ಪ.ಪಂ ಪ್ರಗತಿ ಪರಿಶಿಲನಾ ಸಭೆ

0
8
loading...

ಆಲಮೇಲ: ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ.ಪಂ. ಸದಸ್ಯರ ಮಾತಿನ ಚಕಮಕಿಯಲ್ಲಿ ಆಲಮೇಲ ಪಟ್ಟಣದ ಅಭಿವೃದ್ಧಿ ನಗರೋತ್ತಾನ 3 ನೇ ಯೋಜನೆಯಲ್ಲಿ ಬಿಡುಗಾಡೆಯಾದ 4.25 ಕೋಟಿ ಕಾಮಗಾರಿಗೆ ಮುಂಜೂರಾತಿ ನೀಡಲಾಯಿತು.
ಪ್ರಗತಿ ಪರೀಶಿಲನಾ ಸಭೆ ಆರಂಭಗೊಳ್ಳುತ್ತಿದಂತೆ ಸಭೆಯಲ್ಲಿ ಗ್ರಾಮದ ಸಾರ್ವಜನಿಕರು ಸಭೆಗೆ ಆಗಮಿಸಿ ಕೆಲ ಹೊತ್ತು ಗದ್ದಲ ಆರಂಭಿಸಿದರು ಇದಕ್ಕೆ ಪ್ರತಿಕ್ರೀಯಿಸಿದ ಸಚಿವರು ಮೊದಲು ಸಾರ್ವಜನಿಕರ ಅಹ್ವಾಲಗಳೇನೆ ಇದ್ದರು ಕೊಡಿ ನಂತರ ನಾನು ಪ್ರಗತಿ ಪರೀಶಿಲನಾ ಸಭೆ ನಡೆಸುತ್ತನೆ ಎಂದು ಅವ್ಹಾಲು ಸ್ವಿಕರಿಸಿದ್ದರು. ಉಪ ತಶೀಲ್ದಾರ ಅವರಿಗೆ ರೈತರಿಗೆ ತೊಂದರೆಯಾಗದಂತೆ ಸುತ್ತಮುತ್ತಳಿತ ನಾಲವತ್ತು ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳು, ಮತ್ತು ಸರ್ಕಲ್‌ ಮತ್ತು ಸರ್ವೆಯರಗಳು ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದರು.
ನಂತರ ಪಟ್ಟನದ ಅಭಿವೃದ್ಧಿಯ ಬಗ್ಗೆ ಸದಸ್ಯರೊಂದಿಗೆ ಮಾತನಾಡಿ ಪಟ್ಟಣದ ಅಭಿವೃದ್ಧಿಗೆ ನಗರೋತ್ತಾನ ಪೇಸ 3 ರಡಿಯಲ್ಲಿ 4.25 ಲಕ್ಷರೂ ಅನುಧಾನ ಬಂದಿದ್ದು ಪಟ್ಟಣಕ್ಕೆ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಹಲವು ಯೋಜನೆಗೆ ಈ ಹಣವನ್ನು ಬಳಸಿಕೊಳ್ಳಬಹುದು ಎಂದ ಸಚಿವರು ಸರ್ವ ಸದಸ್ಯರು ಕುಡಿಯುವ ನೀರಿಗಾಗಿ ಶೇ.40 ಮತ್ತು ರಸ್ತೆ ಚರಂಡಿ ಅಬಿವೃದ್ಧಿಗೆ 60 ರಷ್ಟು ಹಣ ಕರ್ಚು ಮಾಡಬೇಕೆಂದಾಗ ಸಚಿವರು ಒಪ್ಪಿಗೆ ಸೂಚಿಸಿದರು.
ಪಟ್ಟಣದ ಅಬಿವೃದ್ಧಿಗೆ ಪಟ್ಟಣದಿಂದ ಇದ್ಗಾ ಮೈದಾನದವರೆಗೆ ಸಿಸಿ ರಸ್ತೆ ಮತ್ತು ದೇವರ ಅಗಸಿಯಿಂದ ಕಡಣಿ ಅಗಸಿವರೆಗೆ ಸಿಸಿ ಮತ್ತು ದೇವಣಗಾಂವ ಅಗಸಿಯಿಂದ ಪ.ಪಂ.ವರೆಗೆ ಸಿಸಿ ರಸ್ತೆ ಮತ್ತು ನಗರದ ಸೌಂದರ್ಯಕ್ಕಾಗಿ ಬಸ್‌ಸ್ಟ್ಯಾಂಡ ಸರ್ಕಲದಿಂದ ಇಂಡಿ ರಸ್ತೆ ಮತ್ತು ದೇವಣಗಾಂವ ರಸ್ತೆಗೆ ಬೀದಿ ದ್ವೀಪ್‌ ಅಳವಡಿಕೆ ಮತ್ತು ಕರೆ ಅಭಿವೃದ್ದಿ ಸೇರಿದಂತೆ ಹಲವಾರು ಅಬಿವೃದ್ಧಿ ಕಾಮಗಾರಿ ಮಾಡಬೇಕೆಂಬ ಯೊಜನೆಯಿದೆ, ಮಹಿಳೆಯರ ಸಾರ್ವಜನಿಕ ಶೌಚಯಕ್ಕಾಗಿ ತಗಡಿನ ಶೌಚಾಲಯ ನಿರ್ಮಾಣ ಮಾಡಲಾಗವದು ಎಂದರು.

loading...