಮೊದಲೇ ಹೇಳಬೇಕಿತ್ತು. ಶೂಟಿಂಗ್ ಶುರುವಾಗಲು ೧೦ ದಿನವಿರುವಾಗ ಹೇಳಿದ್ದು, ಸ್ವಲ್ಪ ಕಷ್ಟವಾಯ್ತು. ಆದ್ರೆ ಸಮಯಕ್ಕೆ ಸರಿಯಾಗಿ ಭಾರತ್ ಚಿತ್ರದ ಶೂಟಿಂಗ್ ಶುರುವಾಗಿದೆ ಎಂದು ಸಲ್ಮಾನ್ ಹೇಳಿದ್ದಾರೆ.
ಪ್ರಿಯಾಂಕ ನಮ್ಮ ಮನೆಗೆ ಬಂದಿದ್ರು. ಸಿನಿಮಾದಲ್ಲಿ ನಟಿಸಲ್ಲ ಎಂದು ನನ್ನ ಬಳಿ ಹೇಳಿದ್ರು. ಸಲ್ಮಾನ್ ಜೊತೆ ಕೆಲಸ ಮಾಡಲು ಇಷ್ಟವಿಲ್ಲವೆಂದ್ರೆ ಏನೂ ತೊಂದರೆಯಿಲ್ಲ ಎಂದಿದ್ದೆ. ಆಗ ಪ್ರಿಯಾಂಕ ಹೇಳಿದ ಕಾರಣ ಬೇರೆಯಿತ್ತು. ಈಗ ಬೇರೆ ಕಾರಣ ಎಂಬುದು ಗೊತ್ತಾಗಿದೆ. ಬೇಸರವಿಲ್ಲ. ಸಲ್ಮಾನ್ ಖಾನ್ ಬದಲು ಹಾಲಿವುಡ್ ದೊಡ್ಡ ನಟನ ಜೊತೆ ನಟಿಸಲು ಪ್ರಿಯಾಂಕ ಮುಂದಾಗಿದ್ದಾಳೆ. ಇದು ಖುಷಿ ವಿಷ್ಯ ಎಂದು ಸಲ್ಮಾನ್ ಹೇಳಿದ್ದಾರೆ.

loading...